ಜೊತೆಜೊತೆ ಧಾರಾವಾಹಿ ನಿರ್ದೇಶಕ ಆರೂರ್ ಜಗದೀಶ್ ಹೇಳಿಕೆಯ ಆಡಿಯೋ ಲೀಕ್ ! ಏನಿದೆ ಇದರಲ್ಲಿ

By Infoflick Correspondent

Updated:Tuesday, August 23, 2022, 21:32[IST]

ಜೊತೆಜೊತೆ ಧಾರಾವಾಹಿ ನಿರ್ದೇಶಕ  ಆರೂರ್ ಜಗದೀಶ್ ಹೇಳಿಕೆಯ ಆಡಿಯೋ ಲೀಕ್ ! ಏನಿದೆ ಇದರಲ್ಲಿ

ಜೊತೆ ಜೊತೆಯಲಿ’ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಅವರದ್ದು ಎನ್ನಲಾಗಿರುವ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಆರೂರು ಜಗದೀಶ್​ ಅವರು ಈ ವಿವಾದಕ್ಕೂ ಮುನ್ನ ವ್ಯಕ್ತಿಯೊಬ್ಬರ ಜತೆ ಮಾತನಾಡಿರುವ ಆಡಿಯೋ 'ದಿಗ್ವಿಜಯ ನ್ಯೂಸ್'​ಗೆ ಲಭ್ಯವಾಗಿದೆ. ಅದರಲ್ಲಿ ಅವರು ಅನಿರುದ್ಧ್​ ಅವರನ್ನು ಹಾಡಿ ಹೊಗಳಿದ್ದಾರೆ. ಈಗ ಏಕಾಏಕಿ ಯೂಟರ್ನ್​ ತೆಗೆದುಕೊಂಡಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.
 

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿ, ‘’ಒಂದು ಧಾರಾವಾಹಿಯನ್ನು ಕಥೆಯಾಗಿ ನೋಡಬೇಕು. ಒಂದೇ ಒಂದು ಕ್ಯಾರೆಕ್ಟರ್‌ನಿಂದ ನೋಡಿದರೆ ಹೀಗೆನಿಸುತ್ತದೆ. ನಾವೀಗ ಫ್ಲ್ಯಾಶ್ ಬ್ಯಾಕ್‌ಗೆ ಹೋಗಿಬಿಟ್ಟಿದ್ದೀವಿ. ಆಲ್ರೆಡಿ ಶೂಟ್ ಆಗಿದೆ ಫ್ಲ್ಯಾಶ್ ಬ್ಯಾಕ್. ರಾಜನಂದಿನಿ ಎಂಟ್ರಿನೂ ಆಗಿಹೋಗಿದೆ. ಇಲ್ಲಿ ಯಾವುದೇ ಬದಲಾವಣೆಗಳು ಸಾಧ್ಯವಿಲ್ಲ. ಹಾಗಾಗಿ, ಕಥೆಯಾಗಿ ನೋಡಿ ಅನಿರುದ್ಧ್ ಸರ್ ಯಾವತ್ತಿದ್ದರೂ ಹೀರೋನೇ. ವಿಲನ್ ಅಲ್ಲ. ಈ ಫ್ಲ್ಯಾಶ್ ಬ್ಯಾಕ್‌ನಿಂದ ಬಂದ ಮೇಲೆ ಹೀರೋಯಿಸಂ ಅನ್ನು ನಾವು ಇನ್ನಷ್ಟು ರಿವೀಲ್ ಮಾಡ್ತೀವಿ. ಕಥೆಯಲ್ಲಿ ಟ್ವಸ್ಟ್‌ಗಳಿವೆ. ಇದ್ದಕ್ಕಿದ್ದಂತೆ ದಿಢೀರ್ ಅಂತ ನಾವು ಬದಲಾಯಿಸೋಕೂ ಆಗಲ್ಲ. ಕ್ಯಾರೆಕ್ಟರ್‌ನಲ್ಲಿ ವಿಭಿನ್ನತೆ ಇರಬೇಕು. ಇಲ್ಲಾಂದ್ರೆ ಯಾರೂ ನೋಡಲ್ಲ. ಅವರಿಬ್ಬರ ರೊಮ್ಯಾನ್ಸ್ ಜಾಸ್ತಿ ಆಗೋಯ್ತು. ರಾಜನಂದಿನಿ ಬರಬೇಕು ಅನ್ನೋ ತರಹ ಜನ ಫೀಲ್ ಮಾಡಿದ್ದರು. ಹಾಗಾಗಿ ಕಥೆಯಾಗಿ ನೋಡಿ.. ನಿಮಗೆ ಇಷ್ಟ ಆಗುತ್ತೆ ಖಂಡಿತ’’ 

