Anupama Gowda : ನೋವಿನಿಂದ ಸತ್ಯ ತಿಳಿಸಿದ ಅನುಪಮಾ..! ಸ್ವತಃ ತಾವೇ ರಾಜ ರಾಣಿ ಷೋದಿಂದ ಹಿಂದೆ ಸರಿದಿಲ್ಲವಂತೆ..!
Updated:Monday, June 13, 2022, 12:11[IST]

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ರಾಜರಾಣಿ ಸೀಸನ್-2 ಮತ್ತೆ ತನ್ನ ಮುನ್ನೋಟ ಆರಂಭಿಸಿದೆ. ಎರಡನೇ ಅಧ್ಯಾಯ ಶುರು ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಗ್ರಾಂಡ್ ಓಪನಿಂಗ್ ಕೂಡ ನಡೆದಿದ್ದು, ರಿಯಾಲಿಟಿ ಶೋನಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಕೆಲವು ರಿಯಲ್ ಜೋಡಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೌದು ರಾಜಾರಾಣಿ ಮೊದಲ ಸೀಸನ್ನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದಿದ್ದ ಅಕ್ಕ ಸೀರಿಯಲ್ ನ ಖ್ಯಾತ ನಟಿ ಅನುಪಮಾ ಗೌಡ ಅವರು ಭರ್ಜರಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಹಾಗೇನೇ ಯಶಸ್ವಿ ಸೀಸನ್ ಕೂಡ ಆಗಿ ರಾಜಾರಾಣಿ ಸೀಸನ್ ಒಂದು ಹೊರಹೊಮ್ಮಿತ್ತು. ಹೌದು ಈ ಬಾರಿ ಮತ್ತೆ ಎರಡನೇ ಸೀಸನ್ ಆರಂಭ ಮಾಡಿದ್ದು, ರಾಜ ರಾಣಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ನಟಿ ತಾರಾ ಹಾಗೂ ಸೃಜನ್ ಅವರೇ ಮುಂದುವರೆಯುತ್ತಿದ್ದಾರೆ. ಆದರೆ ನಿರೂಪಕಿ ಸ್ಥಾನದಲ್ಲಿ ಬದಲಾವಣೆ ಆಗಿದೆ. ನಟಿ ಅನುಪಮ ಗೌಡ ಈ ಬಾರಿ ಕಾಣಿಸಿಕೊಂಡಿಲ್ಲ.
ಈ ವಿಷಯ ಅವರ ಅಭಿಮಾನಿ ಬಳಗದ ಮೂಲಕ ಚರ್ಚೆ ಆಗುತ್ತಿದೆ. ಅದಕ್ಕೆ ಸ್ಪಷ್ಟನೆ ನೀಡುತ್ತಿರುವ ನಟಿ ಹಾಗೂ ನಿರೂಪಕಿ ಅನುಪಮ ಗೌಡ ಅವರು ಈ ಬಗ್ಗೆ ಹೇಳಿದ್ದೇ ಬೇರೆ. ಅನುಪಮ ಗೌಡ ಅವರು ಹೇಳುವ ಹಾಗೆ 'ನಾನು ಶೋ ಇಂದ ಹಿಂದೆ ಸರಿದಿಲ್ಲ, ಬದಲಿಗೆ ನಾನು ಸ್ವಲ್ಪ ಬಿಜಿ ಇದ್ದೆ, ನನ್ನ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ನಾನು ಕೂಡ ರಾಜಾರಾಣಿ ಕಾರ್ಯಕ್ರಮದಿಂದ ಫೋನ್ ಬರುತ್ತದೆ ಎಂದುಕೊಂಡಿದ್ದೆ, ಆದರೆ ಅದು ಬರಲಿಲ್ಲ, ಇನ್ನು ಕೆಲವರು ನಾನು ಸುವರ್ಣದಲ್ಲಿ ನಿರೂಪಣೆ ಮಾಡುತ್ತಿದ್ದೇ ಎಂದರು. ಮತ್ತು ಜೀ ಕನ್ನಡದಲ್ಲಿ ಸೂಪರ್ ಜೋಡಿ ಎನ್ನುವ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದೇನೆ ಎಂದೆಲ್ಲಾ ಹೇಳುತ್ತಿದ್ದಾರೆ, ಹಾಗಾಗಿದ್ದಲ್ಲಿ ಇಷ್ಟೊತ್ತಿಗೆ ಶೂಟಿಂಗ್ನಲ್ಲಿ ಭಾಗಿಯಾಗಬೇಕಿತ್ತು ಅಲ್ಲವೇ, ಅದು ಆಗಲಿಲ್ಲ ಅಲ್ವಾ, ಇದರ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ.
ಯಾವ ಕಾರಣಕ್ಕೆ ನನಗೆ ರಾಜ ರಾಣಿ ಕಾರ್ಯಕ್ರಮದಿಂದ ಫೋನ್ ಬಂದಿಲ್ಲ ಎಂದು ನನಗೆ ಈಗಲೂ ತಿಳಿಯುತ್ತಿಲ್ಲ. ಒಂದು ವೇಳೆ ಫೋನ್ ಬಂದಿದ್ದರೆ, ನಾನು ಖುಷಿಯಿಂದಲೇ ಹೋಗಿ ನಿರೂಪಣೆ ಮಾಡುತ್ತಿದ್ದೆ. ಷೋ ಕಂಟೆಸ್ಟೆಂಟ್ ಗಳನ್ನು ಮತ್ತು ವೇದಿಕೆಯನ್ನು ಜೊತೆಗೆ ತಾರಮ್ಮ ಮತ್ತು ಸೃಜನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ನೋವಿನಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಆದಷ್ಟು ಬೇಗ ಮತ್ತೊಂದು ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಬರುತ್ತೇನೆ ಎಂದಿದ್ದಾರೆ ಅನುಪಮಾಗೌಡ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಹಾಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....