Anushree : ಜಾಕೆಟ್ ಸಕತ್ ಆಗಿದೆ ಅಣ್ಣ ಅಂದಿದ್ದೆ ತಡ ಅನುಶ್ರೀಗೆ ಸಿಕ್ತು ಶಿವಣ್ಣನ ಜಾಕೆಟ್..! ಕ್ಯೂಟ್ ವಿಡೀಯೋ ವೈರಲ್

By Infoflick Correspondent

Updated:Tuesday, June 28, 2022, 13:26[IST]

Anushree :  ಜಾಕೆಟ್ ಸಕತ್ ಆಗಿದೆ ಅಣ್ಣ ಅಂದಿದ್ದೆ ತಡ ಅನುಶ್ರೀಗೆ ಸಿಕ್ತು ಶಿವಣ್ಣನ ಜಾಕೆಟ್..! ಕ್ಯೂಟ್ ವಿಡೀಯೋ ವೈರಲ್

ಅನುಶ್ರೀ ಅವರು ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಬಳಿಕ ಅದರ ಬಗ್ಗೆ ಹೆಚ್ಚು ಪ್ರೀತಿಯಿಂದಲೇ ಬರೆದುಕೊಂಡಿದ್ದಾರೆ ಅನುಶ್ರೀ. ಅನುಶ್ರೀ ಅವರ ಈ ವಿಡಿಯೋ ಇದೀಗ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, 70 ಸಾವಿರಕ್ಕೂ ಅಧಿಕ ಮೆಚ್ಚುಗೆ ಗಳಿಸಿಕೊಂಡಿದೆ ಎನ್ನಲಾಗಿದೆ. ಅನುಶ್ರೀ ಅವರು ಕನ್ನಡದ ಖ್ಯಾತ ನಿರೂಪಕರ ಪಟ್ಟಿಯಲ್ಲಿದ್ದಾರೆ. ಗಣ್ಯವ್ಯಕ್ತಿಗಳಾದ ಕನ್ನಡ ಸಿನಿರಂಗದ ಸ್ಟಾರ್ ನಟರುಗಳಿಗೆ ಅನುಶ್ರೀ ಅವರು ಹೆಚ್ಚು ಅಚ್ಚುಮೆಚ್ಚು. ಜೊತೆಗೆ ಅನುಶ್ರೀ ಅವರ ನಿರೂಪಣೆ ಎಲ್ಲರಿಗೂ ಇಷ್ಟ ಆಗುವಂತಿರುತ್ತದೆ. ನಟಿ ಅನುಶ್ರೀ ಅವರು ಸಾಕಷ್ಟು ಸಿನಿಮಾ ಕಾರ್ಯಕ್ರಮಗಳ ನಡೆಸಿಕೊಡುತ್ತಾರೆ. ಜೊತೆಗೆ ಕನ್ನಡ ಕಿರುತೆರೆಯಲ್ಲಿ ಸರಿಗಮಪ ನಿರೂಪಕಿಯಾಗಿ ಕೂಡ ಕೆಲಸ ಮಾಡಿದ್ದಾರೆ.

ಹೌದು ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ನಿರೂಪಕಿಯಾಗಿ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಅವರಿಂದ ದೊಡ್ಡ ಗಿಫ್ಟ್ ಪಡೆದುಕೊಂಡಿದ್ದಾರೆ ಅನುಶ್ರೀ. ವೀಡಿಯೋ ಒಂದನ್ನ ಹಂಚಿಕೊಂಡಿರುವ ನಟಿ ಅನುಶ್ರೀ ಅವರು ಹೀಗೆ ಬರೆದುಕೊಂಡಿದ್ದಾರೆ. 'ಯಾವ ಜನ್ಮದ ಪುಣ್ಯ ಇದು, ಅಣ್ಣ ಜಾಕೆಟ್ ತುಂಬಾ ಚೆನ್ನಾಗಿದೆ ಅಂದೆ ಅಷ್ಟೇ. ಆಯ್ತು ಬಿಡಮ್ಮ ನಿನಗೆ ಕೊಡ್ತೀನಿ ಎಂದರು ಶಿವಣ್ಣ. 

ನಾನು ಸುಮ್ಮನೆ ಹೇಳುತ್ತಿರಬೇಕು ಅಂದುಕೊಂಡೆ, ಆದರೆ ಎಷ್ಟೇ ಆಗಲಿ ಅಣ್ಣಾವ್ರ ರಕ್ತ ಅಲ್ವಾ, ಆಕಾಶ ನೋಡದ ಕೈ ಅವರದ್ದು ಪ್ರೀತಿ ಹಂಚುವ ಕೈಗಳು. ಡಿಕೆಡಿ ಶೂಟಿಂಗ್ ಮುಗಿಯುತ್ತಿದ್ದಂತೆ ನನ್ನನ್ನು ಕರೆದು ಶಿವಣ್ಣ ತೊಟ್ಟಿದ್ದ ಜಾಕೆಟ್ ಬಿಚ್ಚಿ ಜಾಕೆಟ್ ಮೇಲೆ ವಿಥ್ ಲಾಟ್ಸ್ ಆಫ್ ಲವ್ ಡಿಯರೆಸ್ಟ್ ಫ್ರೆಂಡ್ ಅನು ಎಂದು ಬರೆದು ಆ ಜಾಕೆಟ್ ನನಗೆ ತೊಡಿಸಿದರು, ಮಮತೆ ಮೆರೆದರು ಶಿವಣ್ಣ' ಎಂದು ಬರೆದುಕೊಂಡಿದ್ದಾರೆ.

ನಿಮ್ಮಲ್ಲಿ ನಾವು ಪರಮಾತ್ಮನನ್ನು ನೋಡುತ್ತಿದ್ದೇವೆ ಶಿವಣ್ಣ ಎಂದು ಮತ್ತೊಮ್ಮೆ ಧನ್ಯವಾದಗಳು ಸರ್ ಎಂದಿದ್ದಾರೆ  ಅನುಶ್ರೀ. ಕ್ಯೂಟ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಶಿವಣ್ಣನಿಂದ ಪಡೆದ ಜಾಕೆಟ್ ನ ವಿಡಿಯೋ ಗೆ ಮೆಚ್ಚುಗೆ ಮಾತುಗಳು ಬರುತ್ತಿವೆ. ಇನ್ನೊಂದು ಕಡೆ ಅನುಶ್ರೀ ಅವರದು ಸ್ವಲ್ಪ ಓವರ್ ಆಕ್ಟಿನ್ಗ್ ಎನ್ನುವ ಕಾಮೆಂಟ್ ಸಹ ಬಂದಿವೆ. ಏನೇ ಇರಲಿ ಶಿವಣ್ಣನ ಈ ವಿಡಿಯೋ ಒಮ್ಮೆ ನೋಡಿ ಹಾಗೆ ವಿಡಿಯೋ ನೋಡಿದ ಬಳಿಕ ಇಷ್ಟವಾದರೆ ಶೇರ್ ಮಾಡಿ ದನ್ಯವಾದಗಳು...