ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಟ್ವಿಸ್ಟ್: ಅನುಗೆ ಗೊತ್ತಾಯಿತು ಆರ್ಯನ ಮೊದಲ ಪತ್ನಿ ರಾಜನಂದಿನಿ ಯಾರೆಂದು..?

By Infoflick Correspondent

Updated:Monday, April 4, 2022, 13:46[IST]

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಟ್ವಿಸ್ಟ್: ಅನುಗೆ ಗೊತ್ತಾಯಿತು ಆರ್ಯನ ಮೊದಲ ಪತ್ನಿ ರಾಜನಂದಿನಿ ಯಾರೆಂದು..?

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಅನು ಸಿರಿಮನೆ ಪತಿ ಆರ್ಯವರ್ಧನ್ ಹಿಂದಿನ ಕಥೆಯನ್ನು ಕೆದಕುತ್ತಿದ್ದಾಳೆ. ಆರ್ಯ ಯಾರು.? ಆತ ಹೇಗೆ ರಾಜನಂದಿನಿಯನ್ನು ಮದುವೆಯಾದ.? ವರ್ಧನ್ ಸಂಸ್ಥೆಗೆ ಹೇಗೆ ಬಂದ.? ಸುಭಾಷ್ ಪಾಟೀಲ್ ಆಗಿದ್ದ ಆರ್ಯ ಹೆಸರು ಬದಲಾಯಿಸಿಕೊಮಡಿದ್ದು ಯಾಕೆ.? ರಾಜನಂದಿನಿ ಸಾವನ್ನಪ್ಪಿದ್ದು ಹೇಗೆ ಎಂಬೆಲ್ಲಾ ಕಥೆಯನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾಳೆ. ಆತ ಹೇಳಿದ ಕಥೆಗಳೆಲ್ಲವು ಸುಳ್ಳು ಎಂಬ ಅರಿವು ಈಗ ಅನು ಸಿರಿಮನೆಗೆ ಗೊತ್ತಾಗುತ್ತಿದೆ. 

ಜಲಂಧರ್ ಅನು ಸಿರಿಮನೆಗೆ ಸುಭಾಷ್ ಪಾಟೀಲ್ ಯಾರು.? ಆರ್ಯ ಜೀವನ ಹೇಗಿತ್ತು.? ವರ್ಧನ್ ಕುಟುಂಬಕ್ಕೆ ಏನಾಗಿದೆ.? ರಾಜನಂದಿನಿ ಕಥೆಯೆಲ್ಲವನ್ನು ಹೇಳಿದ್ದಾನೆ. ಈಗ ಆರ್ಯ ಹೇಳಿದ್ದೆಲ್ಲವೂ ಶುದ್ಧ ಸುಳ್ಳು ಎಂಬ ಅರಿವಾಗಿದೆ. ಇದೀಗ ಯಲ್ಲಮ್ಮ ದೇವಿ ಅನು ಸಿರಿಮನೆ ಯಾರು ಎಂಬ ಸತ್ಯವನ್ನು ತೋರಿಸಿದ್ದಾಳೆ. ಧಾರಾವಾಹಿಯಲ್ಲಿ ಈಗ ದಿನಕ್ಕೊಂದು ಟ್ವಿಸ್ಟ್ ಆಗುತ್ತಿದ್ದು, ಆರ್ಯ ನಾಯಕ ಅಲ್ಲ ವಿಲನ್ ಎಂಬ ಸತ್ಯ ಹೊರ ಬರುತ್ತಿದೆ. ಸಂತೋಷ್ ಪಾಟೀಲ್ ಯಾಕೆ ಆರ್ಯ ಆಗಿ ಬದಲಾದ ಎಂಬ ಸತ್ಯ ತಿಳಿಯಲು ವೀಕ್ಷಕರು ಕಾತುರರಾಗಿದ್ದಾರೆ.  

ಇದೀಗ ಜೊತೆ ಜೊತೆಯಲಿ ಧಾರಾವಾಹಿಗೆ ರಾಜನಂದಿನಿ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ರಾಜನಂದಿನಿಯಾಗಿ ನಟಿ ಸೋನು ಗೌಡ ಬಣ್ಣ ಹಚ್ಚಿದ್ದಾರೆ. ಇಷ್ಟು ದಿನ ಹಿರಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಗೌಡ ಈಗ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ರಾಜನಂದಿನಿ ಸುಭಾಷ್ ಪಾಟೀಲ್ ಅನ್ನು ಭೇಟಿಯಾಗಿ, ಇಬ್ಬರು ಈಗ ಮದುವೆಯಾಗಲು ಮುಂದಾಗಿದ್ದಾರೆ. ಆದರೆ ಇದಕ್ಕೆ ರಾಜನಂದಿನಿ ಅವರ ಮನೆಯಲ್ಲಿ ಒಪ್ಪಿಗೆ ನೀಡಿಲ್ಲ. ಾದರೂ ರಾಜನಂದಿನಿ ಸುಭಾಷ್ ಪಾಟೀಲ್ ಅನ್ನು ನಂಬಿ ಬಂದಿದ್ದಾಳೆ. ಸುಭಾಷ್ ಮಾಡುವ ಮೋಸದ ಬಗ್ಗೆ ಮುಂದಷ್ಟೇ ತಿಳಿಯಬೇಕಿದೆ.