ಅಪ್ಪನೊಂದಿಗೆ ಫೈಟಿಂಗ್ ಮಾಡುತ್ತಿರುವ ಯಥರ್ವ್ ಯಶ್..! ಕೆಜಿಎಫ್ 2 ಬಳಿಕ ಮತ್ತೆ ಬಾರಿ ವೈರಲ್

By Infoflick Correspondent

Updated:Tuesday, April 19, 2022, 10:37[IST]

ಅಪ್ಪನೊಂದಿಗೆ   ಫೈಟಿಂಗ್ ಮಾಡುತ್ತಿರುವ ಯಥರ್ವ್ ಯಶ್..! ಕೆಜಿಎಫ್ 2 ಬಳಿಕ ಮತ್ತೆ ಬಾರಿ ವೈರಲ್

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ ಇದೀಗ ಹೆಚ್ಚು ಖುಷಿಯಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಕೆಜಿಎಫ್ ಚಾಪ್ಟರ್ ಟು ಸಿನಿಮಾ ನಿರೀಕ್ಷೆಗೂ ಮೀರಿ ಮೂಡಿಬಂದಿದೆ. ಇಡೀ ಇಂಡಿಯಾದಲ್ಲಿ ಮಾತ್ರವಲ್ಲದೆ ಬೇರೆ  ಬೇರೆ ದೇಶದಲ್ಲಿಯೂ ಕೂಡ ಕೆಜಿಎಫ್ 2 ಹಾವಳಿ ಹೆಚ್ಚು ಜೋರಾಗಿದೆ. ಕೆಜಿಎಫ್ ಚಾಪ್ಟರ್ 2 ಒಂದು ಕಮರ್ಷಿಯಲ್ ಸಿನಿಮಾ ಆಗಿದ್ದು, ಈ ಮುಂಚೆಯೇ ಕೆಜಿಎಫ್ ಭಾಗ ಒಂದು ಬಿಡುಗಡೆಯಾಗಿದ್ದು ಎಲ್ಲರೂ ಇದರ ಸಿಕ್ವೆನ್ಸ್ ಬಗ್ಗೆ ಕೆಜಿಎಫ್ ಭಾಗ-2 ಯಾವ ರೀತಿ ಮೂಡಿಬರಬಹುದು ಎಂದು ಇಡೀ ಭಾರತ ಸಿನಿಪ್ರಿಯರು ತುಂಬಾನೇ ಕಾತುರದಿಂದ ಕಾದಿದ್ದರು. ಅದಕ್ಕೆ ತಕ್ಕಂತೆ ಕೆಜಿಎಫ್ ಚಾಪ್ಟರ್ ಟು ಈಗ ಭರ್ಜರಿಯಾಗಿ ಒಂದು ಚಂಡಮಾರುತದ ರೀತಿ ಮೂಡಿಬಂದಿದೆ.

ಸಿನಿಮಾದ ಎಲಿವೇಶನ್, ಸ್ಟೋರಿ, ಸ್ಕ್ರೀನ್ ಪ್ಲೇ, ಮ್ಯೂಸಿಕ್ ಹಾಗೆ ಎಡಿಟಿಂಗ್ ಕ್ಯಾಮರಾವರ್ಕ್ ಎಲ್ಲಾ ಅದ್ಭುತವಾಗಿದೆ. ಒಂದು ಹಾಲಿವುಡ್ ಮುವಿ ರೆಂಜಿಗೆ ಇದೆ ಎನ್ನಬಹುದು. ಹೌದು ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಯಶ್ ಅವರ ಹಾವಳಿ ಜೋರಾಗಿದೆ ಎಂದು ಹೇಳಬಹುದು. ಎಲ್ಲಿ ನೋಡಿದರೂ ರಾಕಿ ಭಾಯ್ ಅಭಿನಯಕ್ಕೆ ಫಿದಾ ಆದ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹೌದು ಕೆಜಿಎಫ್ 2 ಬಿಡುಗಡೆ ಮುನ್ನ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗನೊಟ್ಟಿಗೆ ಕಳೆದ ಒಂದು ವಿಡಿಯೋ ಶೇರ್ ಆಗಿತ್ತು. ಅದು ತುಂಬಾನೇ ವೈರಲ್ ಆಗಿತ್ತು. ಹೌದು ಅದೇ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.    

ತಂದೆಯ ಜೊತೆ ಯಥರ್ವ ಯಶ್ ಜಗಳ ಮಾಡುತ್ತಿರುವ ಈ ವಿಡಿಯೋ ಹೆಚ್ಚು ಕ್ಯೂಟಾಗಿದೆ ಎಂದು ಹೇಳಬಹುದು. ನೀವು ಕೂಡ ಈ ಕ್ಯೂಟ್ ವೀಡಿಯೋ ನೋಡಿ. ಇಷ್ಟವಾದರೆ ಶೇರ್ ಮಾಡಿ. ಜೊತೆಗೆ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿ ರಂಜಿಸಿ ಧನ್ಯವಾದಗಳು..