ಶಾರೀರಿಕವಾಗಿ ಕಣ್ಮುಂದೆ ಕಾಣದೆ ಇರಬಹುದು ಆದ್ರೆ..! ಅಪ್ಪು ಬಗ್ಗೆಗೋಲ್ಡನ್ ಗ್ಯಾಂಗ್ ನಲ್ಲಿ ಭಾವುಕ ಮಾತಾಡಿದ ಅನಿರುದ್ದ್

By Infoflick Correspondent

Updated:Tuesday, March 8, 2022, 20:12[IST]

ಶಾರೀರಿಕವಾಗಿ ಕಣ್ಮುಂದೆ ಕಾಣದೆ ಇರಬಹುದು ಆದ್ರೆ..! ಅಪ್ಪು ಬಗ್ಗೆಗೋಲ್ಡನ್ ಗ್ಯಾಂಗ್ ನಲ್ಲಿ ಭಾವುಕ ಮಾತಾಡಿದ ಅನಿರುದ್ದ್

ಕನ್ನಡದ ಕಿರುತೆರೆಯಲ್ಲಿ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ನೇತೃತ್ವದಲ್ಲಿ ಗೋಲ್ಡನ್ ಕಾರ್ಯಕ್ರಮ ನಡೆಯುತ್ತಿದೆ. ಹೌದು ಈಗಾಗಲೇ ಕೆಲ ಅದ್ಭುತ ಎಪಿಸೋಡ್ ಮುಗಿಸಿರುವ ಗೋಲ್ಡನ್ ಗ್ಯಾಂಗ್ ಇತ್ತೀಚಿಗೆ ಲಕ್ಕಿ ಮ್ಯಾನ್ ಚಿತ್ರತಂಡವನ್ನು ಕರೆತಂದಿತ್ತು. ಅವರ ಗೆಳೆಯರ ಗೆಳೆತನ ಬಗ್ಗೆ ಮಾತನಾಡುವ ಅವಕಾಶ ಮಾಡಿಕೊಟ್ಟಿದ್ದರು. ಕನ್ನಡಿಗರಿಂದ ಜನಪ್ರಿಯತೆ ಪಡೆದಿರುವ ಜೊತೆ ಜೊತೆಯಲಿ ಖ್ಯಾತಿಯ ನಟ ಅನಿರುದ್ಧ್, ಕನ್ನಡದ ನಿರೂಪಕರಾದ ಮಾಸ್ಟರ್ ಆನಂದ್, ಚೆಲ್ಲಾಟ ಚಿತ್ರ ಖ್ಯಾತಿಯ ರೇಖಾ, ಕನ್ನಡದ ನಟ ಪ್ರಸಾದ್ ಆಗಮಿಸಿದ್ದರು. ಹೌದು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಕೆಲ ಮಹತ್ವ ವಿಚಾರಗಳನ್ನು ಮಾತನಾಡುತ್ತಿದ್ದ ಇವರು, ಅಪ್ಪು ಅವರ ಬಗ್ಗೆಯೂ ಮಾತನಾಡಿದ್ದಾರೆ.

ನಟ ಗಣೇಶ್ (Ganesh)  ಅವರು ಅಪ್ಪು ಬಗ್ಗೆ ನಿಮ್ಮ ಅನಿಸಿಕೆ ಏನು ಎಂದಾಗ ನಟ ಅನಿರುದ್ಧ್ ( Anirudh) ಅವರು, ಹತ್ತು ತಾಸುಗಳ ಹಿಂದೆ ಇದ್ದ ವ್ಯಕ್ತಿ ಇದೀಗ ಇಲ್ಲ ಎಂದರೆ ಹೇಗಾಗಬಹುದು, ನಿಜಕ್ಕೂ ತುಂಬಾ ನೋವಾಯಿತು. ಅಪ್ಪು ಅಂತವರು ಕಣ್ಣಮುಂದೆ ಕಾಣದೆ ಇರಬಹುದು, ಆದರೆ ನಾನು ಎಲ್ಲೇ ಹೋದರೂ ಮೂಲೆಮೂಲೆಯಲ್ಲೂ ಅಪ್ಪು ಅವರದೇ ಫೋಟೋಗಳೇ ಕಾಣುತ್ತವೆ. ಹೊರ ರಾಜ್ಯದವರು ಬದುಕಿದರೆ ಇವರ ಹಾಗೆ ಬದುಕಬೇಕು ಎನ್ನುತ್ತಾರೆ ಎಂದರೆ ಇವರು ಕರ್ನಾಟಕಕ್ಕೆ ಅತಿ ದೊಡ್ಡ ಕೊಡುಗೆ. ಎಲ್ಲರಲ್ಲಿಯೂ ಅಪ್ಪು ಇದ್ದಾರೆ, ನಮ್ಮ ಜೊತೆಯೇ ಇದ್ದಾರೆ ,  

ಅಪ್ಪು (Puneeth Raj kumar) ಅವರು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆ. ಇಂತಹ ಕಲಾವಿದರಿಗೆ ಕೆಲ ಜನರುಗಳು ಮಾತ್ರ ಅಭಿಮಾನಿಗಳಲ್ಲ ನಾವು ಕೂಡ ಅಭಿಮಾನಿಗಳೇ ಎಂದು ಭಾವುಕರಾದರು.ಗಣೇಶ್ ಅವರು, ಈ ಮನುಷ್ಯ ಜನ್ಮ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿವರೆಗೂ ಅಪ್ಪು ಖಂಡಿತಾ ಇರುತ್ತಾರೆ ಎಂದರು. ಹೌದು ಲಕ್ಕಿ ಮ್ಯಾನ್ ಚಿತ್ರದ ಬಗ್ಗೆ, ಚಿತ್ರತಂಡದ ಜೊತೆ ಮಾತನಾಡಿದ ವೀಡಿಯೋ ತುಣುಕು ಇದೀಗ ವೈರಲ್ ಆಗುತ್ತಿದೆ. ಅಪ್ಪು ಬಗ್ಗೆ ಅನಿರುದ್ಧ್ ಆಡಿದ ಮಾತುಗಳು ನಿಜಕ್ಕೂ ಸತ್ಯ ಎನಿಸುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ...