ಯೂಟ್ಯೂಬರ್ ಗಳ ಹಾವಳಿ ಹೆಚ್ಚಾಯ್ತು: ಸುಳ್ಳು ಸುದ್ದಿ ಹರಡುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಅವಿನಾಶ್
Updated:Thursday, April 28, 2022, 18:02[IST]

ಇತ್ತೀಚೆಗೆ ಯೂಟ್ಯೂಬ್ ಗಳು ಹೆಚ್ಚಾಗಿವೆ. ಹಲವರು ತಮ್ಮ ತಮ್ಮ ಯೂಟ್ಯೂಬ್ ಚಾನೆಲ್ ಗಳನ್ನು ತೆರೆದಿದ್ದಾರೆ. ಅಡುಗೆ, ಮೇಕಪ್, ಟಿಪ್ಸ್, ಅದು ಇದು ಅಂತ ಹಲವು ಮಾಹಿತಿಗಳನ್ನು ಯೂಟ್ಯೂಬ್ ಚಾನೆಲ್ ನಲ್ಲಿ ನೀಡುತ್ತಿದ್ದಾರೆ. ಎಲ್ಲರೂ ತಮಗೆ ತೋಚಿದ ಸುದ್ದುಗಳನ್ನು ಹಂಚುತ್ತಿದ್ದಾರೆ. ಆದರೆ ಕೆಲ ಯೂಟ್ಯೂಬ್ ಚಾನೆಲ್ ಗಳಿವೆ. ಅದರಲ್ಲಿ ಸುದ್ದಿ ಎಷ್ಟು ಸತ್ಯ ಎಂದು ಪರಾಮರ್ಶಿಸದೇ ಪ್ರಸಾರ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಕೆಲ ಯೂಟ್ಯೂಬರ್ ಗಳಿ ಫೇಮಸ್ ನಟ-ನಟಿಯರಿಗೆ ಏನೋ ಅನಾಹುತವಾಗಿ ಬಿಟ್ಟಿದೆ. ನಟ-ನಟಿಯರ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಆ ನಟ ತೀರಿಕೊಂಡಿದ್ದಾರೆ. ಈ ನಟಿಯ ಸ್ಥಿತಿ ಗಂಭೀರವಾಗಿದೆ ಎಂದು ಇಲ್ಲ ಸಲ್ಲದ ವೀಡಿಯೋಗಳನ್ನು ಮಾಡಿ ಹರಿ ಬಿಡುತ್ತಿದ್ದಾರೆ. ನಟ-ನಟಿಯರ ಜೀವನದ ಬಗ್ಗೆ ಕೆಟ್ಟ ಕೆಟ್ಟ ಸುದ್ದಿಗಳನ್ನು ಹಾಕುತ್ತಿದ್ದು, ಇದರಿಂದ ಸಮಸ್ಯೆಗಳು ಎದುರಾಗುತ್ತಿವೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ನಟ ಅವಿನಾಶ್ ಯೂಟ್ಯೂಬರ್ ಮೇಲೆ ಕಿಡಿ ಕಾರಿದ್ದಾರೆ.
ಅವಿನಾಶ್ ಹಾಗೂ ಪತ್ನಿ ಮಾಳವಿಕಾ ಪುತ್ರನಿಗೆ ಗಂಭಿರವಾದ ಖಾಯಿಲೆ ಇದೆ ಎಂದು ಯೂಟ್ಯೂಬರ್ ಒಬ್ಬರು ವೀಡಿಯೋ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದೆ, ಅವಿನಾಶ್ ಇನ್ನಿಲ್ಲ ಎಂದು ಕೂಡ ವೀಡಿಯೋ ಮಾಡಿದ್ದಾರೆ ಇದನ್ನು ನೋಡಿದ ಮಾಳವಿಕಾ ಅವರು ಗಾಬರಿಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವಿನಾಶ್ ಅವರು ನಟಿಸುತ್ತಿದ್ದ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಶಾಕ್ ಆಗಿದ್ದಾರೆ. ಅವಿನಾಶ್ ಅವರಿಗೆ ಕರೆ ಮಾಡಿದಾಗ ವಿಚಾರ ತಿಳಿದ ಅವರು ಈಗ ಯೂಟ್ಯೂಬರ್ ಮೇಲೆ ಕಿಡಿಕಾರಿದ್ದಾರಂತೆ. ಹೀಗೆಲ್ಲಾ ಮಾಡುವುದು ಎಷ್ಟು ಸರಿ. ನಾನು ಗಟ್ಟಿ ಮುಟ್ಟಾಗೇ ಇದ್ದೀನಿ. ಸುಖಾ ಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡವಬೇಡಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.