Anupama Gowda : ಜೇಮ್ಸ್ ಬಾಂಡ್ ದ್ವೀಪದ ಮುಂದೆ ನಟಿ ಅನುಪಮಾ ಗೌಡ..! ಸೋಲೊ ಟ್ರಿಪ್ ಫೋಟೋಸ್ ವೈರಲ್

By Infoflick Correspondent

Updated:Tuesday, June 14, 2022, 19:38[IST]

Anupama Gowda :  ಜೇಮ್ಸ್ ಬಾಂಡ್ ದ್ವೀಪದ ಮುಂದೆ ನಟಿ ಅನುಪಮಾ ಗೌಡ..! ಸೋಲೊ ಟ್ರಿಪ್ ಫೋಟೋಸ್ ವೈರಲ್

ಕನ್ನಡ ಕಿರುತೆರೆ ಖ್ಯಾತ ನಿರೂಪಣೆ ಮಾಡುವರ ಪಟ್ಟಿಯಲ್ಲಿ ಇದೀಗ ಅನುಪಮ ಗೌಡ ಅವರು ಕೂಡ ಸೇರಿಕೊಂಡಿದ್ದಾರೆ ಎನ್ನಬಹುದು. ಹೌದು ಆರಂಭದ ದಿನಗಳಲ್ಲಿ ಕೆಲ ಕನ್ನಡ ಕಿರುತೆರೆಯ ಸೀರಿಯಲ್ ನಟಿಯಾಗಿ ಮಿಂಚಿದ್ದ ತದನಂತರ ಕೆಲ ದೊಡ್ಡ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದು ಹೆಚ್ಚು ಯಶಸ್ಸು ಸಿಗದ ಕಾರಣ ಬಿಗ್ಬಾಸ್ ಮನೆಗೆ ಹೋಗಿ ಬಂದಿದ್ದ ಅನುಪಮಾ ಗೌಡ ಅವರು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಮಿಂಚುತ್ತಿದ್ದಾರೆ. ಅಕ್ಕ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾದ ನಟಿ ಅನುಪಮ ಗೌಡ ಅವರು ಕೆಲವು ದಿನಗಳ ಹಿಂದೆ ಬಿಗ್ಬಾಸ್ ಮನೆಗೆ ಹೋಗಿ  ಬಳಿಕ ನಿರೂಪಣೆಯಲ್ಲಿ ತಮ್ಮನ್ನು ತಾವು ಹೆಚ್ಚಾಗಿಯೇ ವೇದಿಕೆ ಮೇಲೆ ತೊಡಗಿಸಿಕೊಂಡವರು ಎನ್ನಬಹುದು.

ಈ ರಾಜಾರಾಣಿ ಸೀಸನ್ 1 ರಲ್ಲಿ ನಿರೂಪಕಿ ಅನುಪಮಾ ಅವರೇ ನಿರೂಪಣೆ ಮಾಡಿ ಸೈ ಎನಿಸಿಕೊಂಡವರು. ಹೌದು ಇದೀಗ ನಟಿ ಅನುಪಮ ಗೌಡ ಅವರು ಸೋಲೋ ಟ್ರಿಪ್ ಕೈಗೊಂಡಿದ್ದಾರೆ ಎನ್ನಲಾಗಿದೆ. ಅದು ಎಲ್ಲಿ ಅಂತೀರಾ ಥೈಲಂಡ್ ಕಡೆ ಮುಖ ಮಾಡಿದ್ದಾರೆ ಅನುಪಮಾ ಗೌಡ. ಈ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಅವರ ಥೈಲಂಡ್ ಸೋಲೋ ಟ್ರಿಪ್ ನ ಫೋಟೋ ಮತ್ತು ವಿಡಿಯೋಗಳು ರಾರಾಜಿಸುತ್ತಿವೆ. ನಟಿ ಅನುಪಮ ಗೌಡ ಅವರು ಒಬ್ಬರೇ ಸೋಲೋ ಟ್ರಿಪ್ ಕೈಗೊಂಡಿದ್ದು, ಫುಕೆಟ್ ಗಲ್ಲಿಗಲ್ಲಿಗಳಲ್ಲಿ ತಿರುಗಾಡಿದ ವಿಡಿಯೋ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಸುಮಾರು ಐದು ದಿನಗಳ ಕಾಲ ಪುಕೆಟ್ ಮತ್ತು ಬ್ಯಾಂಕಾಕ್ನಲ್ಲಿ ನೆಲೆಸಿದ್ದರಂತೆ.   

ಅಲ್ಲಿಯ ಕೆಲ ಚಿತ್ರಣದ ಫೋಟೋಗಳನ್ನು ಕೂಡ ನೀವು ಇಲ್ಲಿ ನೋಡಬಹುದು. ಅನುಪಮ ಗೌಡ ಥೈಲಂಡ್ನ ಪ್ರವಾಸಿ ತಾಣ ಜೇಮ್ಸ್ ಬಾಂಡ್ ದ್ವೀಪದ ಮುಂದೆ ನಿಂತಿರುವ ಚಿತ್ರಣ ನಿಜಕ್ಕೂ ಬೆರಗಾಗುವಂತೆ ಮಾಡುತ್ತದೆ. ಹೌದು ಇಲ್ಲಿವೆ ನೋಡಿ ಆ ಸೋಲೋ ಟ್ರಿಪ್ ಕೈಗೊಂಡಿರುವ ಅನುಪಮಾ ಅವರ ಫೋಟೋಸ್ ಮತ್ತು ವಿಡಿಯೋಗಳು. ಥೈಲ್ಯಾಂಡ್ ಪ್ರವಾಸದ ಚಿತ್ರಣ ತೆಗೆದು ಫೋಟೋಗಳನ್ನು ಅನುಪಮ ಗೌಡ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಸೋಲೋ ಪ್ರಯಾಣದ ಸುಂದರ ಕ್ಷಣಗಳಲ್ಲಿ ಅನುಪಮಾ ಅವರು ಖುಷಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಪುಕೆಟ್ ಪ್ರವಾಸ ಕೈಗೊಂಡ ನಟಿ ಅನುಪಮಾ ಫೋಟೋಸ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.