Meghana Raj : ಆಸ್ಪತ್ರೆಯಲ್ಲಿ ಅರ್ಜುನ್ ಸರ್ಜಾ ತಾಯಿ ಸಾಯುವ ಮುನ್ನ ರಾಯನ್ ಬಗ್ಗೆ ಹೇಳಿದ್ದೇನು..? ಮೇಘನಾ ಕಣ್ಣೀರು

By Infoflick Correspondent

Updated:Wednesday, July 27, 2022, 11:18[IST]

Meghana Raj : ಆಸ್ಪತ್ರೆಯಲ್ಲಿ ಅರ್ಜುನ್ ಸರ್ಜಾ ತಾಯಿ ಸಾಯುವ ಮುನ್ನ ರಾಯನ್ ಬಗ್ಗೆ ಹೇಳಿದ್ದೇನು..? ಮೇಘನಾ ಕಣ್ಣೀರು

ಸ್ಯಾಂಡಲ್ವುಡ್ ನಲ್ಲಿ ನಟ ಯುವನಾಯಕ ಚಿರಂಜೀವಿ ಸರ್ಜಾ ಅವರು ಅವರದೇ ಅಪಾರ ಅಭಿಮಾನಿ ಬಳಗವನ್ನು ಅವರ ಅಭಿನಯದಿಂದಲೇ ಹೆಚ್ಚು ಗಳಿಸಿಕೊಂಡಿದ್ದರು. ಅವರ ಅಕಾಲಿಕ ಮರಣ ಯಾರಿಗೂ ಕೂಡ ಇಂದಿಗೂ ಮರೆಯಲಾಗುತ್ತಿಲ್ಲ. ನಟ ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದಂತೆ ಹೃದಯಗಾತದಿಂದ ಸಾವನ್ನಪ್ಪಿದ್ದು ಆ ಸರ್ಜಾ ಕುಟುಂಬಕ್ಕೆ ಆ ನೋವಿನ ವಿಚಾರವನ್ನು ಇಂದಿಗೂ ಕೂಡ ಅರಹಿಸಿಕೊಳ್ಳಲಾಗುತ್ತಿಲ್ಲ. ಹೌದು ಚಿರು ಪ್ರತಿರೂಪವಾಗಿ ಮೇಘನಾ ಅವರ ಹೊಟ್ಟೆಯಲ್ಲಿ ರಾಯನ್ ರಾಜ್ ಸರ್ಜಾ ಬಂದಿದ್ದಾನೆ. ಈ ಮೂಲಕ ಮೇಘನಾ ಹಾಗೂ ಇಡೀ ಸರ್ಜಾ ಕುಟುಂಬಕ್ಕೆ ಮತ್ತೆ ಕೊಂಚ ನೋವನ್ನು ಕಡಿಮೆ ಮಾಡಿತು ಎನ್ನಬಹುದು. ಆದ್ರೆ ಚಿರು ಅಗಲಿಕೆಯ ಆ ಹೊಡೆತವೇ ಅವರಿಗೆ ತಡೆದುಕೊಳ್ಳಲಾಗಿರಲಿಲ್ಲ.

ಅದರ ನಡುವೆ ಇತ್ತೀಚಿಗೆ ದಕ್ಷಿಣ ಭಾರತದ ನಟ ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಚಿರಂಜೀವಿ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಿಯವರು ಕೂಡ ಸಾವನ್ನಪ್ಪಿದರು. ಲಕ್ಷ್ಮಿ ದೇವಿ ಅಮ್ಮನವ್ರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಬಳಲುತ್ತಿದ್ದರಂತೆ. ಚಿಕಿತ್ಸೆ ಕೊಡಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಿ ದೇವಿ ಅಮ್ಮನವರು ಇಹಲೋಕ ತ್ಯಜಿಸಿದರು. ಇದೀಗ ಮೇಘನಾ ರಾಜ್ ಅವರು ಆ ಅಮ್ಮನ ಕುರಿತು ಒಂದು ವಿಚಾರ ಹಂಚಿಕೊಂಡಿದ್ದಾರೆ. ರಾಯನ್ ಅಂದ್ರೆ ಹಾಗೂ ಚಿರು ಅಂದ್ರೆ ಲಕ್ಷ್ಮಿ ದೇವಿ ಅವರಿಗೆ ಹೆಚ್ಚು ಇಷ್ಟವಂತೆ. ಚಿರು ಆಗಲಿಕೆಯಾದ ಬಳಿಕ ತುಂಬಾನೇ ಇವರು ನೊಂದಕೊಂಡಿದ್ದರಂತೆ. ಮತ್ತೆ ಚಿರಂಜೀವಿ ಸರ್ಜಾ ಅವರೇ ಮೇಘನಾ ಅವರ ಹೊಟ್ಟೆಯಲ್ಲಿ ಪ್ರತಿರೂಪವಾಗಿ ರಾಯನ್ ಮೂಲಕ ಬಂದಿದ್ದು ನೋಡಿ ಖುಷಿಯಾಗಿದ್ದರು ಎಂದು ತಿಳಿದುಬಂದಿದೆ..    

ಅಂತಹದರಲ್ಲಿ ಈಗ ಲಕ್ಷ್ಮಿ ದೇವಿ ಅವರು ಕೂಡ ಎಲ್ಲರಿಂದ ಅಗಲಿದ್ದು ತುಂಬಲಾರದ ನಷ್ಟ. ಹೀಗಿರುವಾಗ ಮೇಘನಾ ರಾಜ್ ಲಕ್ಷ್ಮಿ ಅವರ ಬಗ್ಗೆ ಭಾವನಾತ್ಮಕವಾಗಿ ಒಂದು ವಿಚಾರ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಲಕ್ಷ್ಮಿ ದೇವಿಯವರು ಇದ್ದಾಗ ಅವರ ಮಗನಾದ ಅರ್ಜುನ್ ಸರ್ಜಾ ಅವರನ್ನು ಕರೆದು 'ರಾಯನ್ ಅವನನ್ನು ತುಂಬಾ ಚೆನ್ನಾಗಿ ನೋಡಿಕೋ. ಅವನು ನನ್ನ ಮುದ್ದು ಕಂದ ಚಿರುವಿನ ಮಗ, ಮೇಘನ ಒಬ್ಬಂಟಿಯಾಗಿದ್ದಾಳೆ. ಅವನನ್ನ ನೀನೆ ಚೆನ್ನಾಗಿ ನೋಡಿಕೊ, ಚೆನ್ನಾಗಿ ಬೆಳೆಸಬೇಕು' ಎಂದು ಹೇಳಿದರಂತೆ. ಅದೇ ಮಾತನ್ನ ಇದೀಗ ಮೇಘನ ಅವರ ನೆನೆದು ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ ಹಾಗೆ ಚಿರು ಅವರ ಪುತ್ರ ರಾಯನ್ ಗೆ ಹರಸಿ.(video credit : karunada suddi )