Anushree : ಭಾರತೀಯ ನಾರಿ ಶೈಲಿಯಲ್ಲಿ ಮಿಂಚಿದ ಅನುಶ್ರೀ ಮತ್ತು ರಮ್ಯಾ : ಯಾವ ಕಾರಣಕ್ಕೆ ವಿಡಿಯೋ ನೋಡಿ ?

By Infoflick Correspondent

Updated:Tuesday, June 14, 2022, 12:30[IST]

Anushree :  ಭಾರತೀಯ ನಾರಿ ಶೈಲಿಯಲ್ಲಿ ಮಿಂಚಿದ ಅನುಶ್ರೀ ಮತ್ತು ರಮ್ಯಾ : ಯಾವ ಕಾರಣಕ್ಕೆ  ವಿಡಿಯೋ ನೋಡಿ ?

ಕನ್ನಡ ಚಿತ್ರರಂಗದ ಖ್ಯಾತ ನಟಿ ಸ್ಯಾಂಡಲ್ ವುಡ್ ಕ್ವೀನ್ ಎಂದು ಇಂದಿಗೂ ಕೂಡ ಕರೆಸಿಕೊಳ್ಳುವ ನಟಿ ರಮ್ಯಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ನಟಿ ರಮ್ಯಾ ಅವರು 90ರ ದಶಕದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡವರು. ತೆರೆಯ ಮೇಲೆ ಸ್ಟಾರ್ ನಟರ ಜೊತೆ ಕಾಣಿಸಿಕೊಂಡು, ಅವರೊಟ್ಟಿಗೆ ತೆರೆಯ ಹಂಚಿಕೊಂಡು ಸಾಕಷ್ಟು ಅಭಿಮಾನಿ ಬಳಗದವರ ಹೃದಯ ಕದ್ದವರು ನಟಿ ರಮ್ಯಾ ಅವರು. ಹೌದು ರಮ್ಯಾ ಅವರಿಗೆ ಈಗಲೂ ಅತಿ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸಿನಿಮಾರಂಗದಿಂದ ದೂರ ಉಳಿದು,, ರಾಜಕೀಯದಲ್ಲಿ ಸಕ್ರಿಯರಾದರೂ ಸಹ ನಟಿ ರಮ್ಯಾ ಅವರಿಗೆ ಅಭಿಮಾನಿಗಳ ಅಭಿಮಾನ ಎಂದೂ ಕೂಡ ಕೊಂಚವೂ ಕಡಿಮೆಯಾಗಿಲ್ಲ.

ಇತ್ತೀಚಿಗಷ್ಟೇ ಮತ್ತೆ ಸಿನಿಮಾರಂಗಕ್ಕೆ ಮರಳುವುದಾಗಿ ನಟಿ ರಮ್ಯಾ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿ ಮಾಧ್ಯಮ ಮೂಲಕ ಕೇಳಿಬಂದಿದ್ದು, ಮತ್ತೆ ರಮ್ಯಾ ಅವರು ತೆರೆಯ ಮೇಲೆ ಯಾವಾಗ ಬರುತ್ತಾರೆ, ಯಾರ ಜೊತೆ ಯಾವ ಸಿನಿಮಾದ ಮೂಲಕ ಎಂದು ಅಭಿಮಾನಿಗಳು ತುಂಬಾ ಕಾತರದಿಂದ ಕಾಯುತ್ತಿದ್ದಾರೆ. ಹೌದು ಈ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗಷ್ಟೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ರಮ್ಯ ಅವರು ಕನ್ನಡ ಸಿನಿಮಾರಂಗದ ಸಹನಟಿ ಕಾವ್ಯ ಅವರ ಮದುವೆಯಲ್ಲಿ ಮೊನ್ನೆ ಭಾಗಿಯಾಗಿದ್ದರಂತೆ. ಅಲ್ಲಿ ರಮ್ಯಾ ಅವರನ್ನ ಕಂಡು ಕೆಲ ವಿಡಿಯೋಗಳಲ್ಲಿ ಮತ್ತು ಫೋಟೋಗಳ ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಹಾಗೆ ನಟಿ ರಮ್ಯಾ ಅವರನ್ನು ಕಣ್ತುಂಬಿಕೊಂಡಿದ್ದಾರೆ.

ಹೌದು ನಟಿ ಕಾವ್ಯ ಅವರ ಮದುವೆಗೆ ಕನ್ನಡ ಕಿರುತೆರೆಯ ನಿರೂಪಕಿ ಅನುಶ್ರೀ ಅವರು ಕೂಡ ಆಗಮಿಸಿದ್ದು, ರಮ್ಯಾ ಅವರನ್ನು ನೋಡಿ ಮಾತನಾಡಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನೀವೆಷ್ಟು ಚಂದ ಇದ್ದೀರಾ ಮೇಡಂ ಎಂದು ಹಾಡಿ ಹೊಗಳಿದರು. ಹೌದು ನಿರೂಪಕಿ ಅನುಶ್ರೀ ಅವರು ಮೇಡಂ ನಿಮ್ಮ ಜೊತೆ ಒಂದು ಫೋಟೋ ಎಂದಾಗ ರಮ್ಯಾ ಅವರು ಹಿಂದು ಮುಂದು ನೋಡದೆ ವೈ ನಾಟ್ ಎಂದು ಫೋಟೋಗೆ ಪೋಸ್ ನೀಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ರಮ್ಯಾ ಅವರ ಸರಳತನದ ಬಗ್ಗೆ ಎಲ್ಲರಿಗೂ ಗೊತ್ತು, ಕ್ಯೂಟ್ ಕ್ಯೂಟ್ ಆಗಿ ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡುವ ರಮ್ಯಾ ಅವರು ಆದಷ್ಟು ಬೇಗನೆ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಎಂಬುದೇ ಎಲ್ಲರ ಆಶಯ.