Anushree : ಮದ್ವೆ ಯಾವಾಗ ಅಂಥ ಕೇಳ್ತಿರಲ್ಲ, ಮದುವೆ ಆಯ್ತು ಎಂದು ಮಾಧ್ಯಮದ ಮುಂದೆ ತಿಳಿಸಿದ ಅನುಶ್ರೀ :ಎಲ್ಲಿ ಎಂದು ನೋಡಿ ?

By Infoflick Correspondent

Updated:Sunday, June 12, 2022, 15:17[IST]

Anushree :  ಮದ್ವೆ ಯಾವಾಗ ಅಂಥ ಕೇಳ್ತಿರಲ್ಲ, ಮದುವೆ ಆಯ್ತು ಎಂದು ಮಾಧ್ಯಮದ ಮುಂದೆ ತಿಳಿಸಿದ ಅನುಶ್ರೀ :ಎಲ್ಲಿ ಎಂದು ನೋಡಿ ?

ಕಳೆದ ಕರೋನಾ ಸಂದರ್ಭದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿಯ ಕನ್ನಡ ಕಿರುತೆರೆಯ ಕೆಲ ಕಲಾವಿದರು, ಮತ್ತು ಬೆಳ್ಳಿಪರದೆಯ ಕೆಲ ಕಲಾವಿದರು ಸಹ ಸರಳವಾಗಿ ವಿವಾಹವಾಗಿದ್ದಾರೆ. ಅವರ ಸಾಲಿಗೆ ಇದೀಗ ಕನ್ನಡದ ಇನ್ನೊಬ್ಬ ನಟಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದ ಸಹನಟಿ ಕಾವ್ಯ ಅವರು ನಿನ್ನೆ ವರುಣ್ ಗೌಡ ಅವರ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದು ಖುಷಿ ವಿಚಾರ. ವರುಣ್ ಗೌಡ ಮತ್ತು ಕಾವ್ಯ ಅವರ ಮದುವೆಗೆ ಸಿನಿಮಾದ ಕೆಲವು ಗಣ್ಯ ವ್ಯಕ್ತಿಗಳು ಬಂದಿದ್ದರು. ಹಾಗೇನೇ ಸ್ನೇಹಿತರು ಆಗಮಿಸಿದ್ದರು ಎನ್ನಲಾಗಿದೆ. ಕುಟುಂಬದವರ ಸಾರಥ್ಯದಲ್ಲಿ ನಟಿ ಕಾವ್ಯ ಅವರು ವರುಣ್ ಗೌಡ ಅವರನ್ನು ಕೈ ಹಿಡಿದದ್ದು ತುಂಬಾ ಕ್ಯೂಟ್ ಆಗಿತ್ತು.

ಈ ಜೋಡಿಗೆ ಶುಭಕೋರಲು ಮದುವೆಗೆ ಆಗಮಿಸಿದ್ದ ಕನ್ನಡ ಕಿರುತೆರೆಯ ನಿರೂಪಕಿ ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರು ಕೂಡ ಕಾಣಿಸಿದ್ದರು. ಹೌದು ಇದೇವೇಳೆ ಮಾತನಾಡಿದ ನಟಿ ಅನುಶ್ರೀ ಅವರು ನೀವು ಸದಾ ಯಾವಾಗಲೂ ನನ್ನ ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಿದ್ದೀರಿ ಅಲ್ವಾ, ಕೊನೆಗೂ ಮದುವೆ ಆಯ್ತು,  ಆದರೆ ನನ್ನದಲ್ಲ ನನ್ನ ಗೆಳೆಯ ವರುಣ್ ಗೌಡ ಅವರದ್ದು ಎಂದು ನಗೆ ಬೀರಿದ್ದಾರೆ. ಜೊತೆಗೆ ವರುಣ್ ಗೌಡ ಕಾವ್ಯ ಅವರ ಜೋಡಿ ತುಂಬಾ ಮುದ್ದಾಗಿದೆ. ಇವರಿಬ್ಬರು ಹೀಗೆ ಖುಷಿಯಾಗಿ, ಸುಖವಾಗಿ, ನೆಮ್ಮದಿಯಾಗಿ ಜೀವನವನ್ನು ಸಾಗಿಸಲಿ ಎಂದು ಹಾರೈಸುತ್ತೇನೆ ಎಂದು ಎಲ್ಲರಿಗೂ ಶಾಕ್ ಕೊಟ್ಟರು. 

ಹೌದು ಕನ್ನಡ ಕಿರುತೆರೆಯ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಹೆಚ್ಚು ಪ್ರಶ್ನೆ ಅನುಶ್ರೀ ಅವರ ಎದುರು ಬಂದಾಗ ಈ ಮದುವೆ ವಿಚಾರ ಬಂದೇ ಬರುತ್ತದೆ. ಹಾಗಾಗಿ ಅನುಶ್ರೀ ಅವರು ಈಗ ಇದಕ್ಕೆ ಪ್ರತಿಕ್ರಿಯಿಸಿ ನನ್ನ ಗೆಳೆಯ ವರುಣ್ ಗೌಡ ಅವರ ಮದುವೆಗೆ ಬಂದಿದ್ದೇನೆ, ನನ್ನ ಮದುವೆ ಅಲ್ಲ ಇದು ಎಂದು ಮಾದ್ಯಮದ ಎದುರು ಮಾತನಾಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನೀವು ಕೂಡ ಅನುಶ್ರೀ ಅವರ ಮದುವೆಗೆ ಕಾಯುತ್ತಿದ್ದರೆ ಆದಷ್ಟು ಬೇಗ ಮದುವೆಯಾಗಿ ಅನುಶ್ರೀ ಮೇಡಂ ಎಂದು ಕಮೆಂಟ್ ಮಾಡಿ ಧನ್ಯವಾದ..