Anushree : ಡಿಕೆಡಿ ಖ್ಯಾತಿಯ ಅನುಶ್ರೀ ಈಗ ಯಾವ ಅವತಾರದಲ್ಲಿ ಕಾಣಿಸಿದ್ದಾರೆ ಗೊತ್ತಾ..? ಬೆರಗು ಮಾಡುತ್ತೆ ವಿಡಿಯೋ

By Infoflick Correspondent

Updated:Sunday, August 14, 2022, 18:47[IST]

Anushree : ಡಿಕೆಡಿ ಖ್ಯಾತಿಯ ಅನುಶ್ರೀ ಈಗ ಯಾವ ಅವತಾರದಲ್ಲಿ ಕಾಣಿಸಿದ್ದಾರೆ ಗೊತ್ತಾ..? ಬೆರಗು ಮಾಡುತ್ತೆ ವಿಡಿಯೋ

ಮಂಗಳೂರಿನವರಾದ ನಟಿ ಕಮ್ ಯಾಂಕರಿಂಗ್ ಅನುಶ್ರೀ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೌದು ಹೆಚ್ಚು ಚಟಪಟನೆ ಮಾತನಾಡುತ್ತಾ ಆರಂಭದ ದಿನಗಳಲ್ಲಿಯೇ ಹೆಚ್ಚು ನಟನೆಯಲ್ಲಿ ಸಕ್ರಿಯ ಆಗಿದ್ದರು. ಸಿನಿಮಾರಂಗದಲ್ಲಿ ನಟಿಯಾಗಿ ಮಿಂಚಬೇಕು ಎಂದುಕೊಂಡಿದ್ದ ಅನುಶ್ರೀಯವ್ರು ಒಂದೆರಡು ಸಿನಿಮಾದಲ್ಲೂ ಕೂಡ ನಟಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡರು. ಆದರೆ ಯಾವ ಸಿನಿಮಾದಲ್ಲಿಯೂ ನಟಿ ಅನುಶ್ರೀಗೆ ಅಂದುಕೊಂಡಂತೆ ಹೆಚ್ಚು ಯಶಸ್ಸು ಸಿಗಲೇ ಇಲ್ಲ. ಅದಾದ ಬಳಿಕ ನಿರೂಪಣೆಯ ಕಡೆ ಮುಖ ಮಾಡಿದ ಅನುಶ್ರೀಯವರು ಹಂತ ಹಂತವಾಗಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಮುಂದೆ ಬಂದರು. ಸರಿಗಮಪ ವೇದಿಕೆ ಹತ್ತಿದ್ದು ಹಾಗೂ ಕೆಲವೊಂದಿಷ್ಟು ಬೇರೆ ಬೇರೆ ರಿಯಾಲಿಟಿ ಶೋಗಳ ವೇದಿಕೆಯನ್ನು ಹತ್ತಿ ನಿರೂಪಣೆಯನ್ನು ಮಾಡಿ ಕರ್ನಾಟಕದ ಮನೆ ಮಾತದವರು ಅನುಶ್ರೀ.

ಹೌದು ಅನುಶ್ರೀ ಇದೀಗ ಸರಿಗಮಪ ವೇದಿಕೆಯ ಮೂಲಕ ಪೂರ್ತಿ ಪ್ರಮಾಣದ ನಿರೂಪಕಿಯಾಗಿ ಹೊರಹೊಮ್ಮಿದ್ದಾರೆ. ಹೆಚ್ಚು ಟಾಪ್ ನಲ್ಲಿ ಇರುವ ಕನ್ನಡದ ನಿರೂಪಕಿಯಾಗಿದ್ದಾರೆ ಎನ್ನಬಹುದು. ಕನ್ನಡದಲ್ಲಿ ಯಾವುದೇ ಸಿನಿಮಾ ಬಂದರೂ ಹೆಚ್ಚಾಗಿ ಅನುಶ್ರೀ ವೇದಿಕೆ ಮೇಲಿರುವುದ ನೋಡಿದ್ದೀರಾ. ಆ ಸಿನಿಮಾ ಪ್ರಮೋಷನ್ ಆಗಲಿ, ಅಥವಾ ಆ ಸಿನಿಮಾದ ಫ್ರೀ ರಿಲೀಸ್ ಈವೆಂಟ್ ಆಗಲಿ ಎಲ್ಲಾ ಕಾರ್ಯಕ್ರಮದಲ್ಲೂ ಸಹ ಇರುತ್ತಾರೆ.  

ಈಗ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿದ್ದು ಈ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಗಮನ ಸೆಳೆಯುತ್ತಿದ್ದಾರೆ ಅನುತ್ರಿ. ಇದೀಗ ಅವರ ಮತ್ತೊಂದು ವಿಡಿಯೋ ಭರ್ಜರಿ ವೈರಲ್ ಆಗಿದೆ. ಇದು ಹಳೇ ವಿಡಿಯೋ ಆಗಿದೆ ಹಾಗೆ ರಿಂಗ್ ಮಾಸ್ಟರ್ ಎನ್ನುವ ಅವರ ಸಿನಿಮಾದ ಸಾಂಗ್ ಆಗಿದೆ ಎಂದು ತಿಳಿದುಬಂದಿದೆ.

ಇದರಲ್ಲಿ ನಟಿ ಅನುಶ್ರೀ ಅವರು ತುಂಬಾನೇ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಇದೇನಪ್ಪ ಅನುಶ್ರೀ ಅವರು ಹೀಗೆಲ್ಲ ಡ್ಯಾನ್ಸ್ ಮಾಡಿದ್ದಾರ, ನಾವು ಇದನ್ನು ನೋಡಿಯೇ ಇಲ್ಲವಲ್ಲ ಎಂದು ಬಾಯಿ ಮೇಲೆ ಬೆರಳಿಟ್ಟು ಶಾಕ್ ಆಗಿದ್ದಾರೆ. ನೀವು ಕೂಡ ಇವರ ವಿಡಿಯೋ ನೋಡದೆ ಇದ್ದಲ್ಲಿ, ಇಲ್ಲಿದೆ ಒಮ್ಮೆ ನೋಡಿ. ಹಾಗೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ...( video credit : anand video )