ಜೊತೆಜೊತೆ ಧಾರಾವಾಹಿಯಿಂದ ನಟ ಅನಿರುದ್ಧ್ ಔಟ್? ದಿಢೀರ್ ಬದಲಾವಣೆಗೆ ಕಾರಣವೇನು

By Infoflick Correspondent

Updated:Friday, August 19, 2022, 16:50[IST]

ಜೊತೆಜೊತೆ ಧಾರಾವಾಹಿಯಿಂದ ನಟ ಅನಿರುದ್ಧ್ ಔಟ್? ದಿಢೀರ್ ಬದಲಾವಣೆಗೆ ಕಾರಣವೇನು

ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾದ ಧಾರಾವಾಹಿಗಳಲ್ಲಿ 'ಜೊತೆಜೊತೆಯಲಿ' ಕೂಡ ಒಂದು. ಜೀ ಕನ್ನಡದಲ್ಲಿ ಹಲವು ದಿನಗಳಿಂದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರವಾಗುತ್ತಿದೆ.  ಜೊತೆ ಜೊತೆಯಲಿ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ನಟ ಅನಿರುದ್ಧ್ ಹೊರ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ತೆಗೆದು ಹಾಕಲು ಧಾರಾವಾಹಿ ನಿರ್ಮಾಪಕರೂ ಆಗಿರುವ ಆರೂರು ಜಗದೀಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅನಿರುದ್ಧ್ ವರ್ತನೆ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘಕ್ಕೂ ದೂರು ಹೋಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕನ್ನಡ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಯುತ್ತಿದೆ ಅಂತ ಮೂಲಗಳು ತಿಳಿಸಿವೆ.   

ಜೊತೆಜೊತೆಯಲಿ' ಧಾರಾವಾಹಿ ಮೂಲಕ ಆರ್ಯವರ್ಧನ್ ಅಂತಲೇ ಜನಪ್ರಿಯವಾಗಿರುವ ಅನಿರುದ್ಧ್ ಹಾಗೂ ತಂಡದ ನಡುವೆ ಮೊದಲಿನಿಂದಲೂ ವೈಮಸ್ಸು ಇತ್ತು ಎನ್ನಲಾಗಿದೆ.ಅನಿರುದ್ಧ್ ಮೇಲೆ ಸತತ ಆರೋಪಗಳು ಕೇಳಿ ಬಂದಿವೆ ಎನ್ನಲಾಗಿದೆ. ಮುಖ್ಯವಾಗಿ ಧಾರಾವಾಹಿ ಜನಪ್ರಿಯವಾದಂತೆ ಅನಿರುದ್ಧ್ ವರಸೆಗಳು ಬದಲಾದವು ಅಂತ ಬಲ್ಲವರು ಹೇಳುತ್ತಾರೆ. ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿ, ಆ ರೀತಿ ಮಾಡೋದಿಲ್ಲ ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದರು ಅಂತ ಹೇಳಲಾಗುತ್ತಿದೆ.

ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ತಂಡ ಒಪ್ಪದೇ ಇದ್ದಾಗ, ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರನಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದೂ ಕೂಡ ಶೂಟಿಂಗ್ ಸಮಯದಲ್ಲಿ ಅನಿರುದ್ದ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೈರೆಕ್ಟರ್ ಹೇಳಿದಂತೆ ಕೇಳದೇ, ನಾನು ಈ ರೀತಿ ಆಯಕ್ಟ್ ಮಾಡೋದಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. 

ಅನಿರುದ್ಧ್ ಈ ಹಿಂದೆ ಕೂಡ ಎರಡು ಮೂರು ಬಾರಿ ಶೂಟಿಂಗ್ ಮಾಡುವುದಿಲ್ಲವೆಂದು ಹೊರಹೋಗಿದ್ದರು. ಬಳಿಕ ಚಿತ್ರತಂಡ ಹಾಗೂ ಜೀ ಕನ್ನಡ ವಾಹಿನಿ ಅವರನ್ನು ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ, ಈ ಬಾರಿಗೆ ಮುನಿಸಿಕೊಂಡು ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೊರಟಿದ್ದರಿಂದ 'ಜೊತೆ ಜೊತೆಯಲಿ' ತಂಡ ಅವರನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ.