ಪಾಪ ಹೆಚ್ಚಾಗಿದೆ, ಕೈ ಬಳೆ ಓಡಿತ್ತಾವು ಎಂದ ಬಬಲಾದಿ ಮಠದ ಮುತ್ಯಾ..! ಮುಂದೆ ಕಾದಿದೆ ಗಂಡಾತರ ಭವಿಷ್ಯ ಕೇಳಿ ಶಾಕ್ ಆದ ಜನ

By Infoflick Correspondent

Updated:Saturday, March 5, 2022, 18:16[IST]

ಪಾಪ ಹೆಚ್ಚಾಗಿದೆ, ಕೈ ಬಳೆ ಓಡಿತ್ತಾವು ಎಂದ ಬಬಲಾದಿ ಮಠದ ಮುತ್ಯಾ..! ಮುಂದೆ ಕಾದಿದೆ ಗಂಡಾತರ  ಭವಿಷ್ಯ ಕೇಳಿ ಶಾಕ್ ಆದ ಜನ

ದೇಶದಲ್ಲಿ ಜನರು ಕೆಲವೊಂದಿಷ್ಟು ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಹಾಗೆ ಕೆಲವೊಂದಿಷ್ಟು ವಿಚಾರಗಳನ್ನು ಇಂದಿಗೂ ಕೂಡ ಹಾಗೆ ಪಾಲಿಸುತ್ತಾರೆ. ಜೊತೆಗೆ ಅವರು ನಂಬಿರುವ ದೇವರುಗಳನ್ನು ಜೊತೆಗೆ ಕೆಲ ಸ್ವಾಮೀಜಿಗಳು ಹೇಳುವ ಭವಿಷ್ಯವನ್ನು ಕೂಡ ಹಾಗೆಯೇ ನಂಬುತ್ತಾರೆ. ಇದೀಗ ಹೊಳೆ ಬಬಲಾದಿ ಸದಾಶಿವ ಸ್ವಾಮೀಜಿ ಮಠದಲ್ಲಿ ಇತ್ತೀಚಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ನಡೆದ ಮೂರನೇ ದಿನ ಶುಕ್ರವಾರದ ಜಾತ್ರೆಯಲ್ಲಿ ಒಂದು ಭವಿಷ್ಯವನ್ನು ನುಡಿದಿದ್ದಾರೆ. ಹೌದು ಪೀಠಾಧಿಪತಿ ಸಿದ್ದರಾಮಯ್ಯ ಹೊಳಿಮಠ ಮುತ್ಯ ಅವರು 2022ನೇ ವರ್ಷದ ಕಾಲಜ್ಞಾನ ಭವಿಷ್ಯ ನುಡಿದು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಹೊಳಿಮಠ ಅವರು ನುಡಿದ ಭವಿಷ್ಯ ಈ ವರ್ಷದ ಕಾಲಜ್ಞಾನ ಹೀಗಿದೆ ನೋಡಿ..

ಏಪ್ರಿಲ್‌ನಿಂದ ಆರಂಭವಾಗಿ ಆಗಸ್ಟ್‌ ಅಂತ್ಯದಲ್ಲಿ ಈ ಪಾಪ ಎನ್ನುವುದು ಕೈ ಮೀರಿ ಹೋಗುತ್ತದಂತೆ. ಹಾಗಾಗಿ ಕೈ ಬಳೆ ಒಡೆಯುತಾವು. ಕಣ್ಣೀರು ಬೀಳುತ್ತಾವು. ಕೀಟ ನಾಶವಾಗಿ ಹೋಗುತ್ತದೆ. ಈ ಗಾಳಿ ಸುನಾಮೀ ಆಗಬಹುದು. ಏಳಾಣೆ ಮಳೆ ಬಿದ್ದು ಎಂಟಾಣೆ ಬೆಳಿ ಬರುತ್ತದೆ. ಹಾಗೆ ಅತ್ತ ಬಲಿಷ್ಠ ರಾಷ್ಟ್ರಗಳಾದ ಯುರೋಪ್, ಅಮೆರಿಕ, ಇರಾನ್, ಹಾಗೂ ರಷ್ಯಾದಲ್ಲಿ ಯುದ್ಧ ಆರಂಭವಾಗಿ ಹೆಚ್ಚಾಗಲಿದೆ. ಹಾಗೆ ನಾನೇ ಮುಂದೆ ತಾನೇ ಮುಂದೆ ಎಂದ ಈ ರಾಷ್ಟ್ರಗಳ ನಡುವೆ ಹೆಚ್ಚು ಅಸೂಯೆ ಕಲಹ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಎಂದು ಮಾಧ್ಯಮ ಮೂಲಕ ಈ ಭವಿಷ್ಯ ತಿಳಿದುಬಂದಿದೆ...

