Anushree : ಚಂದು ಪ್ರೀತಿಗೆ ಮರುಗಿ ಗಿಫ್ಟ್ ಕೊಟ್ಟ ಅನುಶ್ರೀ..! ಗಿಫ್ಟ್ ನೋಡಿ ಬೆರಗಾದ ಕಾಫಿ ನಾಡು ಚಂದು..!

By Infoflick Correspondent

Updated:Monday, August 29, 2022, 11:30[IST]

Anushree :  ಚಂದು ಪ್ರೀತಿಗೆ ಮರುಗಿ ಗಿಫ್ಟ್ ಕೊಟ್ಟ ಅನುಶ್ರೀ..! ಗಿಫ್ಟ್ ನೋಡಿ ಬೆರಗಾದ ಕಾಫಿ ನಾಡು ಚಂದು..!

ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚು ಸದ್ದು ಮಾಡಿದ ಕಾಫಿ ನಾಡು ಚಂದು ಅವರು ಈಗ ಎಲ್ಲರ ಪ್ರೀತಿ ಗಳಿಸಿರುವ ಕಲಾವಿದ. ಅವರದ್ದೇ ಆದ ವಿಶಿಷ್ಟ ಶೈಲಿ ಮೂಲಕ ಬರ್ತಡೇ ಹಾಡನ್ನು ರಚಿಸುವ ಕಾಫಿನಾಡು ಚಂದು ಆರಂಭದಲ್ಲಿ ಟ್ರೋಲಿಗರ ವಿರುದ್ಧವಾಗಿ ನನ್ನನ್ನು ಟ್ರೋಲ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ವೀಡಿಯೋದ ಮೂಲಕವೇ ಉತ್ತರ ಕೊಟ್ಟಿದ್ದರು. ನಂತರವೆ ಟ್ರೋಲ್ ಪೇಜಸ್ ನವರೇ ಇಷ್ಟು ದೊಡ್ಡ ಮಟ್ಟಕ್ಕೆ ಎಲ್ಲರಿಗೂ ಪರಿಚಿತ ಮಾಡಿದ್ದಾರೆ ಚಂದು ಅವರನ್ನ ಎಂದೆನಿಸುತ್ತದೆ. ಕಾಫಿನಾಡು ಚಂದು ಮಾತನಾಡುವ ಶೈಲಿ ಅವರ ವಿಡಿಯೋಗಳನ್ನು ಟ್ರೋಲ್ ಪೇಜ್ಸ್ ನವರು ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದಾರೆ ಎನ್ನಬಹುದು.  

ಹೌದು, ಇದೆ ಕಾಫಿನಾಡು ಚಂದು ಇದೀಗ ಅನುಶ್ರೀ ಅವರ ಪ್ರೀತಿಯನ್ನು ಗಳಿಸಿದ್ದಾರೆ. ಆರಂಭದಲ್ಲಿ ಹೇಳಿದ ಹಾಗೆ ನಾನು ಪುನೀತ್ ಅಣ್ಣ ಮತ್ತು ಶಿವಣ್ಣ ಅವರ ಅಭಿಮಾನಿ. ನಾನು ಅನುಶ್ರೀ ಅವರನ್ನು ಭೇಟಿ ಮಾಡಬೇಕು. ಅನುಶ್ರೀ ಅಕ್ಕನ ಮೂಲಕವೆ ಶಿವಣ್ಣ ಅವರನ್ನು ಭೇಟಿ ಮಾಡಬೇಕು ಎಂದಿದ್ದರು. ಅದರಂತೆ ಜೀ ಕನ್ನಡ ವೇದಿಕೆಗೆ ಕಾಫಿನಾಡು ಚಂದು ಎಂಟ್ರಿ ಕೊಟ್ಟೆ ಬಿಟ್ಟರು. ಅದನ್ನ ನೀವೂ ಸಹ ನೋಡಿದಿರಿ. ನಂತರ ಶಿವಣ್ಣ ಅವರ ಆಶೀರ್ವಾದ ಪಡೆದು ಕಣ್ಣಂಚಲ್ಲಿ ನೀರು ತರಿಸಿ ಎಲ್ಲರಿಗೂ ಒಂದು ಮುಗ್ದತೆಯ ಸಂಕೇತ ತೋರಿಸಿದ ಕಾಫಿನಾಡು ಚಂದು ಈಗ ಎಲ್ಲರ ನೆಚ್ಚಿನ ಕಲಾವಿದ. ಇದೀಗ ಕಾಫಿನಾಡು ಚಂದು ಪ್ರೀತಿ, ಆ ಸ್ನೇಹಕ್ಕೆ ಮರುಗಿರುವ ನಿರೂಪಕಿ ಅನುಶ್ರೀ ಅವರು ಕಾಫಿ ನಾಡು ಚಂದುಗೆ ಒಂದು ವಿಶಿಷ್ಟ ಗಿಫ್ಟ್ ಅನ್ನು ನೀಡಿದ್ದಾರೆ.

ಹೌದು ಒಂದು ವಾಚನ್ನು ಕಾಫಿ ನಾಡು ಚಂದುಗೆ ನೀಡಿರುವ ಅನುಶ್ರೀ, ಚಂದು ಕೈಗೆ ಸ್ವತಃ ಅವರೇ ಆ ವಾಚ್ ಅನ್ನು ತೊಡಿಸಿದ್ದಾರೆ. ಅದನ್ನು ನೋಡಿದ ಚಂದು ಯಾವ ರೀತಿ ಸಂತಸ ವ್ಯಕ್ತಪಡಿಸಿದರು ಗೊತ್ತಾ..? ಇಲ್ಲಿರುವ ವಿಡಿಯೋ ನೋಡಿ. ಹಾಗೆ ಇಷ್ಟ ಆದ್ರೆ ಶೇರ್ ಮಾಡಿ. ಇನ್ನು ಎತ್ತರಕ್ಕೆ ಕಾಫಿ ನಾಡು ಚಂದು ಬೆಳೆಯಲಿ ಎಂದು ಹರಸಿ...