ಚಿರು ಪತ್ನಿ ಮೇಘನಾ ರೀತಿಯಲ್ಲೇ ಅಪ್ಪು ಪತ್ನಿ ಅಶ್ವಿನಿ ಅವರು ತವರು ಮನೆ ಸೇರಿದ್ರಾ..? ಅಸಲಿ ಸತ್ಯ ಇಲ್ಲಿದೆ

By Infoflick Correspondent

Updated:Saturday, March 5, 2022, 14:02[IST]

ಚಿರು ಪತ್ನಿ ಮೇಘನಾ ರೀತಿಯಲ್ಲೇ ಅಪ್ಪು ಪತ್ನಿ ಅಶ್ವಿನಿ ಅವರು ತವರು ಮನೆ ಸೇರಿದ್ರಾ..? ಅಸಲಿ ಸತ್ಯ ಇಲ್ಲಿದೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರು ಎಲ್ಲರಿಂದ ಅಗಲಿ ಐದು ತಿಂಗಳ ಹತ್ತಿರ ಆಗುತ್ತಿದೆ ಆದರೂ ಕೂಡ ಅವರ ಮೇಲಿನ ಕಿಂಚಿತ್ತು ಪ್ರೀತಿ ಕಡಿಮೆಯಾಗಿಲ್ಲ. ಹಾಗೆ ಅವರನ್ನು ನೆನಪು ಮಾಡಿಕೊಳ್ಳದ ದಿನಗಳು ಒಂದು ದಿನವು ಕಳೆದಿಲ್ಲ. ಅಷ್ಟರಮಟ್ಟಿಗೆ ಅಪ್ಪು ಅವರ ಅಗಲಿಕೆ ನೋವು ಎಲ್ಲರಿಗೂ ಆಗುತ್ತಿದೆ. ಇಂದಿಗೂ ಅಪ್ಪು ಅವರು ಎಲ್ಲೂ ಹೋಗಿಲ್ಲ, ನಮ್ಮ ಜೊತೆಗೆ ಇದ್ದಾರೆ ಬೇರೆ ದೇಶಕ್ಕೆ ಶೂಟಿಂಗ್ ಆಗಿ ತೆರಳಿದ್ದಾರೆ ಅಷ್ಟೇ, ಮತ್ತೆ ಬಂದೇ ಬರುತ್ತಾರೆ ಎನ್ನುವ ಸ್ಟ್ರಾಂಗ್ ಫೀಲಿಂಗ್ ಎಲ್ಲರಲ್ಲಿಯೂ ಹೆಚ್ಚು ಕಾಡುತ್ತಿದೆ. ಆದರೆ ಏನು ಮಾಡುವುದು ವಿಧಿಯಾಟ, ಅಪ್ಪು ಅವರು ಇದೀಗ ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಅಪ್ಪು ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೆ ಉಳಿದಿದ್ದಾರೆ.

ಹಾಗೆ ದೇವರ ರೂಪದಲ್ಲಿ ಅಪ್ಪು ಅವರನ್ನು ಅವರ ಪ್ರೀತಿಯ ಅಭಿಮಾನಿ ದೇವರುಗಳು ಇಂದಿಗೂ ತಪ್ಪದೇ ಪೂಜೆ ಮಾಡುತ್ತಾರೆ. ಹೌದು ಎಲ್ಲರಿಗೂ ಗೊತ್ತಿರುವಂತೆ ಮೇಘನಾ ಚಿರಂಜೀವಿ ಸರ್ಜಾ ಅಗಲಿದ ಮೇಲೆ ಅವರ ತವರು ಮನೆ ಸೇರಿದರು. ಅದೇ ರೀತಿ ಇದೀಗ ಅಪ್ಪು ಇಲ್ಲದ ಬಳಿಕ ಅಶ್ವಿನಿ ಪುನೀತ್ ಅವರು ತವರು ಮನೆ ಸೇರಿದ್ದಾರ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೌದು ಇದು ಶುದ್ಧ ಸುಳ್ಳು. ಅಪ್ಪು ಸಮಾಧಿಗೆ ತಿಂಗಳ ಪೂಜೆ ಸಲ್ಲಿಸುವಾಗ ಅಶ್ವಿನಿ ಪುನೀತ್ ಅವರ ತಮ್ಮ ತಂಗಿ ಬಂದಿದ್ದರು. ಆಗ ಪೂಜೆ ಸಲ್ಲಿಸಿದ ಬಳಿಕ ಇಲ್ಲಿದ್ದರೆ ಅಕ್ಕ ತೀರಾ ನೋವಾ ಅನುಭವಿಸಬಹುದು, ಸ್ವಲ್ಪ ವಾತಾವರಣ ಚೇಂಜ್ ಆಗಲಿ ಎಂದು ಅಕ್ಕನಿಗೆ ತವರು ಮನೆಗೆ ಬರುವಂತೆ ಹೇಳಿದ್ದರು ಎನ್ನಲಾಗಿದೆ.  

ಆದ್ರೆ ಅಶ್ವಿನಿ (Aswini Puneeth) ಅವರು ಅದನ್ನು ತಿರಸ್ಕರಿಸಿ, ಪುನೀತ್ ಅವರು ನಿಭಾಯಿಸುತ್ತಿದ್ದ ಸಾಕಷ್ಟು ಕೆಲಸಗಳು ನಿಂತುಹೋಗುತ್ತವೆ, ನಾನು ಬರುವುದಿಲ್ಲ. ಇಲ್ಲಿಯೇ ಇದ್ದು ಅವರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತೇನೆ. ಹಾಗೆ ಇಲ್ಲಿ ಎಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇಲ್ಲಿ ನನಗೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದರೆಂದು ಈ ವಿಡಿಯೋ ಮೂಲಕ ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...(Video credit : view zone kannada )