Anushree : ಕನಸನ್ನು ನನಸು ಮಾಡಿಕೊಳ್ಳಲು ಮುಂದಾದ ಆಂಕರ್‌ ಅನುಶ್ರೀ ಅವರು ಮಾಡಿರುವ ನಿರ್ಧಾರವೇನು ಗೊತ್ತಾ..?

By Infoflick Correspondent

Updated:Saturday, July 23, 2022, 19:16[IST]

Anushree :  ಕನಸನ್ನು ನನಸು ಮಾಡಿಕೊಳ್ಳಲು ಮುಂದಾದ ಆಂಕರ್‌ ಅನುಶ್ರೀ ಅವರು ಮಾಡಿರುವ ನಿರ್ಧಾರವೇನು ಗೊತ್ತಾ..?

ಆಂಕರ್ ಅನುಶ್ರೀ ಅವರು ಕೇವಲ ತಮ್ಮ ನಿರೂಪಣೆಯ ಮೂಲಕ ಅಭಿಮಾನಿಳನ್ನು ಸಂಪಾದಿಸಿದ್ದಾರೆ. 15ಕ್ಕೂ ಹೆ್ಚು ವರ್ಷಗಳಿಂದ ಕನ್ನಡದ ನಂಬರ್ ಒನ್ ಆಂಕರ್ ಆಗಿದ್ದಾರೆ. ತಮ್ಮ ಮಾತು, ನಗುವಿನಿಂದಲೇ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು, ಸರಿಗಮಪ ಲಿಟಲ್ ಚಾಂಪಿಯನ್ಸ್ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರೂಪಣೆಯನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೇ ಲಾಕ್ ಡೌನ್ ಸಂದರ್ಭದಲ್ಲಿ ಅನುಶ್ರೀ ಅವರು ಯೂಟ್ಯೂಬ್ ಚಾನೆಲ್ ಅನ್ನು ಕೂಡ ತೆರೆದಿದ್ದಾರೆ.     

ಅನುಶ್ರೀ ಅವರು ತಮಗೆ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಯೂಟ್ಯೂ್ ಚಾನೆಲ್ ನಲ್ಲಿ ಸೆಲಬ್ರಿಟಿಗಳನ್ನು ಕರೆದು ಕೊಂಡು  ಬಂದು ಸಂದರ್ಶನವನ್ನು ಮಾಡುತ್ತಾರೆ. ಈಗಾಗಲೇ, ರಚಿತಾ ರಾಮ್, ಅಭಿಷೇಕ್ ಅಂಬರೀಷ್, ಪುನೀತ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ವಸಿಷ್ಠ ಸಿಂಹ, ಡಾಲಿ ಧನಂಜಯ್, ನಿತ್ಯ ಮೆನನ್ ಸೇರಿದಂತೆ ಹಲವರ ಸಂದರ್ಶನವನ್ನು ಮಾಡಿದ್ದಾರೆ. ಅನುಶ್ರೀ ಅವರು ಯೂಟ್ಯೂಬ್ ಚಾನೆಲ್ ಗೆ 619ಕೆ ಸಬ್ಸ್ ಕ್ರೈಬರ್ಸ್ ಇದ್ದಾರೆ. ಇವರ ವೀಡಿಯೋಗಳು ಐದು ಮಿಲಿಯನ್ ಗೂ ಹೆಚ್ಚು ವ್ಯೂವ್ಸ್ ಪಡೆದಿವೆ. 

ಆಂಕರ್‌ ಅನುಶ್ರೀ ಅವರು ತಮ್ಮ ತಾಯಿ ಹಾಗೂ ತಮ್ಮನಿಗಾಗಿ ಕಷ್ಟಪಟ್ಟಿದ್ದಾರೆ. ಅವರ ಆಸೆಗಳನ್ನು ನೆರವೇರಿಸಿದ್ದಾರೆ. ಇದೀಗ ಅನುಶ್ರೀ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಳೆದ ವಾರ ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನಲ್ಲಿರುವ ಸುಬ್ರಹ್ಮಣ್ಯ ಪುರಂನಲ್ಲಿ ಜಾಗ ಖರೀದಿಸಿ ಭುಮಿ ಪೂಜೆ ನೆರವೇರಿಸಿದ್ದಾರೆ.  ಹೊಸ ಮನೆ ಕಟ್ಟುವ ಕೆಲಸವನ್ನು ಶುರು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನುಶ್ರೀ ಅವರ ತಾಯಿ ಹಾಗೂ ತಮ್ಮ ನೆರದಿದ್ದರು. ಇವರ ಜೊತೆಗೆ ಆಪ್ತರಾಗಿರುವ ವಸ್ತ್ರ ವಿನ್ಯಾಸಕಿ ಅಂಜಲಿ ಕುಟುಂಬದವರೂ ಭಾಗಿಯಾಗಿದ್ದರು.