Ashika Ranganath : ಥೈಲ್ಯಾಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಬೆಳದಿಂಗಳ ಬಾಲೆ : ವಿಡಿಯೋ ವೈರಲ್ ?

By Infoflick Correspondent

Updated:Monday, August 1, 2022, 19:30[IST]

Ashika Ranganath :  ಥೈಲ್ಯಾಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಬೆಳದಿಂಗಳ ಬಾಲೆ :  ವಿಡಿಯೋ  ವೈರಲ್ ?

ಸಿನಿಮಾಗಳ ಜೊತೆಗೆ ಫೋಟೋಶೂಟ್ ಳಲ್ಲೂ ನಟಿ ಆಶಿಕಾ ರಂಗನಾಥ್ ಬ್ಯುಸಿಯಾಗಿರುತ್ತಾರೆ. ಈಗ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದಿರುವ ಆಶಿಕಾ ರಂಗನಾಥ್ ಅವರು ಸದ್ಯ ಥೈಲ್ಯಾಂಡ್ ಟ್ರಿಪ್ ನಲ್ಲಿ ಮಜಾ ಮಾಡುತ್ತಿದ್ದಾರೆ. ಫುಲ್ ಮಸ್ತಿ ಮೂಡ್ ನಲ್ಲಿರುವ ನಟಿ, ಫೋಟೋ ಶೂಟ್ ಗಳಿಗೆ ಮಾತ್ರ ಬ್ರೇಕ್ ಕೊಟ್ಟಿಲ್ಲ. ಥೈಲ್ಯಾಂಡ್ ನಲ್ಲಿ ಹಾಟ್ ಫೋಟೋಗಳಿಗೆ ಫೋಸ್ ಕೊಟ್ಟಿರುವ ಆಶಿಕಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಆಶಿಕಾ ರಂಗನಾಥ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಬ್ಯುಸಿಯಲ್ಲೂ ಈಗ ಪ್ರವಾಸ ಕೈಗೊಂಡಿದ್ದಾರೆ. ಮದಗಜ ಬೆಡಗಿ ಸದ್ಯ ಥೈಲ್ಯಾಂಡ್ ನಲ್ಲಿ  ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಸ್ಟೈಲಿಶ್, ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಆಶಿಕಾ ಈಗ ಬೋಲ್ಡ್ ಆಂಡ್ ಹಾಟ್ ಆಗಿ ಮಿನುಗುತ್ತಿದ್ದಾರೆ. ಸಮುದ್ರದ ಮಧ್ಯೆ ಮತ್ಸ್ಯ ಕನ್ಯೆಯಂತೆ ಕಂಗೊಳಿಸುತ್ತಿದ್ದಾರೆ. ಥೈಲ್ಯಾಂಡ್ನ ಸುಂದರ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದು, ಇವರ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 

2016ರಲ್ಲಿ ಕ್ರೇಜಿ ಬಾಯ್ ಚಿತ್ರ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆಶಿಕಾ ರಂಗನಾಥ್ ಅವರಿಗೆ ಮುಗುಳು ನಗೆ ಸಿನಿಮಾ ಹೆಸರು ತಂದುಕೊಟ್ಟಿತು. ಈ ಚಿತ್ರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಗುಳು ನಗೆ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಆಶಿಕಾ ಸ್ಯಾಂಡಲ್ವುಡ್ನಲ್ಲಿ ಚುಟು ಚುಟು ಬೆಡಗಿ ಎಂದೇ ಗುರುತಿಸಿಕೊಂಡಿದ್ದಾರೆ. ರ್ಯಾಂಬೋ, ಕೋಟಿಗೊಬ್ಬ 3,  ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯ ಹಲವು ಚಿತ್ರಗಳಲ್ಲಿ ನಟಿಸಿದ್ದು, ಈಗ ರಿಲೀಸ್ ಆಗಲು ಸಜ್ಜಾಗಿವೆ.