ನನ್ನ ಮನಸ್ಸಿಗೆ ತುಂಬಾ ನೋವು ಆಗಿದೆ !! ನಿಮ್ಮ‌ ಮಕ್ಕಳ‌ಮೇಲೆ ಆಣೆ ಮಾಡಿ ಹೇಳಿ ಎಂದು ಮನಬಿಚ್ಚಿ ಮಾತನಾಡಿದ ನಟ ಅನಿರುದ್ಧ್

By Infoflick Correspondent

Updated:Saturday, August 20, 2022, 15:03[IST]

ನನ್ನ ಮನಸ್ಸಿಗೆ ತುಂಬಾ ನೋವು ಆಗಿದೆ !! ನಿಮ್ಮ‌ ಮಕ್ಕಳ‌ಮೇಲೆ ಆಣೆ ಮಾಡಿ ಹೇಳಿ ಎಂದು ಮನಬಿಚ್ಚಿ ಮಾತನಾಡಿದ ನಟ ಅನಿರುದ್ಧ್

ಜೀ ಕನ್ನಡ ವಾಹಿನಿಯಲ್ಲಿ ಪ್ರಾಸವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್ ಮಾಡಿಕೊಂಡ ಕಾರಣದಿಂದ ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ.

ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್​ ಅವರನ್ನು ಕೈಬಿಟ್ಟಿರುವುದಾಗಿ ಮೇಲ್​ ಮೂಲಕ ಅನಿರುದ್ಧ್​ಗೆ ನಿರ್ಮಾಣ ಸಂಸ್ಥೆ ತಿಳಿಸಿದೆ. ಭಿನ್ನಾಭಿಪ್ರಾಯ ಹೊರಗಡೆ ಹೇಳೋ ಅವಶ್ಯಕತೆ ಇರಲಿಲ್ಲ. ಇವತ್ತು ಅವರು ಆರೋಪಗಳ ಪಟ್ಟಿ ಮಾಡಿದ್ದಾರೆ. ಹಾಗಾಗಿ ಆರೋಪಗಳ ಬಗ್ಗೆ ಇವತ್ತು ಮಾತನಾಡುತ್ತಿದ್ದೀನಿ ಎನ್ನುತ್ತಲೇ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟರು ಅನಿರುದ್ಧ್​.

ಇದೀಗ ಈ ಎಲ್ಲ ಘಟನೆಗಳ ಬಗ್ಗೆ ನಟ ಅನಿರುದ್ಧ್ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. ಧಾರಾವಾಹಿ ನಂಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಎಂದು ಭಾವಿಸುವೇ, ಜೊತೆ ಜೊತೆಯಲ್ಲಿ ನನ್ನಿಂದ ನಡೆಯುತ್ತಿದೆ ಎಂದು ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರೋ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.

ಕ್ಯಾರವಾನ್ ಇಲ್ಲದಿದ್ರೆ ನಾನು ಆಯಕ್ಟ್ ಮಾಡಲ್ಲ ಅಂದೆ' ಎಂದು ಅವರು ದೂರಿದ್ದಾರೆ. ಹೌದು, ಅಂದು ಶೂಟಿಂಗ್​ ನಡೆಯುತ್ತಿದ್ದ ಆಸುಪಾಸಿನಲ್ಲಿ ಯಾವುದೇ ಮನೆ ಇರಲಿಲ್ಲ. ಮೊದಲನೇ ದಿನ ಕ್ಯಾರವಾನ್ ಇತ್ತು. ಎರಡನೇ ದಿನ ಇರಲಿಲ್ಲ. ಎದುರುಗಡೆ ಕಾಡಿನಲ್ಲಿ ಮೂರು ಬಾರಿ ಬಾತ್ ರೂಂಗೆ ಹೋಗಿದ್ದೀನಿ. ಸೆಟ್​ನಲ್ಲಿ ಹೆಂಗಸರು ಇರ್ತಾರೆ. ಅವರಿಗೆ ಸಮಸ್ಯೆ ಆಗುತ್ತೆ ಅಂತ ಹಠ ಮಾಡಿ ಕ್ಯಾರವಾನ್ ತರಿಸಿದ್ದೀನಿ. ಅಭಿಮಾನಿಗಳ ಮನೆಗೆ ಪದೇಪದೆ ಬಾತ್ ರೂಮ್​ಗೆ ಹೋಗೋಕೆ ಮುಜುಗರ ಆಗುತ್ತೆ ಎಂದು ಅನಿರುದ್ಧ್​ ಶೂಟಿಂಗ್​ ವೇಳೆ ಅನುಭವಿಸುತ್ತಿದ್ದ ಸಮಸ್ಯೆಗಳ ಬಗ್ಗೆ ವಿವರಿಸಿದರು.

