ಅರ್ಜುನ್ ಜನ್ಯ ಆಸ್ಪತ್ರೆಗೆ ದಾಖಲು!! ಈಗ ಎಂತ ಪರಿಸ್ಥಿತಿ ಇದ್ದಾರೆ ನೋಡಿ

Updated: Tuesday, April 6, 2021, 11:33 [IST]

ಕಳೆದ ಎರಡು ವರ್ಷಗಳಿಂದ ಅರ್ಜುನ್ ಜನ್ಯ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇದೆ. ಇದೀಗ ಮತ್ತೆ ಅರ್ಜುನ್ ಜನ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅರ್ಜುನ್ ಜನ್ಯ ಅವರಿಗೆ ಕೊರೋನಾ ಸೋಂಕು ತಗುಲಿದೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಧ್ಯ ಈಗಿನ ಅವರ ಪರೀಸ್ಥಿತಿ ಇನ್ನು ತಿಳಿದು ಬಂದಿಲ್ಲ. ಅರ್ಜುನ್ ಜನ್ಯ ಅವರನ್ನ ವೈದ್ಯರು ಅಬ್ಸರ್ವೇಷನ್‌ನಲ್ಲಿ ಇಟ್ಟಿದ್ದಾರೆ. ಅವರಿಗೆ ಇಂದೂ ಸಹ ಕೆಲವು ಪರೀಕ್ಷೆಗಳನ್ನ ವೈದ್ಯರು ಮಾಡಲಿದ್ದಾರೆ ಎನ್ನಲಾಗಿದೆ. 

ಕಳೆದ ವರ್ಷವೂ ಇದೇ ಸಮಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬಳಿಕ ಸುಧಾರಿಸಿಕೊಂಡಿದ್ದಾರು. ಮ್ಯೂಸಿಕ್‌ ಮಾಂತ್ರಿಕ ಅರ್ಜುನ್ ಜನ್ಯ ಹೃದಯ ಸಂಬಂಧಿ, ಗ್ಯಾಸ್ಟ್ರಿಕ್, ತಲೆ ಹಾಗೂ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಖ್ಯಾತ ಸಂಗೀತ ಸಂಯೋಜಕ ಅರ್ಜುನ್‌ ಜನ್ಯ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ.

ಅಂದು ಅರ್ಜುನ್‌ ಜನ್ಯ ಅವರ ಹೃದಯ ಶೇ. 90ರಷ್ಟು ಬ್ಲಾಕ್‌ ಆಗಿತ್ತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಂದು ಮತ್ತೆ ಆಸ್ಪತ್ರೆ ಪಾಲಾಗಿದ್ದಾರೆ.