Sudeep : ಕಿಚ್ಚನಿಗೆ ಇದೆ ಅಮೃತ ಇದ್ದಂತೆ ಎಂದು ಯಾರಿಗೂ ಸಹ ಗೊತ್ತಿರದ ವಿಚಾರ ಬಿಚ್ಚಿಟ್ಟ ಅರುಣ್ ಸಾಗರ್..!

By Infoflick Correspondent

Updated:Monday, September 5, 2022, 12:41[IST]

Sudeep :  ಕಿಚ್ಚನಿಗೆ ಇದೆ ಅಮೃತ ಇದ್ದಂತೆ ಎಂದು ಯಾರಿಗೂ ಸಹ ಗೊತ್ತಿರದ ವಿಚಾರ ಬಿಚ್ಚಿಟ್ಟ ಅರುಣ್ ಸಾಗರ್..!

ನಾಯಕ ನಟ ಕಿಚ್ಚ ಸುದೀಪ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಿಚ್ಚ ಸುದೀಪ್ ಅವರು ಕೇವಲ ನಟನೆಗೆ ಮಾತ್ರ ಹೆಚ್ಚು ಹೆಸರು ಮಾಡಿದವರು ಅಲ್ಲ, ಬದಲಿಗೆ ಅಭಿಮಾನಿಗಳನ್ನು ಹೆಚ್ಚು ಪ್ರೀತಿಸುವ ನಟ. ಅವರೊಟ್ಟಿಗೆ ಹೆಚ್ಚು ಸಮಯ ಕಳೆಯುವ ನಟ. ಕಿರುತೆರೆಯಲ್ಲಿ ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡು ಅವರದ್ದೇ ಆದ ಮಾತಿನ ಶೈಲಿ ಮೂಲಕ ಹೆಚ್ಚು ಹೆಸರು ಮಾಡಿದವರು. ಹಾಗೆ ಕೇವಲ ಕನ್ನಡಕ್ಕೆ ಮಾತ್ರವಲ್ಲದೆ ತೆಲುಗು, ತಮಿಳು, ಹಾಗೂ ಬಾಲಿವುಡ್ ನಲ್ಲೂ ಕೂಡ ಕಿಚ್ಚನ ಹವಾ ಇದೆ. ಹಂತ ಹಂತವಾಗಿ ಸುದೀಪ್ ಅವರು ಬೆಳೆದು ಬಂದಿದ್ದಾರೆ. ಇವರ ಸ್ನೇಹಿತರ ಬಳಗವನ್ನು ಇವರು ಎಂದು ಮರೆತಿಲ್ಲ. ಎಲ್ಲರನ್ನೂ ಕೈ ಹಿಡಿದು ಅವರ ಕೈಲಾದ ಸಹಾಯ ಮಾಡಿ ಮೇಲೆಕೆತ್ತುತ್ತ ಸಿನಿಮಾ ರಂಗದಲ್ಲಿ ಬೆಳೆಸಿದ್ದಾರೆ ಎನ್ನಬಹುದು.

ಅದನ್ನು ಅವರ ಸ್ನೇಹಿತರೆ ಹೆಚ್ಚು ಹೇಳಿಕೊಂಡಿರುವುದು ವಿಶೇಷ. ನಟ ಅರುಣ್ ಸಾಗರ್ ಕನ್ನಡದ ವೀರಮದಕರಿ ಸಿನಿಮಾದಲ್ಲಿ ಅತ್ಯದ್ಭುತ ಅಭಿನಯದ ಮೂಲಕ ಗಮನ ಸೆಳೆದ ನಟ. ಹಾಗೆ ವಿಷ್ಣುವರ್ಧನ್ ಸಿನಿಮಾದಲ್ಲಿ ಗೆಳೆಯನ ಪಾತ್ರ ಮಾಡಿ ಎಲ್ಲರನ್ನ ಮನರಂಜಿಸಿದ ನಟ. ಇದೀಗ ಕಿಚ್ಚನ ಬಗ್ಗೆ ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ. ಅವರ ಮತ್ತು ಕಿಚ್ಚನ ಗೆಳೆತನ ಹೇಗಿತ್ತು, ಸುಮಾರು 25 ವರ್ಷದ ಹಿಂದೆ ಇವರಿಬ್ಬರೂ ಯಾವ ರೀತಿ ಸ್ನೇಹವನ್ನ ಹೊಂದಿದ್ದರು ಎಂಬುದಾಗಿ ಹೇಳಿಕೊಂಡಿದ್ದಾರೆ..ಹೌದು ಸುದೀಪ್ ಅವರಿಗೆ ಅಮೃತ ಅಂದರೆ ಅದು ಚಹಾ ಅಂತೆ. ಮಧ್ಯರಾತ್ರಿ ಎರಡು ಗಂಟೆಗೆ ಆಗ ಮಾರ್ಕೆಟ್ ಬಳಿಗೊಂದು ಸಣ್ಣ ಚಹಾದ ಅಂಗಡಿ ಬಳಿ ಕುಳಿತುಕೊಂಡು, ದುಡ್ಡಿಲ್ಲದ ಸಮಯದಲ್ಲಿ ತುಂಬಾನೇ ಚರ್ಚೆ ಮಾಡಿ ಸಮಯ ಕಳೆಯುತ್ತಿದ್ದ ಕಾಲ ಅದು, ನಂತರದಲ್ಲಿ ಎಲ್ಲರಿಗೂ ಬೆಳಕಾಗಿ ದೀಪವಾಗಿದ್ದಾರೆ  ಈ ಸುದೀಪ್ ಎಂದು ನಟ ಅರುಣ್ ಸಾಗರ್ ಅವರು ಭಾವುಕರಾದರು.

ಅದೇ ಇಲ್ಲಿದೆ ನೋಡಿ ವಿಡಿಯೋ. ಕುಕಿಂಗ್ ವಿತ್ ಕಿರಿಕೊ ಎನ್ನುವ ಕಾರ್ಯಕ್ರಮ ಮೂಲಕ ಅರುಣ್ ಸಾಗರ್ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಹೇಳಿರುವ ಪ್ರತಿಯೊಂದು ಅಂಶಗಳು ಕೂಡ ನಿಜ ಎನಿಸುವಂತಿವೆ, ಈ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ,, ತಪ್ಪದೆ ವಿಡಿಯೋಗೊಂದು ಮೆಚ್ಚುಗೆ ತಿಳಿಸಿ ಧನ್ಯವಾದಗಳು... ( VIDEO CREDIT : STAR SUVARNA )