ಅನುಷ್ಕಾ ಶೆಟ್ಟಿ ಅವರ ಮದುವೆ ಬಗ್ಗೆ ಜ್ಯೋತಿಷಿಗಳು ಹೇಳಿದ್ದೇನು..?

By Infoflick Correspondent

Updated:Friday, May 20, 2022, 11:03[IST]

ಅನುಷ್ಕಾ ಶೆಟ್ಟಿ ಅವರ ಮದುವೆ ಬಗ್ಗೆ ಜ್ಯೋತಿಷಿಗಳು ಹೇಳಿದ್ದೇನು..?

ಸೆಲೆಬ್ರಿಟಿಗಳು ತಮ್ಮ ಸ್ಟೇಟಸ್ ಗೆ ತಕ್ಕಂತವರ ಸ್ನೇಹ, ಸಂಬಂಧವನ್ನು ಬೆಳೆಸುತ್ತಾರೆ. ಇನ್ನು ಅವರ ಆಳು ಕಾಳುಗಳನ್ನು ತುಂಬಾ ಕೀಳಾಗಿ ನೋಡಿಕೊಳ್ಳುತ್ತಾರೆ. ಸ್ಟಾರ್ ಗಳಿಗೆ ಅವರ ಅಸಿಸ್ಟೆಂಟ್ ಗಳು, ಕಾರ್ ಡ್ರೈವರ್ಸ್, ಅಡುಗೆ ಮಾಡುವವರು, ಮನೆ ಕೆಲಸದವರ ಕಷ್ಟವನ್ನು ಕೇಳುವಷ್ಟು ಅಥವಾ ತಿಳಿದುಕೊಳ್ಳುವಷ್ಟು ತಾಳ್ಮೆ ಇರೋದಿಲ್ಲ. ಆದರೆ, ಕೆಲ ಸೆಲಬ್ರಿಟಿಗಳು ಹಾಗಲ್ಲ. ತಮ್ಮ ಬಳಿ ಕೆಲಸಕ್ಕಿರುವವರನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಅವರ ಕಷ್ಟಕ್ಕೆ ಜೊತೆಯಾಗಿ ಸಹಾಯ ಮಾಡುತ್ತಾರೆ. ಅಂತಹ ಸೆಲೆಬ್ರಿಟಿಗಳಲ್ಲಿ ಒಬ್ಬರು ಅನುಷ್ಕಾ ಶೆಟ್ಟಿ.  

ಮಂಗಳೂರು ಮೂಲದ ಅನುಷ್ಕಾ ಶೆಟ್ಟಿ ಅವರು ಕಳೆದ ವರ್ಷ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಡ್ರೈವರ್ ಗೆ ಬರೋಬ್ಬರಿ 12 ಲಕ್ಷ ಮೌಲ್ಯದ ಕಾರ್ ಅನ್ನು ಗಿಫ್ಟ್ ಮಾಡಿದ್ದರು. ಅಷ್ಟೇ ಅಲ್ಲದೇ, ನನಗಾಗಿ ಕಷ್ಟ ಪಡುವ ಡ್ರೈವರ್ ಗೆ ಕಾರ್ ಕೊಡಿಸಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಅವರು ಚೆನ್ನಾಗಿದ್ದಾರೆ ಅಷ್ಟೇ ಸಾಕು ಎಂದು ಕೂಡ ಹೇಳಿದ್ದರು. ನಮ್ಮ ನಿಮ್ಮ ನೆಚ್ಚಿನ ದೇವಸಾನಿ ಅನುಷ್ಕಾ ಶೆಟ್ಟಿ, ಅವರಿಗೆ ಈಗಾಗಲೇ, 40 ವರ್ಷ ವಯಸ್ಸಾಗಿದೆ. ಆದರೆ ಅವರಿನ್ನೂ ಮದುವೆಯಾಗುವ ಯಾವುದೇ ಯೋಚನೆಯನ್ನು ಮಾಡಿಲ್ಲ. 

ಆದರೆ ಇದೀಗ, ಪ್ರಮುಖ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಅವರು ಅನುಷ್ಕಾ ಶೆಟ್ಟಿ ಮದುವೆಯ ಭವಿಷ್ಯ ನುಡಿದಿದ್ದಾರೆ. ಅವರು ನುಡಿದ ಭವಿಷ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. 2023ರ ವೇಳೆಗೆ ಅನುಷ್ಕಾ ಮದುವೆಯಾಗುತ್ತಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಅಷ್ಟರಲ್ಲಿ ಮದುವೆಯಾಗದಿದ್ದರೆ, ಅನುಷ್ಕಾ ಅವರಿಗೆ ಇನ್ನೆಂದೂ ಕಂಕಣ ಬಲ ಕೂಡಿ ಬರುವುದಿಲ್ಲ ಎಂದು ಕೂಡ ಹೇಳಿದ್ದಾಳೆ. ಈ ಮಾತನ್ನು ಕೇಳಿದ ಅನುಷ್ಕಾ ಶೆಟ್ಟಿ ಅವರು ಪೋಷಕರು ಕಂಗಾಲಾಗಿದ್ದು, ಅನುಷ್ಕಾ ಅವರ ಮದುವೆ ಮಾಡಲು ಮುಂದಾಗಿದ್ದಾರೆ.