Ashika Ranganath : ಪಟಾಕಿ ಪೋರಿಯೋ ನಟಿ ಆಶಿಕಾ ರಂಗನಾಥ್ ರಿಂದ ಎಕ್ಕ ಸಕ್ಕ ಡ್ಯಾನ್ಸ್..! ವಾವ್ ವಿಡಿಯೋ ವೈರಲ್..!

By Infoflick Correspondent

Updated:Monday, May 30, 2022, 17:14[IST]

Ashika Ranganath : ಪಟಾಕಿ ಪೋರಿಯೋ ನಟಿ ಆಶಿಕಾ ರಂಗನಾಥ್ ರಿಂದ ಎಕ್ಕ ಸಕ್ಕ ಡ್ಯಾನ್ಸ್..! ವಾವ್ ವಿಡಿಯೋ ವೈರಲ್..!

ಕನ್ನಡ ಚಲನಚಿತ್ರರಂಗದ ಇತ್ತೀಚಿನ ಖ್ಯಾತ ನಟಿ ಆಶಿಕಾ ರಂಗನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಎಷ್ಟರ ಮಟ್ಟಿಗೆ ಆಕ್ಟಿವ್ ಆಗಿದ್ದಾರೆ ಎಂದರೆ, ಯಾವುದೇ ಹೊಸ ಹೊಸ ಸಿನಿಮಾದ ಹಾಡುಗಳು ಹೊರಬೀಳುತ್ತಿದ್ದಂತೆ, ಹಾಗೆ ಅವುಗಳು ವೈರಲ್ ಆಗುತ್ತಿದ್ದಂತೆ ಅದಕ್ಕೆ ತಮ್ಮದೇ ಆದ ಶೈಲಿಯಲ್ಲಿ ನೃತ್ಯಮಾಡಿ ವಿಡಿಯೋ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ನಟಿ ಆಶಿಕಾ ರಂಗನಾಥ್ ಅವರು ಇತ್ತೀಚಿಗೆ ಕಿಚ್ಚ ಸುದೀಪ್ ಅವರ ಅಭಿನಯದ ವಿಕ್ರಾಂತ್ ರೋಣ ಎನ್ನುವ ಸಿನಿಮಾದ ಐಟಂ ಹಾಡಿಗೆ ನೃತ್ಯ ಮಾಡಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗದ ಪೇಜಿನಲ್ಲಿ ನಟಿ ಆಶಿಕಾ ರಂಗನಾಥ್ ಅವರ ಈ ವಿಡಿಯೋ ಪೋಸ್ಟ್ ಆಗಿದ್ದು ರಂಗನಾಥ್ ಅವರ ಡಾನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ ಎನ್ನಬಹುದು.   

ಹೌದು ನಟಿ ರಂಗನಾಥ್ ಮಾತ್ರವಲ್ಲದೆ ಸಾಕಷ್ಟು ಯುವ ನಟಿಯರು ವಿಕ್ರಾಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಐಟಂ ಹಾಡು, ಯೂಟ್ಯೂಬ್ನಲ್ಲಿ ಒಳ್ಳೆ ಪ್ರತಿಕ್ರಿಯೆ ಕೂಡ ಪಡೆಯುತ್ತಿದೆ. ನಟಿ ಆಶಿಕಾ ರಂಗನಾಥ್ ಅವರು ಇತ್ತೀಚೆಗೆ ನಟ ಶರಣ್ ಜೊತೆ ಅವತಾರಪುರುಷ ಸಿನಿಮಾದಲ್ಲಿ ಮಿಂಚಿದ್ದರು. ಹೀಗೆ ಒಂದಲ್ಲ ಒಂದು ವಿಚಾರವಾಗಿ ಆಶಿಕ ರಂಗನಾಥ್ ಎಲ್ಲರೆದುರು ವಿಡೀಯೋ ಮೂಲಕ ಬಂದೆ ಬರುತ್ತಾರೆ. ಆಶಿಕ ಅವರು ಇದೀಗ ಡಾನ್ಸ್ ಮಾಡಿರುವ ಪರಿ ನೋಡಿ ಅಭಿಮಾನಿಗಳು ಮತ್ತು ನೆಟ್ಟಿಗರು ವಾವ್ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಅಸಲಿಗೆ ಆಶಿಕಾ ಸೊಂಟ ಬಳುಕಿಸಿದ ರೀತಿ ಎಕ್ಕಸಕ್ಕ ಎಂದು ನೃತ್ಯ ಮಾಡಿದ ವಿಡಿಯೋ ಹೇಗಿದೆ ಗೊತ್ತಾ..? ನೀವು ಒಮ್ಮೆ ನೋಡಲೇಬೇಕು. ಆಶಿಕಾ ರಂಗನಾಥ್ ಅವರು ಈ ಮುಂಚೆ ಸುದೀಪ್ ಕೋಟಿಗೊಬ್ಬ 3 ಸಿನಿಮಾದ ಪಟಾಕಿ ಪೋರಿಯೊ ಎಂಬ ಹಾಡಿನ ಮೂಲಕ ಎಲ್ಲರಿಗೂ ಹೆಚ್ಚು ಇಷ್ಟವಾಗಿದ್ದರು. ಇದೀಗ ಮತ್ತೊಮ್ಮೆ ಮತ್ತೊಂದು ಐಟಂ ಸಾಂಗ್ಸ್ ಗೆ ನೃತ್ಯ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...