Sudeep :ಸುದೀಪ್ ಹಿಂದಿ ಟ್ವಿಟ್ ವಿಚಾರವಾಗಿ ಟಗರು ಅನಿತಾ ಭಟ್ ಹೇಳಿದ್ದೇನು ಗೊತ್ತಾ..? ಕನ್ನಡಿಗರು ಮತ್ತೆ ಗರಂ

By Infoflick Correspondent

Updated:Tuesday, May 3, 2022, 11:41[IST]

Sudeep :ಸುದೀಪ್ ಹಿಂದಿ ಟ್ವಿಟ್ ವಿಚಾರವಾಗಿ ಟಗರು ಅನಿತಾ ಭಟ್ ಹೇಳಿದ್ದೇನು ಗೊತ್ತಾ..? ಕನ್ನಡಿಗರು ಮತ್ತೆ ಗರಂ

ಇತ್ತೀಚಿಗೆ ಸ್ಯಾಂಡಲ್ವುಡ್ನ ಖ್ಯಾತ ನಟ ಕಿಚ್ಚ ಸುದೀಪ್ ಅವರು ಹಿಂದಿ ರಾಷ್ಟ್ರ ಭಾಷೆ ಅಲ್ಲ ಅದು ಕೂಡ ಕೇವಲ ಒಂದು ಭಾಷೆ, ಅದನ್ನು ಬಿಟ್ಟು ಹಿಂದಿ ರಾಷ್ಟ್ರಭಾಷೆ ಎನ್ನುತ್ತಾ ಹಿಂದಿ ಹೇರಿಕೆ ಮಾಡುವುದು ಸರಿಯಲ್ಲ ಎನ್ನುವ ವಿಚಾರದಲ್ಲಿ ಮಾತನಾಡಿದ್ದರು. ಅದು ಟ್ವೀಟ್ ಮೂಲಕ ದೊಡ್ಡದಾಗಿ ಸದ್ದು ಮಾಡಿತ್ತು. ಬಳಿಕ ಬಾಲಿವುಡ್ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದು ನಮಗೆ ಹಿಂದೆಯೆ ರಾಷ್ಟ ಭಾಷೆ ಎಂಬ ನಿಟ್ಟಿನಲ್ಲಿ ಮಾತನಾಡಿದ್ದ ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಿಚ್ಚ ಸುದೀಪ್ ಅವರು ಈ ವಿಚಾರವಾಗಿ ಮಾಡಿದ್ದ ಹೀಗೊಂದು ಟ್ವೀಟ್ ದೊಡ್ಡದಾಗಿ ಇಡೀ ದೇಶದ ತುಂಬೆಲ್ಲ ಸದ್ದು ಮಾಡಿತ್ತು.     

ಅಜಯ್ ದೇವಗನ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್ ಅವರು ನಾವು ನಿಮ್ಮ ಭಾಷೆಯನ್ನು ಗೌರವಿಸುತ್ತೇವೆ. ಹಿಂದಿಯನ್ನು ಕಲಿಯುವ ಸಾಮರ್ಥ್ಯ ಹೊಂದಿದ್ದೇವೆ. ನೀವು ಮಾಡಿದ ಹಿಂದಿ ಪ್ರತಿಕ್ರಿಯೆ ರೀತಿಯೇ ನಾನು ಕೂಡ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿದರೆ ನಿಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಆಶ್ಚರ್ಯಚಕಿತನಾಗಿದ್ದೇನೆ ಎಂದಿದ್ದರು. ಸುದೀಪ್ ಅವರ ಈ ಮಾತಿನ ಪರ ಕನ್ನಡಿಗರು ನಿಂತಿದ್ದು, ದೇಶದ ತುಂಬೆಲ್ಲ ಸುದೀಪ್ ಅವರ ಮಾತನ್ನು  ಹೆಚ್ಚಿನ ಮಟ್ಟದಲ್ಲಿ ಒಪ್ಪಿಕೊಂಡರು. ಹೌದು ಇದೀಗ ಅದೇ ವಿಚಾರವಾಗಿ ಕನ್ನಡದ ಟಗರು ಖ್ಯಾತಿಯ ಅನಿತಾ ಭಟ್ ಅವರು ಹಿಂದಿ ಮತ್ತು ಕನ್ನಡದ ವಿಚಾರವಾಗಿ, ಭಾಷೆಯ ವಿಚಾರವಾಗಿ ಮಾತನಾಡಿದ್ದಾರೆ.

ನಮ್ಮ ದೇಶದಲ್ಲಿ 40 ಶೇಕಡ ಹಿಂದಿ ಮಾತನಾಡುತ್ತಾರೆ, ತಮಿಳು 7 ಶೇಕಡ, ಕನ್ನಡ 4 ಶೇಕಡ ಮಾತನಾಡುತ್ತಾರೆ, ನಾವು ನಮ್ಮ ದೇಶದಲ್ಲಿ ಯಾವ ಭಾಷೆ ಮಾತನಾಡಬೇಕು ಎಂಬುದಾಗಿ ಇದರಲ್ಲೇ ತಿಳಿಯಬೇಕು. ಯಾವ ಭಾಷೆ ಮಾತನಾಡಬೇಕು ಎಂದು ನಾವೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಅನಿತಾ ಭಟ್ ಮಾಡಿದ ಈ ಟ್ವಿಟಿಗೆ ಕನ್ನಡಿಗರು ಕೆಂಡಾಮಂಡಲವಾಗಿ, ಕರ್ನಾಟಕದಲ್ಲಿ ಇದ್ದು ಈ ರೀತಿ ಮಾತನಾಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಅವರ ಅನಿಸಿಕೆಗಳನ್ನು ತಿಳಿಸುತ್ತಿದ್ದಾರೆ. ಇನ್ನು ಕೆಲವು ಟ್ವೀಟ್ ಗಳಲ್ಲಿ ಹಂದಿ ನಾಯಿಗಳು ನಮ್ಮ ದೇಶದಲ್ಲಿ ಹೆಚ್ಚಿವೆ. ಅವುಗಳನ್ನ ರಾಷ್ಟ್ರ ಪ್ರಾಣಿಯಾಗಿ ಮಾಡಬಹುದು ಅಲ್ಲವೇ ಎಂಬುದಾಗಿ ಅನಿತಾ ಭಟ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.