ನಿನಗೆ ಎರಡು ಮದುವೆ ಆಗುತ್ತವೆ ನೋಡು ಎಂದು ಬಿಗ್ ಬಾಸ್ ಸ್ಪರ್ಧಿಗೆ ಶಾಕ್ ಕೊಟ್ಟ ಆರ್ಯವರ್ಧನ್..!

By Infoflick Correspondent

Updated:Friday, August 26, 2022, 08:32[IST]

ನಿನಗೆ ಎರಡು ಮದುವೆ ಆಗುತ್ತವೆ ನೋಡು ಎಂದು ಬಿಗ್ ಬಾಸ್ ಸ್ಪರ್ಧಿಗೆ ಶಾಕ್ ಕೊಟ್ಟ ಆರ್ಯವರ್ಧನ್..!

ಮಾರಿ ಮುತ್ತು ಖ್ಯಾತಿಯ ಕಲಾವಿದೆಯ ಮೊಮ್ಮಗಳಾದ ಪುಟ್ರಾಜು ಲವರ್ ಆಫ್ ಶಶಿಕಲಾ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಜಯಶ್ರಿ ಇದೀಗ ಕನ್ನಡದ ಒಟಿಟಿ ಬಿಗ್ ಬಾಸ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಮನೆಗೆ ಕೆಲವರ ಆಯ್ಕೆ ವಿಚಾರವಾಗಿ ಆರಂಭದಿಂದಲೂ ತಿರಸ್ಕಾರ ವ್ಯಕ್ತವಾಗಿತ್ತು. ಆರ್ಯವರ್ಧನ್ ಗುರೂಜಿಯನ್ನು ಮತ್ತು ಸೋನು ಗೌಡ ಅವರನ್ನು ಯಾಕೆ ನೀವೂ ಬಿಗ್ಬಾಸ್ ಮನೆಗೆ ಕಳುಹಿಸಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದರು.  ಹೌದು ಇದೀಗ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿಯ ಒಬ್ಬ ಸ್ಪರ್ಧಿಗೆ ನಿನಗೆ ಎರಡು ಮದುವೆ ಆಗುತ್ತದೆ ಎಂದಿದ್ದಾರೆ. ಬಿಗ್ಬಾಸ್ ಮನೆಯಲ್ಲಿಯೇ ಭವಿಷ್ಯ ಹೇಳಲು ಶುರು ಹಚ್ಚಿಕೊಂಡಿರುವ ಗುರೂಜಿ ಸ್ಪರ್ಧಿ ಜಯಶ್ರೀ ಅವರಿಗೆ ನಿಮಗೆ ಎರಡು ಮದುವೆ ಆಗುತ್ತವೆ ಎಂದಿದ್ದಾರಂತೆ.   

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ವಿವಾಹಿತ ಪುರುಷನ ಜೊತೆ ನಾನು ಕೆಲವು ದಿನಗಳವರೆಗೆ ಸಂಬಂಧ ಹೊಂದಿದ್ದೆ ಎಂದು ಹೇಳಿಕೊಂಡಿರುವ ನಟಿ ಜಯಶ್ರೀ ಅವರಿಗೆ ಎರಡು ಮದುವೆ ಆಗುತ್ತವಂತೆ ಹೀಗೆಂದು ಭವಿಷ್ಯ ನುಡಿದಿರುವುದು ಆರ್ಯವರ್ಧನ್ ಗುರೂಜಿ. ಹಾಗೆ ನಿನಗೆ ಒಳ್ಳೆಯ ಮಕ್ಕಳು ಹುಟ್ಟುತ್ತವೆ. ನಿನಗಿಂತ ಎತ್ತರವಾಗಿ ಅವರು ಬೆಳೆಯುತ್ತಾರೆ. ನಿನ್ನ ಮಕ್ಕಳನ್ನ ನೀನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಎಂದಿದ್ದಾರೆ. ಇದಕ್ಕೆ ಜಯಶ್ರೀ ಮದುವೆ ಬಗ್ಗೆ ನನಗೆ ಆಸಕ್ತಿ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಬಿಸಿನೆಸ್ ಬಗ್ಗೆ ಭವಿಷ್ಯ ಹೇಳಲು ಹೇಳಿದ ಜಯಶ್ರಿ ಮಾತಿಗೆ ಆರ್ಯವರ್ಧನ್ ನೀನು ಬಿಸಿನೆಸ್ ಅಲ್ಲೂ ಕೂಡ ತುಂಬಾ ಎತ್ತರಕ್ಕೆ ಬೆಳೆಯುತ್ತೀಯ. ಆದರೆ ನಿನಗೆ ಯಾರು ಸಿಗುತ್ತಾರೋ ಅವರನ್ನು ಸರಿಯಾದ ರೀತಿಯಲ್ಲೆ ನೀನು ಉಪಯೋಗಿಸಿಕೋ, ಹಣದ ಮೇಲೆ ಹಿಡಿತ ಇಟ್ಟಿದ್ದೀಯ ನಿನಗೆ ಮೋಸ ಮಾಡುವವರು ತುಂಬಾ ಜನರಿದ್ದಾರೆ ಎಂದು ಜಯಶ್ರೀಗೆ ಗುರೂಜಿ ಎಚ್ಚರಿಕೆಯಿಂದ ಇರು ಎಂದಿದ್ದಾರೆ.

ಸಿನಿಮಾದಲ್ಲಿ ನಟನೆ ಮಾಡಿ ಗೆಲ್ಲದಿದ್ದರೂ ಕೂಡ ನೀನು ಸಿನಿಮಾದಲ್ಲಿ ಅಭಿನಯಿಸುತ್ತಿಯ ಎಂದು ಆರ್ಯವರ್ಧನ್ ಗುರೂಜಿ ಭವಿಷ್ಯ ನೋಡಿದಿದ್ದಾರೆ. ಇವೆಲ್ಲ ಭವಿಷ್ಯ ಕೇಳಿದ ಬಿಗ್ ಬಾಸ್ ಮನೆಯ ಕೆಲಸ ಸ್ಪರ್ಧಿಗಳು ಆರ್ಯವರ್ಧನ್ ಗುರೂಜಿ ಹೇಳುವ ಭವಿಷ್ಯ ಎಲ್ಲವೂ ಸುಳ್ಳು ಎಂದು ಈ ಮುಂಚೆ ಮಾತನಾಡಿಕೊಂಡಿದ್ದಾರೆ. ಹಾಗೆ ಇವರ ಭವಿಷ್ಯದ ಬಗ್ಗೆ ಅಪನಂಬಿಕೆ ಇದೆ. ಇದನ್ನು ಹೇಗೆ ನಟಿ ಜಯಶ್ರೀ ಈಗ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ...