ಅನಿಲ್ ಕುಂಬ್ಳೆ ಈ ಮಾತು ಕೇಳಿ ಕಣ್ಣೀರು ಹಾಕಿದ ಅಪ್ಪು ಮಕ್ಕಳು

By Infoflick Correspondent

Updated:Thursday, June 23, 2022, 09:27[IST]

ಅನಿಲ್ ಕುಂಬ್ಳೆ ಈ ಮಾತು ಕೇಳಿ ಕಣ್ಣೀರು ಹಾಕಿದ ಅಪ್ಪು ಮಕ್ಕಳು

ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್  (Shivarajkumar) ಅಭಿನಯದ 125ನೇ ಚಿತ್ರ ವೇದಾ ಸಿನಿಮಾದ ಮೋಷನ್ ಪೋಸ್ಟರ್​ ರಿಲೀಸ್ ಆಗಿದೆ. ವಿಶೇಷ ಕಾರ್ಯಕ್ರಮ ಜರುಗಿದೆ. ಈ  ಕಾರ್ಯಕ್ರಮದಲ್ಲಿ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಂದಿದ್ದರು. ಅಣ್ಣಾವ್ರ ಕುಟುಂಬದ ಆಪ್ತರಲ್ಲಿ ಒಬ್ಬರಾಗಿರುವ ಕುಂಬ್ಳೆ ಅವರನ್ನು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಅಣ್ಣಾವ್ರ ಕುಟುಂಬ ಜೊತೆಯಾಗಿ ಕಾಣಿಸಿಕೊಂಡಿದ್ದು ವಿಶೇಷ. ಅದರಲ್ಲೂ ಡಾ ರಾಜ್ ಕುಮಾರ್ ಮೊಮ್ಮಕ್ಕಳು ಶಿವಣ್ಣ ಅವರೊಂದಿಗೆ ಸ್ಟೇಜ್​ನಲ್ಲಿ ಜೊತೆಯಾಗಿದ್ದರು. ಎಲ್ಲರೂ ಇದ್ದರೂ ಅಲ್ಲಿ ಅಭಿಮಾನಿಗಳ ದೇವರು ಅಪ್ಪು ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದರು.

ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಂಬ್ಳೆ, ಡಾ ರಾಜ್ ಕುಮಾರ್ ಅವರ ಕುಟುಂಬದ ಎಲ್ಲಾ ಸದಸ್ಯರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರೆಲ್ಲರಿಗೂ ಕ್ರಿಕೆಟ್ ಎಂದರೆ ತುಂಬಾ ಪ್ರೀತಿ. ಅದರಲ್ಲೂ ಕರ್ನಾಟಕದ ಆಟಗಾರರ ಮೇಲೆ ತುಂಬಾ ವಾತ್ಸಲ್ಯ ತೋರಿಸುತ್ತಾರೆ. ಬೆಂಗಳೂರಿನಲ್ಲಿ ಮ್ಯಾಚ್ ಆಗುವಾಗ ಅಪ್ಪು, ಶಿವಣ್ಣ ಎಲ್ಲರೂ ಬರುತ್ತಿದ್ದರು. ನಾನು ಕೂಡ ಜಾವಗಲ್ ಶ್ರೀನಾಥ್ ಅವರೊಂದಿಗೆ ಡಾ ರಾಜ್ ಕುಮಾರ್ ಅವರನ್ನು ನೋಡಲು ಹೋಗಿದ್ವಿ. ಅಂದು ಫೋನ್ ಏನು ಇರಲಿಲ್ಲ. ಜಸ್ಟ್ ಮನೆಗೆ ಹೋಗಿ ನಾವು ಬಂದ್ವಿ ಎಂದಷ್ಟೇ ತಿಳಿಸಿದ್ದೆವು. ಅವರು ಆಗ ನಮ್ಮನ್ನು ತುಂಬಾ ಗೌರವದೊಂದಿಗೆ ಬರ ಮಾಡಿಕೊಂಡಿದ್ದರು ಎಂದು ಇದೇ ವೇಳೆ ಕುಂಬ್ಳೆ ಸ್ಮರಿಸಿದರು.

ನಾನು ಅನಂತ್​ ನಾಗ್​ ಅವರ ಅಭಿಮಾನಿ, ಇದೀಗ ಅವರು ಕೂಡ ಈ ಕಾರ್ಯಕ್ರಮದಲ್ಲಿದ್ದಾರೆ. ಹೀಗಾಗಿ ನಾನು ಸಹ ಫ್ಯಾನ್ ಬಾಯ್​ ಆಗಿ ಇಲ್ಲಿ ನಿಂತಿದ್ದೇನೆ ಎಂದು ಅನಿಲ್ ಕುಂಬ್ಳೆ (Anil Kumbale) ತಿಳಿಸಿದರು.


ಶಿವಣ್ಣ ನನಗೆ ಗೀತಾ ಪಿಕ್ಚರ್ಸ್ ಲಾಂಚ್ ಆಗುತ್ತಿದೆ ಎಂದು ಕರೆದಿದ್ದರು. ಆದರೆ ಇದೇ ವೇಳೆ ದುರಾದೃಷ್ಟವಶಾತ್ ಅಪ್ಪು ನಮ್ಮನ್ನು ಅಗಲಿದರು. ಅಂದು ಶಿವಣ್ಣ ಕರೆ ಮಾಡಿದಾಗ ಪುನೀತ್ ರಾಜ್ ಕುಮಾರ್ ಕೂಡ ಇದ್ದರು. ಈಗ ಅವರು ಅಗಲಿದರೂ ನಮ್ಮ ಜೊತೆಯೇ ಇದ್ದಾರೆ ಎಂದು ಅನಿಲ್ ಕುಂಬ್ಳೆ ಭಾವುಕರಾದರು. ಕುಂಬ್ಳೆ ಮಾತಿಗೆ ಅಲ್ಲಿದ್ದ ಜನರು ಪುನೀತ್ ಮಕ್ಕಳು ರಾಜಕುಮಾರ್ ಕುಟುಂಬದವರು ಕಣ್ಣೀರು ಹಾಕಿದರು.

VIDEO CREDIT : M3 YOUTUBE CHANNEL