Anupama Gowda : ನಟಿ, ನಿರೂಪಕಿ ಅನುಪಮಾ ಅವರ ಮದುವೆ ಸುದ್ದಿ ಎಷ್ಟು ನಿಜ : ಸತ್ಯ ಇಲ್ಲಿದೆ ನೋಡಿ
Updated:Tuesday, June 7, 2022, 07:22[IST]

ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ಮದುವೆ ಸಮಾರಂಬಗಳು ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ನಿರೂಪಕಿಯ ಬಾಳಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ. ಹೌದು.. ನಿಮ್ಮೆಲ್ಲರ ನೆಚ್ಚಿನ ನಟಿ, ನಿರೂಪಕಿಯ ಮುದುವೆ ನಿಶ್ಚಯವಾಗುವ ಸಮಯ ಹತ್ತಿರ ಬಂದಿದೆ. ಹಾಗಾದರೆ, ಯಾರು ಆ ಹುಡುಗನ ಹೆಸರೇನು ಎಂದು ನೋಡೋಣ ಬನ್ನಿ..
ಬಾಲ ನಟಿಯಾಗಿ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ನಟಿಸಿ ನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನುಪಮಾ ಗೌಡ ಇಂದು ತಮ್ಮದೇ ಶೈಲಿಯಲ್ಲಿ ನಿರೂಪಣೆ ಮಾಡುತ್ತಾ ಜನ ಮನ ಗೆದ್ದಿದ್ದಾರೆ. ಹಳ್ಳಿ ದುನಿಯಾ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಅನುಪಮಾ ಅಕ್ಕ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿದ ಅನುಪಮಾ ಗೌಡ ಅವರಿಗೆ ಈ ಧಾರಾವಾಹಿ ಹೆಸರು ತಂದು ಕೊಟ್ಟಿತು. ಅಕ್ಕ ಧಾರಾವಾಹಿ ಮುಗಿದ ಮೇಲೆ ಅನುಪಮಾ ಗೌಡ ಮತ್ತೆ ಯಾವುದೇ ಧಾರಾವಾಹಿಗಳನ್ನು ಒಪ್ಪಿಕೊಳ್ಳಲಿಲ್ಲ.
ಬದಲಿಗೆ ಬಿಗ್ ಬಾಸ್ ಮನೆಗೆ ಬಂದ ಅನುಪಮಾ, ಕೊನೆಯವರೆಗೂ ಆಡಿ, ಫಿನಾಲೆ ತಲುಪಿದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕೆಲ ಸಿನಿಮಾಗಳಲ್ಲಿ ನಟಿಸಿದರು. ನಂತರ ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟ ಅನುಪಮಾ ಗೌಡ, ಈಗ ನಿರೂಪಕಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವ ರಿಯಾಲಿಟಿ ಶೋ ಗಳಿಗೆ ಅನುಪಮಾ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಮಜಾಭಾರತ, ರಾಜಾ-ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.
ಇದೀಗ ಅನುಪಮಾ ಅವರು ಮದುವೆ ಆಗುವ ಸಮಯ ಕೂಡ ಹತ್ತಿರ ಬಂದಿದೆ. ರಾಜಾ-ರಾಣಿ ಶೋ ಆರಂಭವಾದಾಗಲೇ ನಟಿ ಅನುಪಮಾ ಗೌಡ ಅವರಿಗೆ ಮದುವೆ ಮಾಡಬೇಕೆಂದು ತೀರ್ಮಾನವಾಯಿತು. ಇದಕ್ಕಾಗಿ ನಟಿ ತಾರ ಅವರು ಕೂಡ ಹಲವು ಹುಡುಗರನ್ನು ಅನುಪಮಾ ಗೌಡ ಅವರಿಗೆ ತೋರಿಸಿದ್ದರು. ಆದರೆ, ಅನುಪಮಾ ಅವರು ಯಾರನ್ನೂ ಒಪ್ಪಿರಲಿಲ್ಲ. ಏನಾದರೂ ಮಾಡಿ ಅನುಪಮಾ ಅವರಿಗೆ ಮದುವೆ ಮಾಡಲೇಬೇಕು ಎಂದು ತಾರ ಅವರು ವೇದಿಕೆಯ ಮೇಲೂ ಹೇಳಿದ್ದರು. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅನುಪಮಾ ಗೌಡ ಅವರ ಮದುವೆ ನಡೆಯುವುದಂತೂ ಸತ್ಯ.