Shivraj Kumar : ಶಿವಣ್ಣನಿಗೆ ಗೌರವ ಕೊಡುವುದಕ್ಕೆ ಸ್ಟೇಜ್ ಮೇಲೆ ಬಂದ ಅಶ್ವಿನಿ..! ಇದಲ್ಲವೇ ಸಂಸ್ಕಾರಾ ಅಂದ್ರೆ

By Infoflick Correspondent

Updated:Friday, June 24, 2022, 14:38[IST]

Shivraj Kumar :  ಶಿವಣ್ಣನಿಗೆ ಗೌರವ ಕೊಡುವುದಕ್ಕೆ ಸ್ಟೇಜ್ ಮೇಲೆ ಬಂದ ಅಶ್ವಿನಿ..! ಇದಲ್ಲವೇ ಸಂಸ್ಕಾರಾ ಅಂದ್ರೆ


ವೇದ - ದಿ ಬ್ರೂಟಲ್ 1960 ರ ಆಕ್ಷನ್ ಡ್ರಾಮಾ ಚಲನಚಿತ್ರವಾಗಿದ್ದು, ಹರ್ಷ ಎ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್ ಮತ್ತು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿದ್ದು, ನಟಿ ಉಮಾಶ್ರೀ, ಅದಿತಿ ಸಾಗರ್, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ಭರತ್ ಸಾಗರ್, ಪ್ರಸನ್ನ, ವಿನಯ್,  ಸಂಜೀವ್, ಕುರಿ ಪ್ರತಾಪ್ ಹಾಗೇನೇ ಇನ್ನೂ ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿದ್ದು, ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣವಿದೆ, ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ ಕುಮಾರ್ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದ್ದಾರೆ ಎನ್ನಲಾಗಿದೆ..   

ಹೌದು ನಿನ್ನೆ ನಟ ಶಿವರಾಜ್ ಕುಮಾರ್ ಅವರ ಅಭಿನಯದ ವೇದ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಆಗಿದ್ದು, ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಿನಿ ರಂಗದ ಖ್ಯಾತ ಗಣ್ಯರು ಆಗಮಿಸಿದ್ದರು. ಹಾಗೆ ಮ್ಯೂಸಿಕ್ ಡೈರೆಕ್ಟರ್ಸ್ ಬಂದಿದ್ದರು. ಖ್ಯಾತ ನಿರ್ಮಾಪಕರುಗಳು ಕೂಡ ಆಗಮಿಸಿದ್ದರು. ಶಿವಣ್ಣ ವೇದಿಕೆ ಮೇಲೆ ಮಾತನಾಡಿದ್ದು ನಾನು ಈ ಹಂತದವರೆಗೆ ಬರಲು ಕಾರಣ ನೀವೆ, ಅಭಿಮಾನಿ ದೇವರುಗಳ ಜೊತೆಗೆ ನನ್ನ ಪ್ರೀತಿ ಸದಾ ಇರುತ್ತದೆ. ಅವರೊಟ್ಟಿಗೆ ಜಗಳ ಆಡುತ್ತಾ ಪ್ರೀತಿ ಸ್ನೇಹದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಅವರ ಜೊತೆ ಕೀಟಲೆ ಮಾಡಿದ್ದೇನೆ, ನಾನು ಜಗಳ ಮಾಡಬೇಕು ಎಂದರೆ ಯಾರು ಜೊತೆ ಮಾಡಬೇಕು, ಅಭಿಮಾನಿಗಳ ಜೊತೆಗೆನೆ ಅಲ್ಲವೇ, ಅವರ ಜೊತೆ ಜಗಳ ಆಡಿಕೊಂಡು 125ನೇ ಸಿನಿಮಾವರೆಗೆ ಬಂದಿದ್ದೇನೆ.

ಅವರಿಗೆಲ್ಲ ನಾನು ಚಿರಋಣಿ. ಸಿನಿಮಾ ನಿರ್ಮಾಪಕರುಗಳು ಇದ್ದಾರೆ, ನಿರ್ದೇಶಕರು ಇದ್ದಾರೆ, ಮ್ಯೂಸಿಕ್ ಡೈರೆಕ್ಟರ್ಸ್ ಹಾಗೆ ಟೆಕ್ನಿಷಿಯನ್ಸ್ ಗಳು ಇದ್ದಾರೆ ಎಲ್ಲರಿಗೂ ಕೂಡ ನನ್ನ ಹೃತ್ಪೂರ್ವಕವಾದ ಧನ್ಯವಾದ ಎಂದರು ಶಿವಣ್ಣ. ಹೌದು ಬಳಿಕ ಕೊನೆಯಲ್ಲಿ ಮರೆತ ಒಬ್ಬೊಬ್ಬರನ್ನ ನೆನಪಿಸಿಕೊಂಡು  ಧನ್ಯವಾದ ತಿಳಿಸಿದ ಶಿವರಾಜ್ ಕುಮಾರ್ ಅವರು, ಹರ್ಷ ಅವರ ಬಗ್ಗೆ ಮಾತನಾಡಿ ಅವರು ನಮ್ಮ ಮನೆಯವರೇ ಇದ್ದ ಹಾಗೆ ಅವರ ಹೆಸರೇಕೆ ತೆಗೆದುಕೊಳ್ಳೋದು ಅಲ್ವಾ ಎಂದು ಖುಷಿಯಿಂದ ಮಾತನಾಡಿದರು ನಟ ಶಿವಣ್ಣ. ವೇದಿಕೆ ಮೇಲೆ ರಾಜ್ ಕುಟುಂಬದ ಪ್ರತಿಯೊಬ್ಬರನ್ನು ಬರ ಹೇಳಲು ಹೇಳಿ, ಒಬ್ಬೊಬ್ಬರ ಹೆಸರನ್ನೇ ತೆಗೆದುಕೊಂಡು ಕರೆದರು. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ಅವರನ್ನು ಕೂಡ ಕರೆದರು. ಆಗ ಶಿವಣ್ಣನವರಿಗೆ ಗೌರವ ಕೊಡುವುದಕ್ಕೆ ಸ್ಟೇಜ್ ಸೇರಿದ ಅಶ್ವಿನಿ ಪುನೀತ್ ಅವರು ಹಾಗೂ ಇಡೀ ರಾಜ್ ಕುಟುಂಬದ ಫೋಟೋವನ್ನ ಬಳಿಕ ತೆಗೆಯಲಾಯಿತು. ಇಲ್ಲಿದೆ ನೋಡಿ ಆ ವಿಡಿಯೋ. ನೀವು ಕೂಡ ನಟ ಶಿವಣ್ಣ ಅವರ 125ನೇ ಸಿನಿಮಾ ನೋಡಲು ಕಾಯುತ್ತಿದ್ದರೆ, ತಪ್ಪದೇ ಮಾಹಿತಿಯನ್ನ ಶೇರ್ ಮಾಡಿ, ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿ ಕಮೆಂಟ್ ಮಾಡಿ ದನ್ಯವಾದಗಳು... ( video credit : news first kannada )