ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ್​ ಕೌಶಿಕ್​  ಬಂಧನ ; ಬಂಧನಕ್ಕೆ ಕಾರಣ ಇಲ್ಲಿದೆ ನೋಡಿ

By Infoflick Correspondent

Updated:Friday, April 29, 2022, 14:51[IST]

ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ್​ ಕೌಶಿಕ್​  ಬಂಧನ ; ಬಂಧನಕ್ಕೆ ಕಾರಣ ಇಲ್ಲಿದೆ ನೋಡಿ

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ ಅರವಿಂದ್​ ಕೌಶಿಕ್​ ಅವರು ಬಂಧನಕ್ಕೊಳಗಾಗಿದ್ದಾರೆ. ನಮ್ ಏರಿಯಾದಲ್ಲಿ ಒಂದಿನ,‌ ಹುಲಿರಾಯ ಹಾಗೂ ಶಾರ್ದೂಲ ಹೆಸರಿನಿ ಸಿನಿಮಾಗಳನ್ನು ಕೌಶಿಕ್​ ನಿರ್ದೇಶನ ಮಾಡಿರುವ ಅರವಿಂದ್ ಕನ್ನಡ ಕಿರುತೆರೆಯಲ್ಲಿ ಮೂಡಿಬಂದ ಕಮಲಿ ಧಾರವಾಹಿಯನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಧಾರಾವಾಹಿ ನಿರ್ಮಾಪಕನಿಂದ ಹಣಪಡೆದ ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್​ ಕೌಶಿಕ್​ರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಧಾರಾವಾಹಿ ನಿರ್ಮಾಪಕನಿಂದ ಹಣ ಪಡೆದು ವಂಚನೆ ಮಾಡಿದ ಆರೋಪ ಅರವಿಂದ್​ ಕೌಶಿಕ್​ ಅವರ ಮೇಲಿದೆ.  

2018 ರಲ್ಲಿ ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ ನಿರ್ಮಾಪಕ ರೋಹಿತ್​ 73 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರಂತೆ. ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ, ಲಾಭಾಂಶವನ್ನೂ ನೀಡದೇ ವಂಚನೆ ಮಾಡಿದ್ದಾರೆ ಎಂದು ಕೌಶಿಕ್​ ವಿರುದ್ಧ ರೋಹಿತ್​ ಆರೋಪ ಮಾಡಿದ್ದಾರೆ. 

ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದು, ಅರವಿಂದ್ ಕೌಶಿಕ್ ವಿರುದ್ಧ 420 ಸೆಕ್ಷನ್​ ಅಡಿ ಪ್ರಕರಣ ದಾಖಲಾಗಿದೆ, ಸದ್ಯ ವೈಯ್ಯಾಲಿಕಾವಲ್ ದೂರಿನಂತೆ ಪೊಲೀಸರು ಅರವಿಂದ್ ಕೌಶಿಕ್​ರನ್ನು ಬಂಧಿಸಿದ್ದಾರೆ