ಖ್ಯಾತ ರಿಯಾಲಿಟಿ ಶೋ ರಾಜ ರಾಣಿಯಿಂದ ಹೊರ ನಡೆದ ಕಪಲ್ಸ್ ಜೋಡಿ..! ಕಾರಣ ಇಲ್ಲಿದೆ ನೋಡಿ

Updated: Thursday, October 14, 2021, 14:34 [IST]

ಖ್ಯಾತ ರಿಯಾಲಿಟಿ ಶೋ ರಾಜ ರಾಣಿಯಿಂದ ಹೊರ ನಡೆದ ಕಪಲ್ಸ್ ಜೋಡಿ..! ಕಾರಣ ಇಲ್ಲಿದೆ ನೋಡಿ

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜ ರಾಣಿ ಕಾರ್ಯಕ್ರಮ ತುಂಬಾನೇ ಫೇಮಸ್ ಆಗಿದೆ. ಜೊತೆಗೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗೂ ತಾರಾ ಅವರ ನೇತೃತ್ವದಲ್ಲಿ ಮೂಡಿಬರುತ್ತಿರುವ ಈ ರಾಜ ರಾಣಿ ಕಾರ್ಯಕ್ರಮ ನಿರೀಕ್ಷೆಗೂ ಹೆಚ್ಚು ಇಷ್ಟವಾಗುತ್ತಿದೆ. ಹೌದು ರಿಯಲ್ ಜೋಡಿಗಳ ರಿಯಲ್ ಗೇಮ್ ಶೋ ಇದಾಗಿದ್ದು ಪ್ರತಿದಿನ ನೀಡುವ ಕೆಲ ಪ್ರಕ್ರಿಯೆ ತುಂಬಾ ಇಂಟರೆಸ್ಟಿಂಗ್ ಆಗಿರುತ್ತವೆ.

ಹಾಗೆ ಜೀವನದಲ್ಲಿ ಹೆಣ್ಣುಮಕ್ಕಳು ಮದುವೆಯಾದ ಮೇಲೆ ಯಾವ ರೀತಿ ಕಷ್ಟಪಡುತ್ತಾರೆ, ಅಂತಹ ಸೂಕ್ಷ್ಮ ವಿಚಾರಗಳನ್ನು ಎಲ್ಲರಿಗೂ ಪರಿಚಿತ ಮಾಡಿಸುವ ಕಾರ್ಯಕ್ರಮ ಆಗಿದೆ. ರಾಜ ರಾಣಿ ಕಾರ್ಯಕ್ರಮದಿಂದ ಈಗಾಗಲೇ ರಾಜು ತಾಳಿಕೋಟೆ ಜೋಡಿ ಹೊರಬಿದ್ದಿದೆ. ಇಬ್ಬರು ಹೆಂಡತಿಯರನ್ನು ಮದುವೆಯಾದರೂ ರಾಜು ತಾಳಿಕೋಟೆ ಅವರು ತುಂಬಾನೇ ಸೂಪರಾಗಿ ಲೈಫ್ ಎಂಜಾಯ್ ಮಾಡುತ್ತಿದ್ದರು. ಈ ಜೋಡಿ ಎಂದರೆ ತಾರಾ ಅವರಿಗೆ ತುಂಬಾನೇ ಅಚ್ಚುಮೆಚ್ಚಾಗಿತ್ತು. ಹೀಗಿರುವಾಗ ನಟ ರಾಜ ತಾಳಿಕೋಟೆ ಅವರು ಎರಡು ವಾರದಿಂದ ರಾಜ ರಾಣಿ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ..

ಅವರ ವೈಯಕ್ತಿಕ ಕಾರಣದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಜೊತೆಗೆ ಇನ್ನೊಂದು ಜೋಡಿ ಇದೀಗ ಹೊರಬಿದ್ದಿದ್ದು, ಬಿಗ್ಬಾಸ್ ಅಯ್ಯಪ್ಪ ಹಾಗೂ ನಟಿ ಅನು ಸಹ ವೈಯಕ್ತಿಕ ಕಾರಣದಿಂದ ರಾಜಾರಾಣಿ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ. ಹೌದು ಈ ವಿಚಾರವನ್ನು ನಿರೂಪಕಿ ಅನುಪಮಾ ಅವರು ತಿಳಿಸಿದ್ದು, ಎಲಿಮಿನೇಟ್ ಎಂದು ಇದನ್ನು ಪರಿಗಣಿಸಲಾಗಿದೆ. ಇನ್ನುಳಿದ 8 ಜೋಡಿಗಳು ರಾಜ ರಾಣಿ ಕಾರ್ಯಕ್ರಮದಲ್ಲಿ ಮುಂದುವರೆದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದ....(ವಿಡಿಯೋ ಕೃಪೆ :   ಸ್ಯಾಂಡಲ್ ವುಡ್ ಕನ್ನಡ  )