ಸಂದರ್ಶನದಲ್ಲಿ ಕಣ್ಣೀರಿಡುತ್ತಾ ಹೊರಟ ಆಶಿಕಾ ರಂಗನಾಥ್! ಕಾರಣ ಈ ಘಟನೆ

By Infoflick Correspondent

Updated:Tuesday, May 10, 2022, 11:59[IST]

ಸಂದರ್ಶನದಲ್ಲಿ ಕಣ್ಣೀರಿಡುತ್ತಾ ಹೊರಟ ಆಶಿಕಾ ರಂಗನಾಥ್! ಕಾರಣ ಈ ಘಟನೆ

ಆಶಿಕಾ ರಂಗನಾಥ್  ಮತ್ತು ಶರಣ್ ಜೋಡಿಯಾಗಿ ನಟಿಸಿರುವ ಅವತಾರ ಪುರುಷ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಡಿಫರೆಂಟ್ ಆಗಿ ಚಿತ್ರತಂಡ ಪ್ರಚಾರ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನ, ಆಶಿಕಾ ಮತ್ತು ಶರಣ್ ಅಭಿನಯಕ್ಕೆ ಜನ ಮೆಚ್ಚುಕೊಂಡಿದ್ದಾರೆ.  ಆದರೆ ಇದೀಗ ಆಶಿಕಾ ಮತ್ತೊಂದು ವಿಷಯಕ್ಕೆ ವೈರಲ್ ಆಗುತ್ತಿದ್ದಾರೆ. ಜನರಿಂದ ಭಾರಿ ಮೆಚ್ಚುಗೆ ಪಡೆದುಕೊಂಡ ಆಶಿಕಾ ರಮಗನಾಥ್ ನಿರೂಪಕರೊಬ್ಬರಿಂದ ತರಾಟೆಗೆ  ಒಳಗಾಗಿದ್ದಾರೆ. ಅವತಾರಪುರುಷ ಸಿನಿಮಾ ಪ್ರಚಾರದ ಸಂದರ್ಶನಕ್ಕೆ ನಟಿ ತಡವಾಗಿ ಬಂದಿದಕ್ಕೆ ನಿರೂಪಕ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ  ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು. ಅಂದು ನಡೆದ ಘಟನೆ ಕುರಿತು ಇಲ್ಲಿದೆ ನೋಡಿ ವಿವರ ಮಾಹಿತಿ 

ಸಿನಿಮಾ ಚಿತ್ರೀಕರಣ ಇರಲಿ ಅಥವಾ ಪ್ರಚಾರ ಇರಲಿ ಆಶಿಕಾ ಸರಿಯಾದ ಸಮಯಕ್ಕೆ ಬರುತ್ತಾರೆ ಆದರೆ ಶೋವೊಂದರಲ್ಲಿ ಅವತಾರ ಪುರುಷ ಸಿನಿಮಾ ಪ್ರಚಾರ ಮಾಡುವ  ಈ ಕಾರ್ಯಕ್ರಮದ ದಿನ ನಟಿ ಅರ್ಥ ಗಂಟೆ ತಡವಾಗಿ ಬಂದಿದ್ದಾರೆ!  ನಿರ್ದೇಶಕ ಸಿಂಪಲ್ ಸುನಿ, ನಟ ಶರಣ್ ಮತ್ತು ನಿರೂಪಕರು ಕಾದು ಕಾದು ಕಾರ್ಯಕ್ರಮ ಕ್ಯಾನ್ಸಲ್ ಮಾಡುವ ವಿಚಾರಕ್ಕೆ ಬಂದಿದ್ದರು. 