ಹೌದು ಕೈ ಬಳೆ ಒಡೆದಾವು, ಕಣ್ಣೀರು ಉದುರ್ಯಾವು  ಎಂಬ ಒಳರ್ಥದೊಂದಿಗೆ ಈ ರೀತಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಗಾರಿನ ಮಳೆಯ ಮೂಲಕ ಫಲ ಬರುತ್ತೋ, ಅಥವಾ ಹಿಂಗಾರಿಯ ಮೂಲಕ ಮಧ್ಯಮ ಬರುತ್ತದೆಯೋ ಗೊತ್ತಿಲ್ಲ, ಆದ್ರೆ ಫಲ ಸಿಗುತ್ತದೆ. ಜೊತೆಗೆ ಬರವೂ ಕೂಡ ಹೆಚ್ಚು ಇರಲಿದೆ ಎಂದಿದ್ದಾರೆ. ಇನ್ನೂ ಹಲವು ಕಡೆ ತಂತ್ರ ಅತಂತ್ರವಾಗಲಿದೆ. ಈ ಜಗತ್ತಿನಲ್ಲಿ ಪಾಪ ಹೆಚ್ಚಾಗಿ ಕಲಿಪುರುಷನ ಆಟ ತುಂಬಾ ಭೀಕರವಾಗಲಿದೆ. ಅತೀವೃಷ್ಠಿ ಅನಾವೃಷ್ಠಿ ಹೆಚ್ಚಾಗುತೈತಿ. ಹಾಗೆ ಶಾಂತಿ ಸೌಹಾರ್ದತೆ ಕೊರತೆ ದೇಶದಲ್ಲಿರುತ್ತದೆ. ಪಡುವಣ ದಿಕ್ಕಿಗೆ ತುಂಬಾ ಕಷ್ಟ (ತ್ರಾಸ್​ ) ಇರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ...   

ಹೌದು ಇಲ್ಲಿಯ ಜನರು ಶ್ರೀಮಠದಲ್ಲಿ ನುಡಿಯುವ ಕಾಲಜ್ಞಾನದ ಭವಿಷ್ಯ ಹಾಗೂ ನುಡಿಯುವ ಒಂದೊಂದು ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಆಗುವುದನ್ನು ನಂಬಿದ್ದಾರೆ. ಅದು ಆಗುತ್ತದೆ ಕೂಡ ಎಂದು ಹೇಳುತ್ತಾರೆ. ಈ ಭವಿಷ್ಯ ಕೇಳಲು ಉತ್ತರ ಕರ್ನಾಟಕ ಭಾಗದ ಸಾಕಷ್ಟು  ಜನರು ಕಾತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ವರ್ಷ ನುಡಿದ ಕಾಲಜ್ಞಾನಿ ಭವಿಷ್ಯ ಮೊನ್ನೆ ನಿಜವಾಗಿದೆ. ಹೌದು ಉಕ್ರೇನ್ ರಷ್ಯಾ ನಡುವೆ ಯುದ್ಧ ಆರಂಭವಾಗಿದ್ದು ಚಿಕ್ಕಯ್ಯಪ್ಪನ ಕಾಲಜ್ಞಾನದ ಹೊತ್ತಿಗೆ ಒಳಗಿರುವ ಭವಿಷ್ಯವನ್ನೇ ಪೀಠಾಧಿಪತಿಗಳು ಈ ವರ್ಷದ ಕಾಲಜ್ಞಾನ ಭವಿಷ್ಯವಾಗಿ ನುಡಿದು ಓದಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ...