ಅನು ಹರಟೆ ಕಟ್ಟೆಯಲ್ಲಿ ಚಿತ್ರರಂಗದ ಬಗ್ಗೆ ಟಾಪ್ ಆಗಿ ಮಾತನಾಡಿದ ನಟಿಯರು..! ವಿಡೀಯೋ ಇಲ್ಲಿದೆ

By Infoflick Correspondent

Updated:Monday, March 14, 2022, 08:37[IST]

ಅನು ಹರಟೆ ಕಟ್ಟೆಯಲ್ಲಿ ಚಿತ್ರರಂಗದ ಬಗ್ಗೆ ಟಾಪ್ ಆಗಿ ಮಾತನಾಡಿದ ನಟಿಯರು..! ವಿಡೀಯೋ ಇಲ್ಲಿದೆ

ಕನ್ನಡದ ನಿರೂಪಕಿ ಕನ್ನಡ ಕಿರುತೆರೆಯಲ್ಲಿ ಅಭಿಮಾನಿ ಬಳಗ ಹೊಂದಿರುವ ನಟಿ ಅನುಶ್ರೀ (Anushree) ಅವರು ಇತ್ತೀಚಿಗೆ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಹೌದು ಕಳೆದ ಒಂದುವಾರದಿಂದ ಇದಕ್ಕೆ ಸಂಬಂಧಪಟ್ಟ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ನಿರೂಪಕಿ ಅನುಶ್ರೀ ಅವರ ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಕನ್ನಡದ ಈಗಿನ ಟಾಪ್ ನಟಿಯರ ಕೆಲ ಮಾತಿನ ಸಂಭಾಷಣೆಯ ಕುರಿತು ಈ ವಿಡಿಯೋ ಆಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಸಿನಿಮಾರಂಗದಲ್ಲಿ ನಟಿಯರನ್ನು ಹೇಗೆ ನೋಡುತ್ತಾರೆ, ನಟಿಯರು ಯಾವ ಭಾಷೆಯನ್ನು ಮಾತನಾಡಿದರೆ ಸಂಭಾವನೆ ಕಡಿಮೆ ಮತ್ತು ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕೂಡ ಈ ನಟಿಮಣಿಯರು ಮಾತನಾಡಿದ್ದಾರೆ.

ಅನುಶ್ರೀ ಅವರ ಜೊತೆ ಮಾತನಾಡಿರುವ ನಟಿ ಅದಿತಿ ಪ್ರಭುದೇವ್(Aditi Prabhudeva)  ಹಾಗೂ ದಿಯಾ ಖ್ಯಾತಿಯ ಖುಷಿ,  (Kushi) ಜೊತೆಗೆ ಡಾಲಿ ಧನಂಜಯ್ ಅವರ ಜೊತೆ ಅಭಿನಯಿಸಿದ ಬಡವ ರಾಸ್ಕಲ್ ಚಿತ್ರದ ನಟಿ ಅಮೃತಾ ಅಯ್ಯಂಗಾರ್ ಎಲ್ಲರೂ ಒಟ್ಟಿಗೆ ಕೂತು ಮಾತನಾಡಿದ್ದಾರೆ. ಈ ಸಿನಿಮಾರಂಗದಲ್ಲಿ ಯಾವ ರೀತಿ ಆಗುತ್ತದೆ. ಯಾವ ರೀತಿಯ ಸಂಭಾವನೆ ನೀಡುತ್ತಾರೆ. ಹಾಗೆ ಈ ನಟರಿಗಿರುವ ಮಹತ್ವ ನಟಿಯರಿಗೆ ಯಾಕೆ ಇರುವುದಿಲ್ಲ ಎಂದು ಶಾನೆ ಟಾಪ್ ಆಗಿ ಟಾಪ್ ಟಾಕ್ ಮಾಡಿದ್ದಾರೆ ಇವರು. ಜೊತೆಗೆ ಅಭಿನಯದ ವಿಷ್ಯಕ್ಕೆ ಇವರೆಲ್ಲಾ ಹೆಚ್ಚು ಮಾತನಾಡಿದ್ದಾರೆ. ಅದಿತಿ ಪ್ರಭುದೇವ್ ಅವರ ಮಾತಿನ ವೇಗಕ್ಕೆ, ಅವರಾಡುವ ಮಾತಿಗೆ ಫುಲ್ ಫಿದಾ ಆಗಿದ್ದು ಅಭಿಮಾನಿಗಳು ಈ ವಿಡಿಯೋವನ್ನ ಹೆಚ್ಚು ಇಷ್ಟಪಡುತ್ತಿದ್ದಾರೆ ಎನ್ನಲಾಗಿದೆ.  

ಹೌದು ಇದರ ತುಣುಕಿನ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ಪೂರ್ತಿ ವೀಡಿಯೋ ನೋಡಬೇಕೆಂದರೆ ಅನುಶ್ರೀ ಅವರ ಯುಟ್ಯೂಬ್ ಚಾನೆಲ್ ನಲ್ಲಿ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...(Video credit:anushree anchor