Ashika Ranganath : ವಿಭಿನ್ನವಾಗಿ ಡ್ಯಾನ್ಸ್ ಮಾಡಿ ಮಾದಕ ರೂಪದಲ್ಲಿ ಕಾಣಿಸಿದ ನಟಿ ಆಶಿಕಾ ರಂಗನಾಥ್..! ವಿಡಿಯೋ ವೈರಲ್

By Infoflick Correspondent

Updated:Friday, June 10, 2022, 10:54[IST]

Ashika Ranganath :  ವಿಭಿನ್ನವಾಗಿ ಡ್ಯಾನ್ಸ್ ಮಾಡಿ ಮಾದಕ ರೂಪದಲ್ಲಿ ಕಾಣಿಸಿದ ನಟಿ ಆಶಿಕಾ ರಂಗನಾಥ್..! ವಿಡಿಯೋ ವೈರಲ್

ನಟಿ ಆಶಿಕಾ ರಂಗನಾಥ್ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿದ್ದಾರೆ. ಒಂದರ ಮೇಲೊಂದರಂತೆ ನೃತ್ಯದ ವಿಡೀಯೋ ಶೇರ್ ಮಾಡುತ್ತಲೇ ಇರುತ್ತಾರೆ. ಹೌದು ನಟ ಶರಣ್ ಅವರ ಜೊತೆ ಇತ್ತೀಚಿನ ಅವರ ಅವತಾರಪುರುಷ ಸಿನಿಮಾದಲ್ಲಿ ನಟಿ ಮಿಂಚಿದ್ದರು. ನಿರ್ದೇಶಕ ಸಿಂಪಲ್ ಸುನಿಯವರು ಶರಣ್ ಅವರಿಗೆ ಆಕ್ಷನ್ ಕಟ್ ಹೇಳಿದ್ದ ಈ ಅವತಾರಪುರುಷ ದೊಡ್ಡ ಮಟ್ಟದಲಿ ಸದ್ದು ಮಾಡದೆ ಇದ್ದರೂ ಬಾಕ್ಸಾಫೀಸಿನಲ್ಲಿ ತಕ್ಕ ಮಟ್ಟಿಗೆ ಕಲೆಕ್ಷನ್ ಮಾಡಿತ್ತು. ನಟ ಶರಣ್ ಮತ್ತು ಆಶಿಕ ರಂಗನಾಥ್ ಜೋಡಿ ಮೋಡಿ ಮಾಡಿರುವುದು ಇದೆ ಮೊದಲೇನಲ್ಲ ಬದಲಿಗೆ ನಟಿ ಆಶಿಕ ರಂಗನಾಥ್ ಮತ್ತು ಶರಣ್ ಅವರ ಜೋಡಿ ತೆರೆಯಮೇಲೆ ಈ ಮುಂಚೆಯೇ ಮಿಂಚಿದ್ದು ಚುಟು ಚುಟು ಎನ್ನುವ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ವಿಚಾರ ಎಲ್ಲರಿಗೂ ಗೊತ್ತು.

ಹೌದು ನಟಿ ಆಶಿಕಾ ರಂಗನಾಥ್ ಅವರು ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಅವರ ಅಭಿನಯದಿಂದ ಹೊಂದಿದ್ದಾರೆ. ಹಾಗೆ ಅವರ ಪ್ರೀತಿಯ ಅಭಿಮಾನಿಗಳ ಜೊತೆ ಆಗಾಗ ಸಂವಾದ ನಡೆಸುವ ಆಶಿಕಾ ರಂಗನಾಥ್ ಅವರು ಕೆಲ ಫೋಟೋ ಮತ್ತು ವಿಡಿಯೋಗಳ ಮೂಲಕ ರೀಲ್ಸ್ ಮಾಡುತ್ತಾ ಹೆಚ್ಚು ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಸುದೀಪ್ ಅವರ ರಾರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿ ಎಲ್ಲರಿಗೂ ಶಾಕ್ ನೀಡಿದ್ದ ಆಶಿಕಾ ರಂಗನಾಥ್ ಅವರು ಇದೀಗ ಮತ್ತೊಂದು ಹಾಡಿನ ಮೂಲಕ ಮಾದಕವಾಗಿ ಕಾಣಿಸಿಕೊಂಡಿರುವ ಅದೇ ವಿಡಿಯೋ ವೈರಲ್ ಆಗುತ್ತಿದೆ. ಹೌದು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಟಿ ಆಶಿಕ ರಂಗನಾಥ್ ಅವರ ಈ ಮಾದಕ ನೃತ್ಯ ಹೇಗಿದೆ ಗೊತ್ತಾ..?   

ನಟಿಯ ಹೊಸ ವಿಡಿಯೋದಲ್ಲಿಯ ನೃತ್ಯಕ್ಕೆ ಅಭಿಮಾನಿಗಳು ನೆಟ್ಟಿಗರು ಎಲ್ಲರೂ ಕೂಡ ಆಗಿದ್ದಾರೆ ಎನ್ನಬಹುದು. ನೀವು ಸಹ ನಿಜಕ್ಕೂ ನಟಿ ಆಶಿಕಾ ರಂಗನಾಥ್ ಅವರ ಈ ಮಾದಕ ವಿಡೀಯೋ ನೋಡಿದ್ರೆ ಕಳೆದು ಹೋಗ್ತೀರಾ. ಇಲ್ಲಿದೆ ನೋಡಿ ಆ ವಿಡಿಯೋ. ಆಶಿಕಾ ಅವರ ಅಪ್ಪಟ ಅಭಿಮಾನಿಯಾಗಿದ್ರೆ ತಪ್ಪದೇ ವಿಡಿಯೋವನ್ನು ಕೊನೆಯವರೆಗೂ ನೋಡಿ. ಹಾಗೆ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು..