ಅರ್ಜುನ್ ಜನ್ಯರ ಅಪ್ಪನ ಸ್ಥಾನದಲ್ಲಿದ್ದ ಈ ವ್ಯಕ್ತಿ ಕೊರೊನಾಗೆ ಬಲಿ..! ಕಣ್ಣೀರಿಟ್ಟ ಜನ್ಯಾ..!

Updated: Monday, May 3, 2021, 20:13 [IST]

ಹೌದು ಸ್ನೇಹಿತರೆ ಮಾಧ್ಯಮ ಮೂಲಕ ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕನ್ನಡ ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಅಣ್ಣ ಕಿರಣ್ ಕರೋನ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಹೌದು ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅರ್ಜುನ್ ಜನ್ಯ ಅವರು ನೋವನ್ನ ವ್ಯಕ್ತಪಡಿಸಿದ್ದು, ಈ ಕರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ ಕಿರಣ್ ಅವರ ಘಟನೆಯನ್ನು ನೆನೆದು, ಹೇಗೆ ವ್ಯಕ್ತಪಡಿಸಬೇಕೆಂಬುದೇ ನನಗೆ ತಿಳಿಯುತ್ತಿಲ್ಲ ಎಂದು ಭಾವುಕರಾಗಿದ್ದಾರೆ. 

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂದೆ ಈ ಮುಂಚೆಯೇ ತೀರಿ ಹೋಗಿದ್ದು, ಅಣ್ಣ ಕಿರಣ್ ಅರ್ಜುನ್ ಜನ್ಯ ಅವರಿಗೆ ಅಪ್ಪನ ಸ್ಥಾನದಲ್ಲಿ ನಿಂತಿದ್ದರಂತೆ. ಆದರೆ ಇಂದು ಕೊರೋನಾಗೆ ಅವರು ಸಹ ಸಾವನ್ನಪ್ಪಿದ್ದಾರೆ.

ಅರ್ಜುನ್ ಜನ್ಯ ಅಣ್ಣನ ಸಾವಿನ ಸುದ್ದಿ ಕೇಳಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ಅರ್ಜುನ್ ಜನ್ಯ ಅವರು ನನ್ನ ಕೊನೆಯ ಉಸಿರಿರುವರೆಗೂ ನನ್ನ ಉಸಿರಿನಲ್ಲಿ ನೀನು ಇರುತ್ತೀಯಾ ಎಂದು ಅಣ್ಣನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಈ ಹಿಂದೆ ಕರೋನಾ ವೈರಸ್'ಗೆ ಅರ್ಜುನ್ ಜನ್ಯ ಅವರು ಸಹ ತುತ್ತಾಗಿದ್ದರು, ತದನಂತರ ಗುಣಮುಖರಾದರು. ಆದರೆ ಇದೀಗ ಅರ್ಜುನ್ ಜನ್ಯ ಅವರ ಸಹೋದರ ಕೊರೋನಾಗೆ ಬಲಿಯಾಗಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ಕಿರಣ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ..