BBK OTT : ಎರಡನೇ ಹೆಂಡತಿಗೆ ಮಗುವಾಯ್ತು ಎಂದು ಮೊದಲನೇ ಹೆಂಡ್ತಿ ಬಗ್ಗೆ ಕಣ್ಣೀರಿಟ್ಟ ಅರ್ಜುನ್ ರಮೇಶ್..!

By Infoflick Correspondent

Updated:Monday, August 15, 2022, 12:30[IST]

BBK OTT : ಎರಡನೇ ಹೆಂಡತಿಗೆ ಮಗುವಾಯ್ತು ಎಂದು ಮೊದಲನೇ ಹೆಂಡ್ತಿ ಬಗ್ಗೆ ಕಣ್ಣೀರಿಟ್ಟ ಅರ್ಜುನ್ ರಮೇಶ್..!

ಓ ಟಿ ಟಿ ಬಿಗ್ ಬಾಸ್ ಸೀಸನ್ ಒಂದು ಆರಂಭವಾಗಿದೆ. ಹೌದು ಈ ಮೂಲಕ 16 ಸ್ಪರ್ದಿಗಳು ಅವರ ಆಟವನ್ನು ಭರ್ಜರಿಯಾಗಿಯೇ ಆಡುತ್ತಿದ್ದಾರೆ. ಇನ್ನೊಂದು ಕಡೆ ಬಿಗ್ ಬಾಸ್ ಈಗಾಗಲೇ ಮೊದಲ ವಾರವ ಮುಕ್ತಾಯ ಮಾಡಿದ್ದು ನಾನು ಯಾರು ಎನ್ನುವ ಟಾಸ್ಕ್ ಮೂಲಕ ಕೆಲ ಸ್ಪರ್ಧಿಗಳು ತುಂಬಾನೇ ಎಮೋಷನಲ್ ಆಗಿ ಆಟವನ್ನು ಆಡಿದ್ದಾರೆ ಎಂದು ಹೇಳಬಹುದು. ಹೌದು ಕೆಲವರದ್ದು ಎಮೋಷನಲ್ ಡ್ರಾಮ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅವರು ಇರುವ ಹಾಗೆಯೇ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅರ್ಜುನ್ ರಮೇಶ್ ಎನ್ನುವ ನಟ ಬಿಗ್ ಬಾಸ್ ಮನೆಗೆ ಬಂದಿದ್ದು ಈತ ಒಬ್ಬ ರಾಜಕಾರಣಿ ಮತ್ತು ಕನ್ನಡದ ಕಲಾವಿದ ಎನ್ನಲಾಗಿದೆ. ಹೌದು ಅರ್ಜುನ್ ರಮೇಶ ಅವರು ನಾನು ಯಾರು ಎನ್ನುವ ಟಾಸ್ಕ್ ಮೂಲಕ ಅವರ ಕಣ್ಣೀರಿನ ಕಥೆಯ ಬಿಚ್ಚಿಟ್ಟಿದ್ದಾರೆ.

ನಟ ಅರ್ಜುನ್ ರಮೇಶ ಅವರು ಸಾಕಷ್ಟು ಹೆಣ್ಣು ಮಕ್ಕಳ ಜೊತೆ ಫ್ಲರ್ಟ್ ಮಾಡಿದ್ದಾರಂತೆ. ಅದರ ಲೆಕ್ಕವಿಲ್ಲ ಎಂದು ಹೇಳಿದ್ದರು. ಇದನ್ನು ಕೇಳಿದ ನಟ್ಟಿಗರು ಅರ್ಜುನ್ ರಮೇಶ ಅವರನ್ನು ಟ್ರೊಲ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಇವರ ದಾಂಪತ್ಯ ಜೀವನದ ಬಗ್ಗೆ ಅರ್ಜುನ್ ಹೇಳಿಕೊಂಡಿದ್ದು ನಾನು ಇಬ್ಬರನ್ನು ಮದುವೆಯಾಗಿದ್ದೇನೆ. ನಮ್ಮ ತಂದೆ ಗಾರೆ ಕೆಲಸ ಮಾಡುವವರು. ನಮ್ಮ ತಂದೆ-ತಾಯಿಯವರು ನನ್ನ ಮದುವೆ ವಿಚಾರದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಮೊದಲಿಗೆ ಮಿಲನ ಎನ್ನುವ ಹುಡುಗಿ ಜೊತೆ ಮದುವೆ ಮಾಡಿದರು. ಅದಕ್ಕೂ ಮುನ್ನ ನಾನು ರವಿಕ ಎನ್ನುವ ಹುಡುಗಿಯನ್ನು ಇಷ್ಟಪಟ್ಟಿದ್ದೆ. ಆಕೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದೇ. ನಂತರದ ದಿನದಲ್ಲಿ ಮಿಲನಳನ್ನ ಮದುವೆಯಾದ ಮೇಲೆ ರವಿಕಳನ್ನು ಸಹ ಮದುವೆಯಾದೆ.

ಮದುವೆಯಾಗಿ 5 ವರ್ಷದ ತನಕ ನಾನು ರವಿಕಾಳನ್ನು ಈ ಸೊಸೈಟಿಗೆ ಪರಿಚಯ ಮಾಡಲೇ ಇಲ್ಲ. ನಂತರದಲ್ಲಿ ನನ್ನ ಎರಡನೇ ಹೆಂಡತಿಯಾದ ರವಿಕಾಗೆ ಮಗುವಾಯಿತು. ಮಗು ಹುಟ್ಟಿದ ಮೂರೆ ದಿನಕ್ಕೆ ನನ್ನ ಹಾಗೂ ರವಿಕಾ ವಿಚಾರವನ್ನು ನನ್ನ ಮೊದಲನೇ ಹೆಂಡತಿ ಮುಂದೆ ಹೇಳಿದೆ. ಆಗ ಅವಳು ನಾನು ಮಗು ನೋಡಬೇಕು ಎಂದಷ್ಟೇ ಹೇಳಿದಳು. ನಿಜಕ್ಕೂ ನಾನು ದೇವರನ್ನು ನಂಬುವುದಿಲ್ಲ, ಆ ಮಾತು ಹೇಳಿದಾಗ ನಿಂದ ನನ್ನ ಮೊದಲನೇ ಹೆಂಡತಿ ಮಿಲನಾ ದೇವರು ಎಂದು ಅರ್ಜನ್ ಹೇಳಿದರು. ನಾನು ಮಿಲನಾಗೆ ಮದುವೆಯ ವಿಚಾರದಲ್ಲಿ ಮೋಸ ಮಾಡಿದ್ದೇನೆ. ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಬಿಗ್ ಬಾಸ್ ಮನೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಅರ್ಜುನ್ ರಮೇಶ್. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ...