Aswini Puneeth Rajkumar :ಮೊದಲ ಬಾರಿ ವೇದಿಕೆ ಮೇಲೆ ಮಾತನಾಡಿದ ಅಶ್ವಿನಿ ಪುನೀತ್..! ನೋವಿನಲ್ಲಿ ಹೇಳಿದ್ದೆ ಬೇರೆ..!

By Infoflick Correspondent

Updated:Wednesday, May 4, 2022, 11:20[IST]

Aswini Puneeth Rajkumar :ಮೊದಲ ಬಾರಿ ವೇದಿಕೆ ಮೇಲೆ ಮಾತನಾಡಿದ ಅಶ್ವಿನಿ ಪುನೀತ್..! ನೋವಿನಲ್ಲಿ ಹೇಳಿದ್ದೆ ಬೇರೆ..!

ಹೌದು ಸ್ನೇಹಿತರೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆಗೆ ಇಲ್ಲ. ಆದರೆ ಅದು ಕೇವಲ ದೈಹಿಕವಾಗಿ ಎಂದು ಹೇಳಬಹುದು. ಪುನೀತ್ ಅವರು ಎಷ್ಟು ಸರಳ ವ್ಯಕ್ತಿ ಎಂದರೆ ಅವರಿಗೆ ಅವರೇ ಸಾಟಿ. ಇನ್ನೊಬ್ಬ ಅಪ್ಪು ನಮಗೆ ಸಿಗಲು ಸಾಧ್ಯವೇ ಇಲ್ಲ. ಆ ರೀತಿ ಪುನೀತ್ ರಾಜ್ ಕುಮಾರ್ ಅವರು ಬದುಕಿ ದೇವರಾಗಿ ಹೋಗಿದ್ದಾರೆ. ಈಗಲೂ ಕೂಡ ಅಪ್ಪು ಅವರ ನೆನಪು ಮಾತ್ರ ಹೆಚ್ಚು ಕಾಡುತ್ತಿದೆ. ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಅಪ್ಪು ನಮ್ಮ ತಲೆಯ ಆಲೋಚನೆಗೆ ಬಂದು ಹೋಗುತ್ತಾರೆ. ಇದೀಗ ದೇವರೇ ಆಗಿದ್ದಾರೆ ಎನ್ನಬಹುದು. ಹಾಗೆ ಬದುಕಿದ್ದರೆ ಅಪ್ಪು ರೀತಿ ನಿಜವಾಗಿ ನಿಜಜೀವನದಲ್ಲಿ ಬದುಕಬೇಕು ಎಂದೆನಿಸುತ್ತದೆ.

ಒಬ್ಬ ದೇವತಾ ಮನುಷ್ಯ ಆಗುವುದು ಹೇಗೆ ಎಂಬುದನ್ನು ಅಪ್ಪು ಕಲಿಸಿ ಕೊಟ್ಟು ಹೋಗಿದ್ದಾರೆ. ಹಾಗೆ ಕಷ್ಟ ಎಂದವರಿಗೆ ಸಹಾಯ ಮಾಡಿ ದೇವರಾಗಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರು ಇಲ್ಲದ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್ ಅವರು ತುಂಬಾನೇ ಕುಗ್ಗಿಹೋಗಿದ್ದರು. ಮಕ್ಕಳು ಕೂಡ ಅಪ್ಪನ ನೆನೆದು ಕಣ್ಣೀರು ಹಾಕುವಂತಾಗಿತ್ತು. ಇಡೀ ರಾಜ್ ಫ್ಯಾಮಿಲಿ, ಕರುನಾಡೆ ಪುನೀತ್ ಅವರ ಅಕಾಲಿಕ ಮರಣದ ಅಗಲಿಕೆಯಿಂದ ಇನ್ನೂ ಹೊರಬಂದಿಲ್ಲ. ಹೌದು ಪುನೀತ್ ರಾಜ್ ಕುಮಾರ್ ಅವರ ಇದ್ದಾಗಲೂ ಅಶ್ವಿನಿ ಪುನೀತ್ ಹೆಚ್ಚು ವೇದಿಕೆ ಮೇಲೆ ಮಾತನಾಡಿರುವುದು ನಾವು ನೋಡಿಯೇ ಇಲ್ಲ. ಅಪ್ಪು ರೀತಿಯೇ ಅಶ್ವಿನಿ ಮೇಡಂ ಸಹ ತುಂಬಾ ಸರಳ ವ್ಯಕ್ತಿತ್ವ.

ಇದೀಗ ಚಿತ್ರದುರ್ಗದಲ್ಲಿ ಅಪ್ಪು ಇಲ್ಲವಾದ ಮೊದಲ ಬಾರಿ ವೇದಿಕೆ ಮೇಲೆ ಮಾತನಾಡಿದ್ದು ಅಶ್ವಿನಿ ಅವರು ಬಸವಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹೌದು ಅಶ್ವಿನಿ ಅವರಿಗೆ ಮಾತನಾಡಲು ಹೇಳಿದಾಗ 'ಎಲ್ಲರಿಗೂ ನಮಸ್ಕಾರ ಈ ಮುರುಘಾಮಠಕ್ಕೆ ಕೊಡುಗೆ ನೀಡಿದ್ದಕ್ಕೆ ಧನ್ಯವಾದ ಥ್ಯಾಂಕ್ಯೂ' ಎಂದು ಸಿಂಪಲ್ ಆಗಿ ಮಾತನಾಡಿದ್ದಾರೆ. ಹೌದು ಅದೇ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಪ್ಪು ಫ್ಯಾನ್ಸ್ ಅಶ್ವಿನಿ ಅವರ ಮಾತು ಕೇಳಿ ಖುಷಿ ಆಗಿದ್ದಾರೆ. ಮುರುಘಾಮಠದ ಈ ವಿಡಿಯೋ ನೋಡಿ. ಅಪ್ಪು ಅವರ ಪತ್ನಿ ಅಶ್ವಿನಿ ಅವರು ಮಾತನಾಡಿದ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.. (video credit : news first kannada )