ಮದುವೆ ಯಾವಾಗ ಹಾಗು ವಯಸ್ಸು ಎಷ್ಟು ಎಂಬ ಪ್ರಶ್ನೆಗೆ ಇಲ್ಲಿದೆ ಅನುಶ್ರೀ ನೇರ ಉತ್ತರ

By Infoflick Correspondent

Updated:Monday, August 15, 2022, 09:19[IST]

ಮದುವೆ ಯಾವಾಗ ಹಾಗು ವಯಸ್ಸು ಎಷ್ಟು ಎಂಬ ಪ್ರಶ್ನೆಗೆ ಇಲ್ಲಿದೆ ಅನುಶ್ರೀ ನೇರ ಉತ್ತರ

ಕನ್ನಡದ ಅತ್ಯಂತ ಬೇಡಿಕೆಯ ನಿರೂಪಕಿ ಅನುಶ್ರೀ ಹಲವು ದಿನಗಳ ಬಳಿಕ ಇನ್ಸ್ಟಾಗ್ರಾಮ್​  ನಲ್ಲಿ ಲೈವ್​ ಬಂದಿದ್ದರು. ಅಭಿಮಾನಿಗಳು ಕೇಳಿದ ಈ ಪ್ರಶ್ನೆಗೆ ಅನುಶ್ರೀ ನೇರವಾಗಿ ಖಾರವಾಗಿಯೇ ಉತ್ತರಿಸಿದ್ದಾರೆ. ಅನುಶ್ರೀ ಎಲ್ಲಿಗೆ ಹೋದರು ಅವರು ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಅಂತ ಕೇಳುತ್ತಿದ್ದಾರೆ . ಎಲ್ಲದ್ದಕ್ಕೂ ಸಮಾಧಾನವಾಗಿಯೇ ಉತ್ತರ ಕೊಡುತ್ತ ಬಂದ ಅನುಶ್ರೀ, ಮೊನ್ನೆ ಇನ್ಸ್ಟಾಗ್ರಾಮ್​ನಲ್ಲಿ ಲೈವ್​ಗೆ ಬಂದ ವೇಳೆ ಮದುವೆ ಹಾಗು ವಯಸ್ಸಿನ ಬಗ್ಗೆ ಕೇಳಿದ ಪ್ರಶ್ನೆಗೆ  ಕೊಂಚ ಗರಂ ಆಗಿ ಹೀಗೆ ಉತ್ತರಿಸಿದ್ದಾರೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು ಅನುಶ್ರೀ. ಆಗ ಅಭಿಮಾನಿಗಳು ಮದುವೆ ಮತ್ತು ಮಕ್ಕಳು ಯಾವಾಗ ಎಂದು ಅನುಶ್ರೀ ಅವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅನುಶ್ರೀ ಕೊಟ್ಟ ಉತ್ತರ ಇಲ್ಲಿದೆ ನೋಡಿ “ಮದುವೆ ಯಾವಾಗ.. ಮದುವೆ ಆದ್ಮೇಲೆ ಮಕ್ಕಳು ಯಾವಾಗ ಅಂತ ಕೇಳ್ತೀರಾ.. ಮಗು ಆದಮೇಲೆ ಮಗುವನ್ನ ಸ್ಕೂಲ್ ಗೆ ಸೇರಿಸೋದು ಯಾವಾಗ ಅಂತ ಕೇಳ್ತೀರಾ.

ಆಮೇಲೆ ನನ್ನ ಮಗು ಹತ್ರ ನಿಮ್ಮ ಮದುವೆ ಯಾವಾಗ ಅಂತ ಕೇಳ್ತೀರಾ.. ಆಮೇಲೆ ನನಗೆ ಮೊಮ್ಮಕ್ಕಳು ಯಾವಾಗ ಅಂತ ಕೇಳ್ತೀರಾ..”. ಸೋ ಒಬ್ಬೊಬ್ಬರ ಜೀವನದಲ್ಲಿ ಕೆಲವು ಉತ್ತರ ಯಾವ ಟೈಮ್ ಗೆ ಬರಬೇಕೋ ಆ ಟೈಮ್ ಗೆ ಬರುತ್ತೆ ಅಲ್ವಾ.. ಸೋ ಹಾಗಾಗಿ ಎಲ್ಲರೂ ಈ ಮದುವೆ ವಿಚಾರ ಬಿಟ್ಟು ಬೇರೆ ಏನಾದರೂ ಮಾತಾಡೋಣ. ಈ ವರ್ಷದ ಖುಷಿ ಖುಷಿಯ ವಿಚಾರ, ಎಲ್ಲರೂ ನಗುನಗುತ್ತಾ ಇರುವಂತಹ ವಿಚಾರ ಮಾತಾಡೋಣ. ಅಂತಹ ಪ್ರಶ್ನೆಯನ್ನು ಪ್ಲೀಸ್ ಕೇಳಿ ..” ಎಂದು ಹೇಳಿದ್ದರು.

ವಯಸ್ಸಿನ ಬಗ್ಗೆ ಮಾತಾಡಿದ ಅಭಿಮಾನಿಗೆ ಅನುಶ್ರೀ ಕೊಂಚ ಖಾರವಾಗಿಯೇ ಉತ್ತರಿಸಿದ್ದಾರೆ. ವಯಸ್ಸು ಎಲ್ಲರಿಗೂ ಆಗುತ್ತೆ. ನಿಮಗೂ ಮುಂದೆ ವಯಸ್ಸಾಗುತ್ತೆ, ನೀವೂ ಕೂಡ ಒಂದಲ್ಲ ಒಂದು ದಿನ ತಾತಾ ಆಗ್ತೀರಾ. ನಿಮ್ಮ ತಾಯಿ ಅಜ್ಜಿ ಆಗ್ತಾರೆ. ನಿಮ್ಮ ಅಕ್ಕ-ತಂಗಿಗೂ ವಯಸ್ಸಾಗುತ್ತೆ. ಹಾಗೇ ಎಲ್ಲರಿಗೂ ವಯಸ್ಸಾಗುತ್ತೆ. ನಾವೇನು ದೇವಲೋಕದಿಂದ ಅಮೃತ ಕುಡಿದು ಇಳಿದು ಬಂದವರಾ ಅಂತ ಅಭಿಮಾನಿಗೆ ಅನುಶ್ರೀ ಮರುಪ್ರಶ್ನೆ ಹಾಕಿದ್ದಾರೆ.

ಅಭಿಮಾನಿಯೊಬ್ಬ ಇವತ್ತು ಲೈವ್ ಬಂದಿದ್ದು ಯಾಕೆ ಅಂತ ಪ್ರಶ್ನಿಸಿದ್ರು ಇದಕ್ಕೆ ಉತ್ತರಿಸಿದ ಅನುಶ್ರೀ ಯಾವುದಕ್ಕೂ ಗ್ಯಾರೆಂಟಿ ಇರಲ್ಲ ಅದಕ್ಕೆ ಲೈವ್​ ಬಂದಿದ್ದೇನೆ. ಇನ್ಮೇಲೆ ಏನ್​ ಮಾಡ್ಬೇಕು ಅನ್ಸುತ್ತೋ ಮಾಡಿಬಿಡಬೇಕು ತುಂಬಾ ಯೋಚನೆ ಮಾಡ್ಬಾರದು ಅಂತ ಅನುಶ್ರೀ  ಹೇಳಿದ್ದಾರೆ.