Anitha Bhat : ಟಗರು ಖ್ಯಾತಿಯ ಅನಿತಾ ಭಟ್ ಚಿಕ್ಕ ಬಟ್ಟೆ ಹಾಕಿದರೆ ಏನು ಆಗುತ್ತೆ ಅಂತ ಹೇಳಿದ್ದಾರೆ ನೋಡಿ..!

By Infoflick Correspondent

Updated:Wednesday, July 13, 2022, 07:52[IST]

Anitha Bhat : ಟಗರು ಖ್ಯಾತಿಯ ಅನಿತಾ ಭಟ್ ಚಿಕ್ಕ ಬಟ್ಟೆ ಹಾಕಿದರೆ ಏನು ಆಗುತ್ತೆ ಅಂತ ಹೇಳಿದ್ದಾರೆ ನೋಡಿ..!

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವ ನಟಿಯರು ಹಾಗೂ ಬೆಳ್ಳಿ ತೆರೆಯ ಮೇಲೆ ಮಿಂಚಿದ ಸಾಕಷ್ಟು ನಟಿಮಣಿಯರು ಅವರದೇ ಆದ ಅಭಿನಯದಿಂದ ಹಾಗೂ ಬೋಲ್ಡ್ ಡ್ರೆಸ್ ಹಾಕುವುದರಿಂದ ಹೆಚ್ಚು ವಿಚಾರಕ್ಕೂ ಸುದ್ದಿಯಲ್ಲಿರುತ್ತಾರೆ. ಹಾಗೆ ಹೆಚ್ಚು ಅಭಿಮಾನಿಗಳನ್ನ ಹೊಂದಿರುತ್ತಾರೆ. ಅವರ ಸಾಲಿನಲ್ಲಿ ನಟಿ ಅನಿತಾ ಭಟ್ ಅವರು ಸಹ ಬರುತ್ತಾರೆಂದು ಹೇಳಬಹುದು. ಹೌದು ನಟಿ ಅನಿತಾ ಭಟ್ ಟಗರು ಚಿತ್ರದ ಮೂಲಕ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಹೌದು ಸುಮಾರು ಹನ್ನೊಂದು ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ. ಕೆಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡ ಅನಿತಾ ಭಟ್ ಫೋಟೋಶೂಟ್ ಮಾಡಿಸುವ ಮೂಲಕ ನೋಡುಗರ ನಿದ್ದೆ ಕೆಡಿಸುವಂತೆ ಪಡ್ಡೆ ಹುಡುಗರ ಹೃದಯ ಕದಿಯುವಂತ ಫೋಟೋಗಳ ಆಗಾಗ ಶೇರ್ ಮಾಡಿಕೊಳ್ಳುತ್ತಾರೆ..  

ಅನಿತಾ ಭಟ್ ಅವರು ಈಗಾಗಲೇ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಮೂಲಕವೇ ಗುರುತಿಸಿಕೊಂಡಿದ್ದು ಪರಪಂಚ ಸಿನಿಮಾದ ಸಂದರ್ಭದಲ್ಲಿ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದು ಅದರ ಬಗ್ಗೆ ಹೆಚ್ಚು ನೆಗಟಿವ್ ಟಾಕ್ ಹಬ್ಬಿತ್ತು. ಅದಾದ ಬಳಿಕ ನೋಡುಗರ ಹಾಗೂ ಕೇಳುವವರ ವಿಚಾರ ಬೇರೆಯೇ ಆಗಿತ್ತಂತೆ. ಬೋಲ್ಡ್ ಆಗಿ ಡ್ರೆಸ್ ಹಾಕಿಕೊಂಡರೆ ನಟಿಯರ ಬಗ್ಗೆ ಹೇಗೆಲ್ಲ ಮಾತನಾಡುತ್ತಾರೆ ಎಂದು ಇದೀಗ ಅನಿತಾ ಕಹಿಸತ್ಯದ ಬಗ್ಗೆ ಮಾತನಾಡಿದ್ದು ನೋವಿನ ವಿಚಾರವನ್ನು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ನಟಿ ಅನಿತಾ ಭಟ್ ಬೋಲ್ಡ್ ಆಗಿ ತುಂಬಾ ಹಾ*ಟ್ ಆಗಿ ಫೋಟೋಗಳನ್ನ ಶೇರ್ ಮಾಡಿಕೊಂಡಾಗ ಜನರು ಹೇಗೆ ಮಾತನಾಡುತ್ತಾರೆಂದು ಇವರ ಗಮನಕ್ಕೆ ಬಂದಿರಲಿಲ್ಲವಂತೆ. ನಂತರದ ಕೆಲ ದಿನಗಳ ಬಳಿಕ ಅವರಿಗೆ ಗೊತ್ತಾಗಿದ್ದು ಜನರು ಬಟ್ಟೆ ಹಾಕುವುದನ್ನು ನೋಡಿ, ಇವಳು ಬಿಡಪ್ಪ ಎಲ್ಲದಕ್ಕೂ ಕೂಡ ರೆಡಿ ಇರುವಂತೆ ಕಾಣುತ್ತಾಳೆ ಎಂಬದಾಗಿ ನಟಿಯರ ಬಗ್ಗೆ ಮಾತನಾಡುತ್ತಾರೆ ಎಂದು ನಟಿ ಈಗ ಹೇಳಿದ್ದಾರೆ.

ಅದು ಎಲ್ಲವೂ ತಪ್ಪು, ಹಾಗೆ ನಟಿಯರು ಎಂದ ತಕ್ಷಣ ಬೇಕಾದಷ್ಟು ದುಡ್ಡು ಇರುತ್ತದೆ, ಒಳ್ಳೆಯ ರಿಚ್ ಲೈಫ್ ಲೀಡ್ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ನಾವು ತೊಡುವ ಬಟ್ಟೆಯನ್ನು ನೋಡಿ ಆ ರೀತಿ ಜನರು ಹೇಳುತ್ತಾರೆ. ನಾವು ಹೊರಗಿನಿಂದ ಕಾಣುವ ರಿಚ್ನೆಸ್ ನೋಡಿ ಹಾಗೆ ಹೇಳುತ್ತಾರೆ. ಆದರೆ ನಾವು ಕೂಡ ಸಾಮಾನ್ಯರಂತೆ ಜೀವನ ಮಾಡುತ್ತೇವೆ. ನನ್ನ ಬಳಿಯೂ ಅಷ್ಟೇನೂ ದುಡ್ಡು ಇಲ್ಲ. ಹಂತ ಹಂತವಾಗಿ ನಟನೆಗೆ ಸಂಭಾವನೆ ಇರುತ್ತದೆ. ಕೆಲ ನಟಿಯರು ಇದ್ದಾರೆ, ತುಂಬಾ ಬ್ಯೂಟಿಫುಲ್ ಲೈಫ್ ಲೀಡ್ ಮಾಡುತ್ತಾರೆ. ಆದರೆ ನನ್ನ ಬಳಿಯೂ ಅಷ್ಟು ದುಡ್ಡಿಲ್ಲ ಎಂದು ಅವರ ಸಂಭಾವನೆ ಬಗ್ಗೆಯೂ ನಟಿ ಮಾತನಾಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆ ಬಟ್ಟೆ ನೋಡಿ ಯಾರನ್ನು ಅಲೆಯಬೇಡಿ ಎಂದು ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು...