Anushree : ಹೊಸ ಮನೆ ಕಟ್ಟಿಸಲು ಮುಂದಾದ ಅನುಶ್ರೀ..! ಭೂಮಿ ಪೂಜೆಯಲ್ಲಿ ತೊಡಗಿದ ಫೋಟೋಸ್ ನೋಡಿ

By Infoflick Correspondent

Updated:Thursday, June 23, 2022, 17:40[IST]

Anushree : ಹೊಸ ಮನೆ ಕಟ್ಟಿಸಲು ಮುಂದಾದ ಅನುಶ್ರೀ..! ಭೂಮಿ ಪೂಜೆಯಲ್ಲಿ ತೊಡಗಿದ ಫೋಟೋಸ್ ನೋಡಿ

ಕಿರುತೆರೆಯ ಲೋಕದ ಬಣ್ಣಬಣ್ಣದ ಕಾರ್ಯಕ್ರಮಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಸಿನಿಮಾ ಇವೆಂಟ್ ಗಳಲ್ಲಿ ಇದೀಗ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಹೊಸ  ಜಾಗವನ್ನು ಖರೀದಿ ಮಾಡಿದ್ದಾರಂತೆ. ಹಾಗೆ ಹೊಸದೊಂದು ಮನೆಯನ್ನು ಕಟ್ಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಹೌದು ಹೊಸಮನೆ ಕಟ್ಟಿಸುವುದಕ್ಕೆ ಇಂದು ಅನುಶ್ರೀ ಅವರು ಭೂಮಿ ಪೂಜೆ ಮಾಡಿದ್ದಾರೆ. ಭೂಮಿ ಪೂಜೆ ವೇಳೆಯಲ್ಲಿ ಅವರು ಮತ್ತು ಅವರ ತಮ್ಮ ಮತ್ತು ತಾಯಿ ಜೊತೆ ಇನ್ನು ಕೂಡ ಕೆಲವರು ಭಾಗಿಯಾಗಿದ್ದರು. ಹನುಮಂತನಗರದ ಶ್ರೀ ಕುಮಾರಸ್ವಾಮಿ ದೇವಾಲಯದ ಅರ್ಚಕರಾಗಿರುವ ಮಂಜುನಾಥ್ ಭಟ್ ಅವರು ಅನುಶ್ರೀ ಕೊಂಡುಕೊಂಡ ಹೊಸ ಜಾಗದ ಪೂಜೆ ಮಾಡಿದ್ದಾರೆ ಎನ್ನಲಾಗಿದೆ.

ಹೌದು ಅನುಶ್ರೀ ಅವರ ಹೊಸಮನೆ ಭೂಮಿ ಪೂಜೆಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ಹೌದು ಅನುಶ್ರೀ ಅವರು ಈಗ ಮನೆ ಕಟ್ಟುತ್ತಿರುವ ಜಾಗ ಜಯನಗರದ ಹೌಸಿಂಗ್ ಸೊಸೈಟಿ ಲೇಔಟ್ ನ ಸುಬ್ರಮಣ್ಯ ಪುರಂನಲ್ಲಿ ಎಂದು ತಿಳಿದುಬಂದಿದೆ. ಈ ಜಾಗವನ್ನು ಖರೀದಿಸಿದ್ದು ಇಂದು ಪೂಜೆ ಸಲ್ಲಿಸಿ ಹೊಸಮನೆ ಶುಭಾರಂಭದ ಕೆಲಸಕ್ಕೆ ಸಜ್ಜಾಗಿದ್ದಾರೆ. 

ಅನುಶ್ರೀ ಯವರ ಜೊತೆ ಅವರ ತಾಯಿ ಮತ್ತು ಸಹೋದರ ಇದ್ದು, ಅನುಶ್ರೀಗೆ ಆಪ್ತ ಆಗಿರುವ ವಸ್ತ್ರ ವಿನ್ಯಾಸಕಿ ಅಂಜಲಿ ಅವರ ಕುಟುಂಬದವರು ಕೂಡ ಈ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಅನುಶ್ರೀ ಅವರು ಕಲರ್ ಆಗಿರುವ ಪಿಂಕ್ ಬಣ್ಣದ ಸೆಲ್ವಾರ್ ನಲ್ಲಿ ಕಂಡು ಬಂದಿದ್ದು ಭೂಮಿಪೂಜೆಯಲ್ಲಿ ಭಕ್ತಿಯಿಂದ ತೊಡಗಿರುವ ದೃಶ್ಯದ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

ಹೌದು ನೀವು ಕೂಡ ಅನುಶ್ರಿ ಅವರ ಭೂಮಿ ಪೂಜೆಗೆ ಶುಭವಾಗಲಿ ಎಂದು ಕಾಮೆಂಟ್ ಮಾಡಿ, ಮತ್ತು ಆದಷ್ಟು ಬೇಗನೆ ಇವರ ಹೊಸಮನೆ ತಯಾರಾಗಲಿ ಎಂದು ಆಶಿಸಿ. ಇಲ್ಲಿವೆ ನೋಡಿ ಭೂಮಿ ಪೂಜೆಯ ಫೋಟೋಸ್, ನೋಡಿ ಹರಸಿ ಹಾರೈಸಿ, ಧನ್ಯವಾದಗಳು.. ( video credit : kannada tv )