Anupama Gowda : ಅನುಪಮಾ ಗೌಡ‌ ಮನೆಗೆ ಹೊಸ ಅತಿಥಿಯ ಆಗಮನ ! ಹಳೆ ಬಾಯ್ ಫ್ರೆಂಡ್ ಗೆ ಬಾಯ್ ಹೇಳಿದ ಮಾತಿನ ಚೆಲುವೆ

By Infoflick Correspondent

Updated:Sunday, August 14, 2022, 20:26[IST]

Anupama Gowda : ಅನುಪಮಾ ಗೌಡ‌ ಮನೆಗೆ ಹೊಸ ಅತಿಥಿಯ ಆಗಮನ ! ಹಳೆ ಬಾಯ್ ಫ್ರೆಂಡ್ ಗೆ ಬಾಯ್ ಹೇಳಿದ ಮಾತಿನ ಚೆಲುವೆ

ತಮ್ಮ ಸ್ವಂತ ದುಡಿಮೆಯಿಂದ ಯಾರ ಪ್ರಭಾವಳಿಯೂ ಇಲ್ಲದೆ ಸ್ವ ಪರಿಶ್ರಮದಿಂದ ಹಂತ ಹಂತವಾಗಿ ಮೇಲೆ ಬರುತ್ತಿರುವ ಅನುಪಮಾ ಗೌಡ ಅವರ ಬಗ್ಗೆ ಸಾಕಷ್ಟು ಜನರಿಗೆ ಅಭಿಮಾನವಿದೆ. ನಟಿಯಾಗಿ ನಿರೂಪಕರಾಗಿ ಹಾಗೂ ಜಾಹೀರಾತಿನಲ್ಲಿಯೂ ಕೂಡ ಕಾಣಿಸಿಕೊಳ್ಳುವ ನಟಿ ಅನುಪಮಾ ಗೌಡ ಕರ್ನಾಟಕದ ಪ್ರಖ್ಯಾತ ಫೇಸ್‌ಗಳಲ್ಲಿ ಒಬ್ಬರು.ನಟಿ ಅನುಪಮಾ ಗೌಡ ’ನಮ್ಮಮ್ಮ ಸೂಪರ್ ಸ್ಟಾರ್’, ’ರಾಜ ರಾಣಿ’ ಕಾಮೆಡಿ ಶೋ ಮೊದಲಾದ ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಅವರ ನಿರೂಪಣೆಗೆ ಅಪಾರ ಬೇಡಿಕೆ ಇದೆ. ಆದರೆ ಸದ್ಯ ನಿರೂಪಣೆಯಿಂದ ದೂರ ಉಳಿದ ಅನುಪಮಾ ಯೂಟ್ಯೂಬ್ ಹಾಗು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. 

ಅನುಪಮಾ ಗೌಡ ಅವರಿಗೆ ಟ್ರಾವೆಲಿಂಗ್ ಅಂದ್ರೆ ಕ್ರೇಜ್!, ಹಲವಾರು ಟ್ರಾವಲ್ ವಿಡಿಯೋ ಮಾಡುತ್ತಿರುತ್ತಾರೆ. ಆದರೆ ಈಗ ಅವರ ಬಳಿ ಇದ್ದ ಕ್ರೆಟ ಕಾರಿನಲ್ಲಿ ಸಾಕಷ್ಟು ಪ್ರಯಾಣ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರ ಬಳಿ ಇದ್ದ ಈ ಕಾರಿನಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಗೆಳೆಯನಂತಿದ್ದ ತನ್ನ ಕಾರಿಗೆ ಇದೀಗ ಗುಡ್ ಬಾಯ್ ಹೇಳಿದ್ದಾರೆ ಅನುಪಮಾ.  

ಅನುಪಮಾ ಗೌಡ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು ತಮ್ಮ ಬಳಿ ಇದ್ದ ಕಾರನ್ನು ಮಾರಿ ಹೊಸ ಕಾರ್ ಖರೀದಿಸಿದ್ದಾರೆ. ಹೌದು ಕೆಂಪು ಕಪ್ಪು ಬಣ್ಣದ ಮಹೇಂದ್ರ ತಾರ್ ಕಾರನ್ನು ಅನುಪಮಾ ಗೌಡ ಖರೀದಿಸಿದ್ದು ಹಳೆಯ ಕಾರಿಗೆ ಗುಡ್ ಬಾಯ್ ಹೇಳಿ ಹೊಸ ಕಾರಿನೊಂದಿಗೆ ಇನ್ನು ತನ್ನ ಪ್ರಯಾಣ ಆರಂಭ ಅಂತ ಸಣ್ಣ ವಿಡಿಯೋ ಒಂದನ್ನ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಿನ ಬೆಲೆ ಸುಮಾರು 17 ಲಕ್ಷಕ್ಕೂ ಅಧಿಕ.