ಆಶಿಕಾ ಕಾರ್ಯಕ್ರಮಕ್ಕೆ ಬರುತ್ತಲೇ ಏಕೆ ತಡ ಎಂದು ನಿರೂಪಕರು ಮಾತನಾಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ನಟ ಶರಣ್ ಮತ್ತು ನಿರೂಪಕ ಸೇರಿಕೊಂಡು ಬ್ಯಾಕ್ ಟು ಬ್ಯಾಕ್ ಪ್ರಶ್ನೆ ಕೇಳಿ ಆಶಿಕಾ ರೇಗಿ ಹೀಗೆ ಮಾತನಾಡಿದ್ದಾರೆ ಇಲ್ಲಿದೆ ಅವರ ಮಾತಿನ ವಿವರ  'ಏನ್ ಸರ್ ನಾನೇ ಯಾವಾಗಲೂ ಲೇಟ್ ಆಗಿ ಬರುವ ರೀತಿ ಹೇಳುತ್ತಿದ್ದೀರಾ? ಇದು ಮೊದಲ ಬಾರಿ ಹೀಗೆ ಆಗಿದ್ದು. ನಿರ್ದೇಶಕ ಸುನಿ ಸರ್ ಕೂಡ ಲೇಟ್ ಆಗಿ ಬಂದಿದ್ದಾರೆ. ನಾನು ಯಾವತ್ತೂ ಲೇಟ್ ಆಗಿ ಬಂದಿಲ್ಲ. ಮದಗಜ ಸಿನಿಮಾಗೂ ಕೂಡ ನಾನು ಲೇಟ್ ಆಗಿ ಬಂದಿಲ್ಲ. ನೀವು ಬೇಕಿದ್ದರೆ ಚೇತನ್ ಅಥವಾ ನಟ ಶ್ರೀಮುರಳಿ ಅವರಿಗೆ ಕರೆ ಮಾಡಿ.  ನಿನ್ನೆ ನನಗೆ ಒಂದು ಅವಾರ್ಡ್ ಕಾರ್ಯಕ್ರಮ ಇತ್ತು ಅದಿಕ್ಕೆ ಇವತ್ತು ಲೇಟ್ ಆಗಿ ಬರ್ತಿನಿ ಅಂತ ಹೇಳಿದ್ದೀನಿ. ಈಗ ನಾನು ಬಂದಿದ್ದೀನಿ ವಾದ ಮಾಡುವ ಬದಲು ಸಂದರ್ಶನ ಶುರು ಮಾಡೋಣ. ನನ್ನಿಂದ ಸಮಸ್ಯೆ ಆಗಿದೆ ಅಂದ್ರೆ ಇಲ್ಲಿಗೆ ಬಿಡಿ ನಾನು ಸಂದರ್ಶನದಲ್ಲಿ ಇರುವುದಿಲ್ಲ ನೀವೇ ಮಾಡಿಕೊಳ್ಳಿ.  

ನೀವೆಲ್ಲಾ ಯಾಕೆ ಹೀರೋಯಿನ್ ಲೇಟ್ ಅಂತ ಇಷ್ಟು ದೊಡ್ಡದಾಗಿ ಮಾಡ್ತಿದ್ದೀರಾ?  ನನ್ನ ಮನೆಯಿಂದ ಇಲ್ಲಿಗೆ ಬರೋಕೆ 20 ಕಿಲೋ. ನಾನು ಬರಲು 45 ನಿಮಿಷ ಬೇಕಿತ್ತು. ಎಲ್ಲರ ಟೈಮ್ ವೇಸ್ಟ್‌ ಮಾಡುವುದು ಬೇಡ ಸಂದರ್ಶನ ಮಾಡೋಣ' ಎಂದು ಆಶಿಕಾ ಮಾತನಾಡುತ್ತಾರೆ. 

ನಟಿ ಆಶಿಕಾ ಅವರ ಈ ಮಾತಿಗೂ ಸುಮ್ಮನಾಗದೇ ನಿರ್ದೇಶಕ ಸಿಂಪಲ್ ಸುನಿ, ನಟ ಶರಣ್ ಮತ್ತು ನಿರೂಪಕ ಸೇರಿಕೊಂಡು ಬ್ಯಾಕ್ ಟು ಬ್ಯಾಕ್ ಪ್ರಶ್ನೆ ಕೇಳಿ ಆಶಿಕಾ ಕಣ್ಣೀರು ಇಡುವ ರೀತಿ ಮಾಡಿದ್ದಾರೆ. ಬೇಸರದಲ್ಲಿ ಆಶಿಕಾ ಎದ್ದು ಹೋಗಲು ಮುಂದಾಗುತ್ತಾರೆ. ಆಗ ನಿರೂಪಕ ಓಡೋಡಿ ಆಶಿಕಾ ಕೈ ಹಿಡಿದುಕೊಂಡು ನಾವು ಮಾಡಿದ್ದು ತಮಾಷೆಗಾಗಿ Prank ಇದೆಲ್ಲಾ ತಮಾಷೆ. ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ಆಗ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿದೆ. ಅವತಾರ ಪುರುಷ ಸಿನಿಮಾದ  ಹೊಸ ಅವತಾರದ ವಿಡಿಯೋ ನೋಡಿ ಮೊದಲು ಸಿರಿಯಸ್ ಆದ ಜನತೆ ನಂತರ ಬಿದ್ದು ಬಿದ್ದು ನಕ್ಕಿದ್ದಾರೆ. (Video credit : tv9 kannada )