ನನಗೆ ದುರಂಹಕಾರ ಬಂತು ಅನ್ನೋ ಆರೋಪವಿದೆ. ಆದರೆ ನನ್ನ ಅಭಿನಯದಲ್ಲಿ ಯಾವುದಾದ್ರೂ ಸೀನ್ ನೋಡಿ ನಿಮಗೆ ಗೊತ್ತಾಗುತ್ತೆ. ಫ್ಲಾಶ್ ಬ್ಯಾಕ್ ಕತೆಗಾಗಿ 12 ಕೆಜಿ ಕಮ್ಮಿ ಆಗಿದ್ದಿನಿ, ನಾನು ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ ಎಂದರು.

ಪದೇಪದೆ ಕತೆ ಚೇಂಜ್ ಮಾಡಿದ್ದಾರೆ. ನಾನು ಹೋರಾಡಿದ್ದು ಸ್ಕ್ರಿಪ್ಟ್ಗೋಸ್ಕರ ಮಾತ್ರ. ಆರ್ಯವರ್ಧನ್ ಪಾತ್ರ ನೆಗೆಟಿವ್ ಇರೋಲ್ಲ ಅಂತ ಹೇಳಿದ್ರು. ಆದ್ರೂ ಕೂಡ ನೆಗೆಟಿವ್ ಪಾತ್ರ ಮಾಡಿದೆ. ಅಭಿಮಾನಿಗಳು ಬಯ್ಯೋಕೆ ಶುರು ಮಾಡಿದ್ರು. ಅವರಿಗೂ ಸಮಾಧಾನ ಮಾಡಿದ್ದೀನಿ. ನಾನು ಜಗಳ ಮಾಡಿದ್ದು ಸ್ಕ್ರಿಪ್ಟ್​ಗಾಗಿ. ನಂದು ಕೊಲೆ ಮಾಡೋ ಸೀನ್ ಇದೆ. ಚಾನೆಲ್ ಬಗ್ಗೆ ಜಗ್ಗಿ ಅವ್ರು ತುಂಬಾ ಕೆಟ್ಟದಾಗಿ ಮಾತನಾಡ್ತಾರೆ. ಅದ್ರಲ್ಲಿ ಏನೆನೋ ಕತೆ ಹೇಳಿದ್ದಾರೆ… ಪಾಯಿಂಟ್ ಆಫ್ ವಿವ್ಯೂನಲ್ಲಿ ಮಾಡಿ ಅಂತ ಚಾನಲ್ ಅವ್ರೇ ಹೇಳ್ತಾರೆ. ಲಾಸ್ಟ್ ಮೂಮೆಂಟ್ ಸೀನ್ ಪೇಪರ್ ಬಂದ್ರೆ ಕೋಪ ಬಂದೇ ಬರುತ್ತೆ. ಹೈ ಪಿಚ್​ನಲ್ಲೇ ಜಗಳ ಮಾಡಿದ್ದೀನಿ. ಇದ್ರಿಂದ ಅವ್ರ ಮಾನಹಾನಿಯಾಗಿಲ್ಲ, ನನ್ನ‌ ಮಾನ ಹಾನಿಯಾಗಿದೆ. ಒಂದೂವರೆ ವರ್ಷ ಡೇ ಆಯಂಡ್ ನೈಟ್ ವರ್ಕ್ ಮಾಡಿದ್ದೇನೆ. ರಾಜನಕುಂಟೆಯಲ್ಲಿ ಯಾವಾಗ್ಲಾದ್ರೂ ಒಂದು ಬಾರಿ ಶೂಟಿಂಗ್ ಇರುತ್ತೆ ಅಂತ ಹೇಳಿದ್ರಿ. ರಾತ್ರಿ ಬಂದು ಒಂದು ಹಣ್ಣು ತಿಂದು ಮಲಗ್ತಿದೆ.

 

ಹಿಂದಿನಿ ದಿನ ಸೀನ್ ಪೇಪರ್ ಕಳುಹಿಸಿ ಎಂದು ಸಿರೀಯಲ್ ಶುರುವಾದಾಗಿನಿಂದ ಕೇಳುತ್ತಿರುವೇ ಇವತ್ತು ಅಧಿಕೃತವಾಗಿ ಮಾಹಿತಿ ಬಂದಿದೆ. ಭಿನ್ನಾಭಿಪ್ರಾಯ ಆಗೋದು ಸರ್ವೇ ಸಾಮಾನ್ಯ, ಇಲ್ಲಿ ಆಗಿರುವ ಘಟನೆ ಕತೆಗೋಸ್ಕರ, ಆ ಭಿನ್ನಾಭಿಪ್ರಾಯ ಹೊರಗಡೆ ಹೇಳೋ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.