‘’ಇದನ್ನ ಯಾರೀ ಮೆಸೇಜ್ ಕಳುಹಿಸ್ತಾರೋ.. ಅದಕ್ಕೆ ನೀವುಗಳು ಕಳುಹಿಸಬೇಕು. ಕಥೆಯಾಗಿ ನೋಡಿ.. ಟಿ.ಆರ್‌.ಪಿ ಮ್ಯಾಟರ್ ಅಲ್ಲ. ನಾವೇನು ಜನರಿಗೆ ಕಥೆ ಕೊಡ್ತೀವಿ, ನಮ್ಮ ಕಲಾವಿದರನ್ನು ಜನ ಎಲ್ಲೆಲ್ಲಿ ಗುರುತಿಸುತ್ತಾರೆ, ಎಷ್ಟು ಅಭಿಮಾನಿಗಳಿದ್ದಾರೆ.. ಅದರ ಮೇಲೆ ಆಗುತ್ತೆ. ಟಿ.ಆರ್.ಪಿ ಅನ್ನೋದು ಕೇವಲ ಒಂದು… ಕರ್ನಾಟಕದಲ್ಲಿ ಆರೇಳು ಕೋಟಿ ಜನ ಇರ್ತಾರೆ. ಒಂದು ಹತ್ತು ಕಡೆ ಮಷೀನ್ ಇಟ್ಟಿರುತ್ತಾರೆ. ಆ ಹತ್ತು ಊರಿನ ಜನ ಅಷ್ಟೇ ನೋಡಲ್ಲ. ಇಡೀ ಕರ್ನಾಟಕ ನೋಡುತ್ತೆ. ನಮ್ಮ ಸೀರಿಯಲ್‌ಗೆ ನಮ್ಮದೇ ಆದ ಅಭಿಮಾನಿ ವರ್ಗ ಇದ್ದಾರೆ’’

 

ಜನ ನಮ್ಮ ಕಲಾವಿದರನ್ನು.. ಒನ್ ಡೇ ಆರ್ಟಿಸ್ಟ್ ಬಂದು ಹೋದರೂ.. ಅವರನ್ನ ಜನ ಗುರುತಿಸುತ್ತಾರೆ ಅಂದ್ರೆ ನಮ್ಮ ಸೀರಿಯಲ್‌ ಸಿಕ್ಕಾಪಟ್ಟೆ ಪಾಪ್ಯುಲರ್ ಇದೆ. ಟಿ.ಆರ್‌.ಪಿ ಕಮ್ಮಿ ಇದೆ ಎಂಬ ಫೀಲ್‌ನ ಬಿಟ್ಟುಬಿಡಿ. ನಾವೊಂದು ಒಳ್ಳೆ ಸೀರಿಯಲ್ ಮಾಡ್ತಿದ್ದೀವಿ. ನಿಮ್ಮ ಸಪೋರ್ಟ್ ಇರುವ ಕಾರಣ ಈಗ ಒಂದು ಲೆವೆಲ್‌ಗೆ ಹೋಗಿದೆ. ಇನ್ನೂ ಚೆನ್ನಾಗಿ ಆಗುತ್ತೆ’’ ಪ್ಲೀಸ್ ಯಾರು ಈ ತರಹ ಮೆಸೇಜ್ ಹಾಕ್ತಾರೋ.. ಅವರಿಗೆ ನೀವೇ ಕನ್‌ವೇ ಮಾಡಿ..’’ ಎಂದು ಆರೂರು ಜಗದೀಶ್ ಹೇಳಿದ್ದಾರೆ.