ಕೊನೆಗೂ ಅನಾಥಾಶ್ರಮ ಸೇರಿದ ಅನುಶ್ರೀ ಅವರ ತಂದೆ ಸಂಪತ್..! ಮಾಡಿದ್ದುಣ್ಣೋ ಮಾರಾಯ ಎಂದಿದ್ದೇಕೆ..?
Updated:Sunday, April 10, 2022, 09:20[IST]

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯಾದ ನಟಿ ಅನುಶ್ರೀ ಅವರ ಬದುಕಿನಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಹೌದು ಕಳೆದ ಕೆಲವು ದಿನಗಳ ಹಿಂದೆ ಅನುಶ್ರೀಯ ತಂದೆ ನಾನೇ ಎನ್ನಲಾದ ಒಬ್ಬ ಸಂಪತ್ ಎನ್ನುವ ವ್ಯಕ್ತಿ ಇದ್ದಕ್ಕಿದ್ದಂತೆ ಎಲ್ಲರ ಮುಂದೆ ಕಾಣಿಸಿಕೊಂಡಿದ್ದರು. ಆಸ್ಪತ್ರೆಯಲ್ಲಿ ನಾನು ಕನ್ನಡ ಕಿರುತೆರೆಯ ಸರಿಗಮಪದ ನಿರೂಪಕಿ ಅನುಶ್ರೀ ತಂದೆ ಎಂದು ಈ ವ್ಯಕ್ತಿ ಹೇಳಿಕೊಂಡಿದ್ದರು. ಇದಾದ ಬಳಿಕ ತಂದೆ ಮಗಳ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಆಗಿ ಇದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಚರ್ಚೆ ಆಯಿತು ಎಂದು ಹೇಳಬಹುದು. ನಟಿ ಅನುಶ್ರೀ ಅವರ ತಾಯಿ ಮತ್ತು ಅವರ ತಮ್ಮ ಒಂದಾನೊಂದು ಕಾಲದಲ್ಲಿ ಹೆಚ್ಚು ತುಂಬಾನೇ ಕಷ್ಟಪಟ್ಟವರು.
ತಾಯಿ ಮುಖ ನೋಡಿಕೊಂಡು ತಮ್ಮನನ್ನು ಬೆಳೆಸುತ್ತಾ ನಟಿ ಅನುಶ್ರೀ ಅವರು ತಮ್ಮನ್ನು ತಾವು ಗುರುತಿಸಿಕೊಳ್ಳಲು ತುಂಬಾನೇ ಕಷ್ಟಪಟ್ಟಿದ್ದಾರೆ. ಈಗ ಒಂದು ಒಳ್ಳೆಯ ಉನ್ನತ ಸ್ಥಾನದಲ್ಲಿದ್ದಾರೆ. ಇಂತಹ ವೇಳೆ ನಾನು ಅನುಶ್ರೀಯ ತಂದೆ ಎಂದು ಹೇಳಿಕೆ ಕೊಟ್ಟಿರುವ ಸಂಪತ್ ಅವರ ವಿಚಾರವನ್ನು ಕೆಲವರು ತಳ್ಳಿಹಾಕಿದ್ದಾರೆ. ಕಷ್ಟದ ಸಮಯದಲ್ಲಿ ಹೆಂಡತಿ ಮಕ್ಕಳ ಜೊತೆಗೆ ಇರದೆ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಿ,, ಇದೀಗ ನಾನು ಅವರ ತಂದೆ ಎಂದು ಹೇಳಲು ನಿಮಗೆ ಎಷ್ಟು ಕೂಡ ನಾಚಿಕೆ ಆಗುವುದಿಲ್ಲವಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಮಾಡಿದ್ದು ತಪ್ಪು ಮಾಡಿದ್ದಾರೆ, ಅವರನ್ನು ಕ್ಷಮಿಸಿ ಅವರಿಗೆ ನೇರವಾಗಿ ಎಂದು ಅನುಶ್ರೀಗೆ ಇನ್ನು ಕೆಲವರು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಅನುಶ್ರೀಯ ತಂದೆ ಎಂಬ ಸಂಪತ್ ಅನಾಥಾಶ್ರಮ ಸೇರಿದ್ದಾರೆಂದು ಹೇಳಲಾಗುತ್ತಿದೆ. ಅನಾಥಾಶ್ರಮದಲ್ಲಿ ಹೇಳಿರುವ ಹೇಳಿಕೆ ಮತ್ತು ಅನುಶ್ರೀಯ ಮನೆ ಹತ್ತಿರ ಹೋದಾಗ ಏನೇನೆಲ್ಲಾ ಆಯಿತು ಎಂಬುದಾಗಿ ವಿವರಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯ ಕಾಮೆಂಟ್ ಮೂಲಕ ತಿಳಿಸಿ..