ಪುನೀತ್ ಅವರಿಗೆ ನೀಡಿದ್ದ ಬಸವಶ್ರೀ ಪ್ರಶಸ್ತಿ ಹಿಂದಕ್ಕೆ..! ಅಸಲಿಗೆ ಮುರುಗ ಮಠದಲ್ಲಿ ನಡದದ್ದೇನು..?

By Infoflick Correspondent

Updated:Monday, September 12, 2022, 15:14[IST]

ಪುನೀತ್ ಅವರಿಗೆ ನೀಡಿದ್ದ ಬಸವಶ್ರೀ ಪ್ರಶಸ್ತಿ ಹಿಂದಕ್ಕೆ..! ಅಸಲಿಗೆ ಮುರುಗ ಮಠದಲ್ಲಿ ನಡದದ್ದೇನು..?

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆಗೆ ಇಲ್ಲ. ದೈಹಿಕವಾಗಿ ದೂರವಾಗಿದ್ದಾರೆ ಆದರೆ ಅವರನ್ನು ಅಭಿಮಾನಿಗಳು ಇಂದಿಗೂ ಮುಂದೆ ಎಂದಿಗೂ ಸಹ ಮರೆಯುವುದಿಲ್ಲ. ಅವರು ದೈಹಿಕವಾಗಿ ನಮ್ಮಿಂದ ಅಗಲಿರಬಹುದು. ಆದರೆ ಆಂತರಿಕವಾಗಿ ನಮ್ಮ ಹೃದಯದಲ್ಲಿ ನಮ್ಮ ಜೊತೆಗೆ ಅವರು ಸದಾ ನೆಲೆಸಿರುತ್ತಾರೆ. ಸೂರ್ಯ ಚಂದ್ರ ಇರುವವರೆಗೂ ಪುನೀತ್ ಅವರ ನೆನಪು ಇದ್ದೇ ಇರುತ್ತದೆ. ಅವರು ಸಮಾಜಕ್ಕೆ ಮಾಡಿದ ಸಹಾಯ, ಲೆಕ್ಕ ಇಲ್ಲದಷ್ಟು ಮಾಡಿದ ಪುಣ್ಯದ ಕೆಲಸಗಳು, ಹಾಗೆ ಸಣ್ಣ ಮಕ್ಕಳ ವಿದ್ಯಾಭ್ಯಾಸ, ವೃದ್ಧಾಶ್ರಮ, ಅನಾಥಾಶ್ರಮ, ಹಾಗೆ ಕಷ್ಟ ಎಂದವರಿಗೆ ಮಿಡಿಯುತ್ತಿದ್ದ ಅವರ ಮನಸ್ಸು ಹೃದಯ ಎಂದಿಗೂ ಶಾಶ್ವತ..ಪುನೀತ್ ಅವರು ಸಿನಿಮಾರಂಗದಲ್ಲಿ ಮಾತ್ರ ಅಲ್ಲದೆ ಪ್ರತಿಯೊಬ್ಬರಿಗೂ ಕೂಡ ತುಂಬಾ ಹತ್ತಿರ ಇದ್ದಂತಹ ವ್ಯಕ್ತಿ.   

ಈ ಸಿನಿಮಾರಂಗದಲ್ಲಿ ದೊಡ್ಡ ಸ್ಟಾರ್ ನಟನ ಮಗನಾಗಿ ಹುಟ್ಟಿ ದೊಡ್ಡದಾಗಿ ಅಭಿಮಾನಿಗಳ ಗಳಿಸಿ ಮೆರೆದರೂ ಕೂಡ ