ರಾಧೆ ಅವತಾರದಲ್ಲಿ ಮಿಂಚಿದ ಅನು ಪ್ರಭಾಕರ್..! ಫೊಟೋಶೂಟ್ ನೋಡಿ ಫಿದಾ ಆದ ಫ್ಯಾನ್ಸ್

By Infoflick Correspondent

Updated:Thursday, March 24, 2022, 15:42[IST]

ರಾಧೆ ಅವತಾರದಲ್ಲಿ ಮಿಂಚಿದ ಅನು ಪ್ರಭಾಕರ್..! ಫೊಟೋಶೂಟ್ ನೋಡಿ ಫಿದಾ ಆದ ಫ್ಯಾನ್ಸ್

ಕನ್ನಡ ಚಿತ್ರರಂಗದ ಚಂದನವನದ ಮೋಸ್ಟ್ ಬ್ಯೂಟಿಫುಲ್ ನಟಿಯರ ಸಾಲಿನಲ್ಲಿ ಬರುವ ನಟಿ ಅನು ಪ್ರಭಾಕರ್  (Anu Prabhakar)  ಅವರು ಇದೀಗ ಮತ್ತೆ ಬೆಳ್ಳಿತೆರೆ ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. ಹೌದು ನಟನೆಗೆ ಮರಳಿರುವ ನಟಿ ಅನು ಪ್ರಭಾಕರ್ ಅವರು ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರದಲ್ಲಿ ವಿಲನ್ ಪಾತ್ರದ ನಟ ಶ್ರೀಕಾಂತ್ ಅವರಿಗೆ ಮಡದಿಯಾಗಿ ಅಭಿನಯ ಮಾಡಿದ್ದರು. ಈಗಲೂ ಕೂಡ ಅನು ಪ್ರಭಾಕರ್ ಅವರು ಅದೇ ಬ್ಯೂಟಿ, ಅದೇ ಚಾರ್ಮ್ ಉಳಿಸಿಕೊಂಡು ಬಂದಿದ್ದಾರೆ. ಹೌದು ನೋಡಲು ತುಂಬಾ ಸುಂದರವಾಗಿರುವ ನಟಿ ಅನು ಪ್ರಭಾಕರ್ ಅವರು ಇದೀಗ ಬಹಳ ವರ್ಷಗಳ ಬಳಿಕ ಮತ್ತೊಂದು ಫೋಟೋಶೂಟ್ ಮಾಡಿಸಿದ್ದು ಆ ಫೋಟೋಸ್ ಈಗ ಹೆಚ್ಚು ಗಮನ ಸೆಳೆದಿವೆ.

ಹತ್ತೊಂಬತ್ನೂರ ತೊಂಬತ್ತೆಂಟರಲ್ಲಿ ನಟ ಶಿವಣ್ಣ ಅವರ ಜೊತೆ ನಟನೆ ಆರಂಭಿಸಿದ ಅನು ಪ್ರಭಾಕರ್ ಹೃದಯ ಹೃದಯ ಎನ್ನುವ ಸಿನೆಮಾ ಮೂಲಕವೇ ತುಂಬಾನೇ ಹೆಚ್ಚು ಪ್ರಸಿದ್ಧಿ ಪಡೆದವರು. ಬಳಿಕ ಸಿನಿಮಾರಂಗದಲ್ಲಿ ನಟಿ ಅನು ಪ್ರಭಾಕರ್ ಅವರಿಗೆ ಸಿನಿಮಾ ಅವಕಾಶಗಳ ಸುರಿಮಳೆಯೇ ಸುರಿದಿದ್ದು ಯಶಸ್ವಿಯ ತುತ್ತತುದಿಯಲ್ಲಿರುವಾಗಲೇ ನಟಿ ಅನು ಪ್ರಭಾಕರ್ ಅವರು ಮದುವೆಯಾದರು. ಜಯಂತಿ ಅವರ ಮಗನ ಜೊತೆ ಮೊದಲ ಮದುವೆಯಾದ ನಟಿ ಅನು ಪ್ರಭಾಕರ್ ನಂತರದ ದಿನಗಳಲ್ಲಿ ಅವರಿಗೆ ವಿಚ್ಛೇದನ ನೀಡಿ ಕನ್ನಡದ ನಟ ರಘು ಅವರನ್ನು ಮದುವೆಯಾಗಿದ್ದಾರೆ. ಈಗ ಈ ಮುದ್ದಾದ ಜೋಡಿಗೆ ಒಂದು ಹೆಣ್ಣು ಮಗುವಿದೆ ಎಂದು ಹೇಳಲಾಗುತ್ತಿದೆ. 

ನಟಿ ಅನುಪ್ರಭಾಕರ್ ಅವರು ನನ್ನಮ್ಮ ಸೂಪರ್ ಸ್ಟಾರ್ ಷೋ ಗೆ ಬಂದಮೇಲೆ, ಬಹಳ ದಿನಗಳ ನಂತರ ಒಂದು ಫೋಟೋಶೂಟ್ ಮಾಡಿಸಿದ್ದು, ನಟಿಯ ಈ ಕಲರ್ಫುಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಅಸಲಿಗೆ ರಾಧೆ ಗೆಟಪ್ನಲ್ಲಿ ನಟಿ ಅನು ಪ್ರಭಾಕರ್ ಹೇಗೆ ಕಾಣಿಸಿದ್ದಾರೆ ಗೊತ್ತಾ..? ಈ ವಿಡಿಯೋ ನೋಡಿ. ಹಾಗೇನೇ ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸಹ ನಮಗೆ ಕಾಮೆಂಟ್ ಮಾಡಿ ತಿಳಿಸಿ. ಅನು ಪ್ರಭಾಕರ್ ಅವರ ಮುದ್ದಾದ ಈ ಫೋಟೋ ಶೂಟ್ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಜೊತೆಗೆ ಶೇರ್ ಕೂಡ ಮಾಡಿ ಧನ್ಯವಾದಗಳು..( video credit : kannada tv )