Anushree : ಕೊನೆಗೂ ಮದುವೆ ಆಗುವ ಆಸೆ ಬಿಚ್ಚಿಟ್ಟ ಅನುಶ್ರೀ..! ಮದುವೆಗೆ ರೆಡಿಯಾದ್ರು ನೋಡಿ ಎಲ್ಲಿ

By Infoflick Correspondent

Updated:Thursday, June 16, 2022, 15:51[IST]

Anushree :  ಕೊನೆಗೂ ಮದುವೆ ಆಗುವ ಆಸೆ ಬಿಚ್ಚಿಟ್ಟ ಅನುಶ್ರೀ..! ಮದುವೆಗೆ ರೆಡಿಯಾದ್ರು ನೋಡಿ ಎಲ್ಲಿ

ಕನ್ನಡ ಕಿರುತೆರೆಯ ಸಾಲು ಸಾಲು ನಿರೂಪಕರಲ್ಲಿ ಹೆಚ್ಚು ಗುರುತಿಸಿಕೊಂಡಿರುವುದು ನಟಿ ಕಮ್ ಅಂಕರಿಂಗ್ ಸಹ ಮಾಡುವ ಸರಿಗಮಪ ಖ್ಯಾತಿಯ ನಟಿ ಅನುಶ್ರೀ ಎಂದು ಹೇಳಬಹುದು. ಸುಮಾರು ವರ್ಷಗಳಿಂದ ಜೀ ಕನ್ನಡದಲ್ಲಿ ಮತ್ತು ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಚಾನೆಲ್ಗಳಲ್ಲಿ ಆಗಾಗ ಬಂದು ಹೋಗುವ ನಿರೂಪಕಿ ಅನುಶ್ರೀ ಅವರ ಮಾತಿಗೆ ಎಲ್ಲರೂ ಕೂಡಾ ಫಿದಾ ಆಗಿದ್ದಾರೆ. ಮತ್ತೆ ಸಿನಿಮಾ ಫ್ರಿ ರಿಲೀಸ್ ಇವೆಂಟ್ ಗಳಲ್ಲಿ, ಹಾಗೂ ಸಿನಿಮಾ ಯಶಸ್ಸಿನ ಸಂಭ್ರಮ ಸಡಗರಗದ ಕಾರ್ಯಕ್ರಮಗಳಲ್ಲಿ ಅನುಶ್ರೀ ಇದ್ದೆ ಇರುತ್ತಾರೆ. ಜೀ ಕನ್ನಡದಲ್ಲಿ ಸರಿಗಮಪ ಕಾರ್ಯಕ್ರಮ ಆರಂಭವಾದಾಗಿನಿಂದಲೂ ಹೆಚ್ಚು ಸೀಸನ್ ನಡೆಸಿರುವ ಈ ನಿರೂಪಕಿ ಅನುಶ್ರೀ ಅವರೇ ಈಗಲೂ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತ ಇರುವುದು ವಿಶೇಷ. 

ಹೌದು ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ನಟಿ ಅನುಶ್ರೀ, ಚಟಪಟನೆ ಮಾತನಾಡುವ ಶೈಲಿಯ ಹೊಂದಿದ್ದು ಮಾತಿನ ಮಲ್ಲಿ ಎಂಬ ಬಿರುದನ್ನೆ ಅನುಶ್ರೀ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿದ್ದಾರೆ. ನಟಿ ಅನುಶ್ರೀ ಅವರಿಗೆ ಬೆಳ್ಳಿತೆರೆಮೇಲೆ ಅಷ್ಟಾಗಿ ಯಶಸ್ಸು ಸಿಗಲಿಲ್ಲ, ಆದ್ರೆ ಕಿರುತೆರೆಯಲ್ಲಿ ಅವರ ಪ್ರತಿಭೆಗೆ ತಕ್ಕ ಯಶಸ್ಸು ಹೆಚ್ಚಾಗಿಯೇ ಸಿಕ್ಕಿದೆ ಎನ್ನಬಹುದು. ನಿರೂಪಣೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ ಅನುಶ್ರೀ ಅವರು. ಹೌದು ಅನುಶ್ರೀ ಅವರು ಯಾವಾಗ ಮದುವೆ ಆಗುತ್ತಾರೆ ಎಂದು ಅವರ ಅಭಿಮಾನಿಗಳು ಹಾಗೂ ಈ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಚರ್ಚೆ ಮಾಡುತ್ತಲೆ ಇರುತ್ತಿದ್ದರು. ಅದಕ್ಕೆ ತಕ್ಕಂತೆ ಇದೀಗ ಅನುಶ್ರೀ ಅವರೇ ಅವರ ಫಿಲ್ಟರ್ ಇಲ್ಲದ ಮಾತಿನ ಮೂಲಕ ಮನಸ್ಸಿನ ಮಾತೊಂದ ಜೋಡಿ ನಂಬರ್ 1 ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 

'ನನಗೂ ಮದುವೆ ಆಗಬೇಕು ಎಂದೆನಿಸುತ್ತದೆ' ಎಂದು ಅಲ್ಲಿ ಬಂದಿರುವ ಕೆಲ ಜೋಡಿಗಳನ್ನು ನೋಡಿ ಮನಸ್ಸಿನಿಂದ ಮಾತನಾಡಿದ್ದಾರೆ ಅನುಶ್ರೀ. ಆದಷ್ಟು ಬೇಗ ನಾನು ಕೂಡ ಜಂಟಿ ಆಗಬೇಕು ಎನ್ನುವ ವಿಚಾರವನ್ನು ತಿಳಿಸಿದ ಅನುಶ್ರೀ ಮಾತಿಗೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅನುಶ್ರೀ ಅವರು ಆದಷ್ಟು ಬೇಗ ಮದುವೆ ಆಗಲಿ ಎಂದು ಕಾಮೆಂಟ್ ಮಾಡಿ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.( video credit : torrentspree)..