Anupama Gowda : ಚೆನ್ನಾಗಿ ನಿರೂಪಣೆ ಮಾಡುತ್ತಿದ್ದರೂ ಅನುಪಮಾ ಗೌಡ ಅವರಿಗೆ ಅನ್ಯಾಯ ಮಾಡಿದ್ದೇಕೆ..? ಇದಕ್ಕೆ ಅನುಪಮಾ ಹೇಳಿದ್ದೇನು ?

By Infoflick Correspondent

Updated:Sunday, June 19, 2022, 12:07[IST]

Anupama Gowda :  ಚೆನ್ನಾಗಿ ನಿರೂಪಣೆ ಮಾಡುತ್ತಿದ್ದರೂ ಅನುಪಮಾ ಗೌಡ ಅವರಿಗೆ ಅನ್ಯಾಯ ಮಾಡಿದ್ದೇಕೆ..? ಇದಕ್ಕೆ ಅನುಪಮಾ ಹೇಳಿದ್ದೇನು ?

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ರಾಜಾ ರಾಣಿ ಎರಡನೇ ಆವೃತ್ತಿ ಶುರುವಾಗಿದೆ. ಇದರ ಮೊದಲನೆಯ ಆವೃತ್ತಿಯಲ್ಲಿ ನಟಿ ತಾರಾ ಮತ್ತು ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದರು. ರಾಜಾ ರಾಣಿ ಸೀಸನ್ 1 ಭರ್ಜರಿ ಯಶಸ್ಸುನ್ನು ಕಂಡಿತ್ತು. ಮೊದಲ ಆವೃತ್ತಿಯನ್ನು ನಟಿ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಇದೀಗ ರಾಜಾ ರಾಣಿ ಸೀಸನ್ 2 ಆರಂಭವಾಗಿದ್ದು, ತೀರ್ಪುಗಾರರಾಗಿ ಮತ್ತೆ ತಾರಾ ಮತ್ತು ಸೃಜನ್ ಬಂದಿದ್ದಾರೆ. ಆದರೆ ನಿರೂಪಕಿಯಾಗಿ ಅನುಪಮಾ ಗೌಡ ಇಲ್ಲ. ಇವರ ಬದಲು ಜಾನ್ವಿ ರಾಯಲ ನಿರೂಪಣೆ ಮಾಡಿದ್ದಾರೆ.  

ಹೀಗಾಗಿ ಈಗ ಎಲ್ಲರಲ್ಲೂ ಅನುಪಮಾ ಗೌಡ ಯಾಕೆ ರಾಜಾ ರಾಣಿ ಶೋ ಅನ್ನು ನಿರೂಪಣೆ ಮಾಡುತ್ತಿಲ್ಲ? ಅವರಿಗೆ ಏನಾಗಿದೆ.? ಪರ್ಸನಲ್ ಕೆಲಸದಲ್ಲಿ ಬ್ಯುಸಿ ಇದ್ದಾರಾ.? ಬೇಕಂತಲೇ ಅವರನ್ನು ಅವಾಯ್ಡ್ ಮಾಡಲಾಗಿದೆಯಾ ಎಂದೆಲ್ಲಾ ಪ್ರಶ್ನೆಗಳು, ಚರ್ಚೆಗಳು ಆರಂಭವಾಗಿವೆ. ಇದಕ್ಕೆ ತೆರೆ ಎಳೆದಿರುವ ಅನುಪಮಾ ಅವರೇ ಸ್ವತಃ ಮಾತನಾಡಿದ್ದಾರೆ. ನಾನು ಯಾವ ಚಾನೆಲ್ ನಲ್ಲೂ ಕೆಲಸ ಮಾಡುತ್ತಿಲ್ಲ. ಕೊಂಚ ಬ್ಯುಸಿ ಇದ್ದೆ ಹೀಗಾಗಿ ರಾಜಾ ರಾಣಿ ಶೋ ಗೆ ನನ್ನನ್ನು ಕರೆದಿಲ್ಲ ಎನಿಸುತ್ತದೆ. 

ನನಗೆ ಅಲ್ಲಿಂದ ಕರೆ ಬಂದಿದ್ದರೆ, ಖುಷಿಯಿಂದ ಶೋ ಮಾಡ್ತಿದ್ದೆ. ಆದರೆ ನನಗೆ ಕರೆ ಬಂದಿಲ್ಲ. ಹಾಗಾಗಿ ಶೋನಿಂದ ದೂರ ಉಳಿದಿದ್ದೇನೆ ಎಂದು ಹೇಳಿದ್ದಾರೆ.  ನಿಮಗೆಷ್ಟು ನಿರಾಸೆಯಾಗಿದೆಯೋ ಅಷ್ಟೇ ಬೇಸರ ನನಗೂ ಆಗಿದೆ. ಆದರೆ ಈ ಬಗ್ಗೆ ಸುಮ್ಮನೆ ಏನೇನೋ ಚರ್ಚೆ ಮಾಡಬೇಡಿ ಎಂದು ಹೇಳಿದ್ದಾರೆ. ಇನ್ನು ಕೆಲ ವಿಚಾರಗಳ ಬಗ್ಗೆ ನಾನಿಲ್ಲಿ ಪ್ರಸ್ತಾಪಿಸುವುದು ಒಳ್ಳೆಯದಲ್ಲ ಎಂದು ಕೂಡ ಹೇಳಿದ್ದಾರೆ. ಅನುಪಮಾ ಅವರ ಮಾತುಗಳು ಪ್ರೇಕ್ಷಕರನ್ನು ಕೊಂಚ ನಿರಾಳಗೊಳಿಸಿದ್ದರೂ ಸಹ ಮತ್ತಷ್ಟು ಗೊಂದಲಕ್ಕೆ ಅಣಿಮಾಡಿಕೊಟ್ಟಿದೆ. ಅದೇನೇ ಇರಲಿ. ಅನುಪಮಾ ಗೌಡ ಮತ್ತೆ ನಿರೂಪಣೆ ಮಾಡಲಿ ಎಂಬುದೇ ಹಲವರ ಆಶಯವಾಗಿದೆ. 

 ಇದರ ವಿಷಯವಾಗಿ ಸ್ವತಃ ಅನುಪಮಾ ಅವರು ಲೈವ್ ಬಂದು ಈ ವಿಡಿಯೋದಲ್ಲಿ ಏನು ಹೇಳಿದ್ದಾರೆ ನೋಡಿ