Anupama Gowda : ಅನುಪಮಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಹೇಗೆ ಮಾಡಿದ್ದಾರೆ ನೋಡಿ..

By Infoflick Correspondent

Updated:Friday, August 12, 2022, 10:28[IST]

Anupama Gowda :  ಅನುಪಮಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಹೇಗೆ ಮಾಡಿದ್ದಾರೆ ನೋಡಿ..

ಬಾಲ ನಟಿಯಾಗಿ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ನಟಿಸಿ ನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನುಪಮಾ ಗೌಡ ಇಂದು ತಮ್ಮದೇ ಶೈಲಿಯಲ್ಲಿ ನಿರೂಪಣೆ ಮಾಡುತ್ತಾ ಜನ ಮನ ಗೆದ್ದಿದ್ದಾರೆ. ಹಳ್ಳಿ ದುನಿಯಾ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಅನುಪಮಾ ಅಕ್ಕ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿದ ಅನುಪಮಾ ಗೌಡ ಅವರಿಗೆ ಈ ಧಾರಾವಾಹಿ ಹೆಸರು ತಂದು ಕೊಟ್ಟಿತು. ಅಕ್ಕ ಧಾರಾವಾಹಿ ಮುಗಿದ ಮೇಲೆ ಅನುಪಮಾ ಗೌಡ ಮತ್ತೆ ಯಾವುದೇ ಧಾರಾವಾಹಿಗಳನ್ನು ಒಪ್ಪಿಕೊಳ್ಳಲಿಲ್ಲ. 

ಬದಲಿಗೆ ಬಿಗ್ ಬಾಸ್ ಮನೆಗೆ ಬಂದ ಅನುಪಮಾ, ಕೊನೆಯವರೆಗೂ ಆಡಿ, ಫಿನಾಲೆ ತಲುಪಿದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕೆಲ ಸಿನಿಮಾಗಳಲ್ಲಿ ನಟಿಸಿದರು. ನಂತರ ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟ ಅನುಪಮಾ ಗೌಡ, ಈಗ ನಿರೂಪಕಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವ ರಿಯಾಲಿಟಿ ಶೋ ಗಳಿಗೆ ಅನುಪಮಾ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಮಜಾಭಾರತ, ರಾಜಾ-ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.   

ಇದೀಗ ಅನುಪಮಾ ಅವರು  ಪ್ರವಾಸ ಕೈಗೊಂಡಿದ್ದರು. ಕಳೆದ ವಾರ ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಅನುಪಮಾ ಅವರು, ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ಹೇಗೆ ನೆರವೇರಿಸಿದ್ದಾರೆ. ಅಲಂಕಾರವನ್ನು ಹೇಗೆ ಮಾಡಿದ್ದಾರೆ. ಎಂದೆಲ್ಲಾ ವೀಡಿಯೋ ಮಾಡಿರುವ ಅನುಪಮಾ ಗೌಡ ಅವರು, ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅನುಪಮಾ ಗೌಡ ಅವರು ಆಗಾಗ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬ್ಯೂಟಿ ಟಿಪ್ಸ್, ಪ್ರವಾಸದ ವೀಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.