1300 ಕೋಟಿ ಮಾಲಿಕ ನಾನು ನನಗೆ ಒಂದು ಬೆಂಜ್ ಕಾರ್ ಬೇಡವಾ ? ಎಂದು ನಟ ಅನಿರುದ್ದ್ ಹೇಳಿದ್ದೇನು

By Infoflick Correspondent

Updated:Saturday, August 20, 2022, 19:08[IST]

1300 ಕೋಟಿ ಮಾಲಿಕ ನಾನು ನನಗೆ ಒಂದು ಬೆಂಜ್ ಕಾರ್ ಬೇಡವಾ ? ಎಂದು ನಟ ಅನಿರುದ್ದ್ ಹೇಳಿದ್ದೇನು

ನಟ ಅನಿರುದ್ಧ್ ಅವರನ್ನು 'ಜೊತೆ ಜೊತೆ' ಧಾರಾವಾಹಿಯಿಂದ ಹೊರಗೆ ಇಡಲಾಗಿದೆ. ಈ ಬಗ್ಗೆ ಅನಿರುದ್ಧ್​ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.  ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಅವರ ಆರೋಪಗಳಿಗೆ ನಟ ಅನಿರುದ್ಧ್ ಜತ್ಕಾರ್ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.   

ಈ ಕುರಿತು ಮಾತನಾಡಿರುವ ನಟ ಅನಿರುದ್ಧ್, ಜೊತೆ ಜೊತೆಯಲಿ ಧಾರವಾಹಿ ತಂಡ ನನ್ನ ಕುಟುಂಬ ಇದ್ದಂತೆ. ಕಿರುತೆರೆ ಲೋಕದಲ್ಲಿ ಹಲವು ದಾಖಲೆಗಳನ್ನು ಮಾಡಿರುವ ಧಾರಾವಾಹಿ. ನನಗೆ ಹೆಸರು ತಂದು ಕೊಟ್ಟಿರುವ ಧಾರಾವಾಹಿ. ಆದರೀಗ ನಿರ್ದೇಶಕರು ಹಾಗು ನಿರ್ಮಾಪಕರ ಬಗ್ಗೆ ಮಾತನಾಡುವ ಪರಿಸ್ಥಿತಿ ಬಂದಿದೆ. ಜಗದೀಶ್ ಅವರು ಮಾಡಿರುವ ಆರೋಪಕ್ಕೆ ನಾನು ಮಾಧ್ಯಮಗಳ ಮುಂದೆ ಕುಳಿತು ಉತ್ತರ ಕೊಡುವ ಸಂದರ್ಭ ಬಂದಿದೆ. ನಾನು ಧಾರಾವಾಹಿ ಚೆನ್ನಾಗಿ ಮೂಡಿ ಬರಲಿ ಅಂತಾ ಕೆಲ ಸಲಹೆಗಳನ್ನು ಕೊಟ್ಟಿದ್ದೆ. ಅದೇ ತಪ್ಪಾಗಿದೆ. ನನ್ನಿಂದ ಸೀರಿಯಲ್ ತಂಡದ ಮೇಲೆ ಸಾಕಷ್ಟು ಸಮಸ್ಯೆ ಆಗಿದೆ ಅಂತೀರಲ್ವಾ, ನಿಮ್ಮಿಂದ ಕಲಾವಿದರಿಗೆ ಸಮಸ್ಯೆ ಆಗಿಲ್ವಾ? ನಿಮ್ಮಿಂದ ಕೆಲ ಕಲಾವಿದರು ಕಣ್ಣೀರು ಇಟ್ಟಿದ್ದಾರೆ ಎಂದು ಆರೋಪಿಸಿದರು.

ಧಾರವಾಹಿ ಆರಂಭಕ್ಕೂ ಮುನ್ನ ಸಿನಿಮಾ ಮಟ್ಟದಲ್ಲಿ ಧಾರವಾಹಿ ಮಾಡಲಾಗುವುದು ಎಂದು ಹೇಳಿದ್ದರು. ಅಲ್ಲದೇ ನೆಗೆಟಿವ್‌ ಪಾತ್ರ ಆಗುವುದಿಲ್ಲ ಎಂದು ಹಲವಾರು ಬಾರಿ ಭರವಸೆಯನ್ನೂ ನೀಡಿದ್ದರು. ಆದರೆ ಬರುಬರುತ್ತಾ ಚಿತ್ರದ ಗುಣಮಟ್ಟ, ಚಿತ್ರಕಥೆ ಎಲ್ಲವೂ ಬದಲಾಗಿದೆ ಎಂದು ಆರೋಪಿಸಿದರು.

ಧಾರವಾಹಿಯಲ್ಲಿ ನಾನು ೧೩ ಸಾವಿರ ಕೋಟಿ ರೂ. ಒಡೆಯ. ಆದರೆ ಇನ್ನೋವಾ ಕಾರಿನಲ್ಲಿ ತೋರುಸುತ್ತಾರೆ. ರಾಜನಕುಂಟೆಯಲ್ಲಿ ಭವ್ಯ ಬಂಗಲೆಯಲ್ಲಿ ಇದ್ದ ಶೂಟಿಂಗ್‌ ದಿಢೀರನೆ ಯಾವುದೇ ಸಣ್ಣ ಮನೆಗೆ ಸ್ಥಳಾಂತರಿಸಿದರು. ಕಥೆ ಹಾದಿ ತಪ್ಪುತ್ತಿತ್ತು. ಚಿತ್ರಕಥೆ, ಸಂಭಾಷಣೆ ಮೊದಲೇ ಕಳಿಸಿ ಎಂದರೆ ಒಂದೇ ಬಾರಿ ಎಲ್ಲಾ ಕಳುಹಿಸುತ್ತಿದ್ದರು. ನನಗೆ ರಾತ್ರಿಯೀಡಿ ಓದಿ ಬೆಳಿಗ್ಗೆ ಶೂಟಿಂಗ್‌ ಗೆ ಬರಬೇಕಿತ್ತು. ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಅವಕಾಶವೂ ಸಿಗುತ್ತಿರಲಿಲ್ಲ ಎಂದು ಅನಿರುದ್ಧ್‌ ವಿವರಿಸಿದರು.

ನಾನು ಕ್ಯಾರವಾನ್‌ ಇಲ್ಲದೇ ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದಿಲ್ಲ. ಆದರೆ ಹೊರಗೆ ಹೋದಾಗ ಕ್ಯಾಮರಾನ್‌ ಬೇಕು. ಏಕೆಂದರೆ ನಾನು ಎಲ್ಲೆಂದರಲ್ಲಿ ಬಟ್ಟೆ ಬದಲಿಸುತ್ತೇನೆ. ಶೌಚಾಲಯಕ್ಕೂ ಹೋಗುತ್ತೇನೆ. ಆದರೆ ಶೂಟಿಂಗ್‌ ಗೆ ಬಂದ ಮಹಿಳೆಯರ ಪಾಡೇನು? ಊರ ಹೊರಗೆ ಅಭಿಮಾನಿಗಳ ಮನೆ ಬಳಸುವುದು ಸರಿಯೇ? ಒಂದೆರಡು ಬಾರಿ ಸರಿ. ಆದರೆ ಪದೇಪದೆ ಬಳಸುವುದು ನಮಗೆ ಮುಜುಗರ ಅಲ್ಲವೇ ಎಂದು ಪ್ರಶ್ನಿಸಿದರು.   

ನಾನು ಕಥೆಗಾಗಿ, ಚಿತ್ರಕಥೆಗಾಗಿ ಹೊರಡಿದ್ದೇನೆ ಹೊರತು ಬೇರೆ ಯಾವುದಕ್ಕೂ ಅಲ್ಲದೇ. ನಾನು ಸೆಟ್‌ ನಲ್ಲಿ ಯಾರಿಗೂ ಬೈದಿಲ್ಲ. ಎಷ್ಟೋ ಜನ ಧಾರವಾಹಿಯಿಂದ ಹೊರಗೆ ಹೋಗಿದ್ದರು ಅವರನ್ನು ವಾಪಸ್‌ ಕರೆಸಿದ್ದೇನೆ. ನಾನು ಸುಳ್ಳು ವ್ಯಕ್ತಿ ಅಲ್ಲ ಎಂದು ಅವರು ಹೇಳಿದರು.

ಸೀರಿಯಲ್ ಚೆನ್ನಾಗಿ ಆಗಬೇಕು ಅಂತಾ ನಾನು ಕೆಲ ಪ್ರಶ್ನೆಗಳನ್ನು ಮಾಡಿದ್ದೆ. ಸಲಹೆ ನೀಡಿದ್ದೇ ಈಗ ನನಗೆ ಮುಳುವಾಯಿತು. ನನಗೆ ನೋಟಿಸ್ ಕೊಟ್ಟಿದ್ದಾರೆ, ಇದು ದುರಂತದ ವಿಷಯ ಅಂತಾ ಜಗದೀಶ್ ಅವರಿಗೆ ಮೆಸೇಜ್ ಮಾಡಿದ್ದೇನೆ. ಅವರು ಫೋನ್ ತೆಗಿದಿಲ್ಲ ಎಂದು ನಟ ಅನಿರುದ್ಧ್​ ತಿಳಿಸಿದರು.

ನಾನು ಈಗಲೂ ಜೊತೆ ಜೊತೆಯಲಿ ನನ್ನ ಕುಟುಂಬ ಎಂದೇ ಅಂದುಕೊಂಡಿದ್ದೇನೆ. ನನ್ನ ಮನೆಯಲ್ಲಿ ನನ್ನ ಮಕ್ಕಳು ಸಹಿತ ಬೇಡ, ಇನ್ಮುಂದೆ ಈ ಸೀರಿಯಲ್ ಬೇಡ ಅಂತಿದ್ದಾರೆ. ಆದರೆ ನನಗೆ ಪ್ರೇಕ್ಷಕರೊಂದಿಗೆ ಕಮಿಟ್ ಮೆಂಟ್ ಇದೆಯಲ್ಲಾ? ಹೀಗಾಗಿ ಮತ್ತೆ ಕರೆದರೆ ನನ್ನ ಪಾಲಿನ ಶೂಟಿಂಗ್ ಕಷ್ಟವಾದರೂ ಮಾಡಿ ಮುಗಿಸಿಕೊಡುತ್ತೇನೆ ಎಂದಿದ್ದಾರೆ ಅನಿರುದ್ಧ್.

VIDEO CREDIT : TV9 KANNADA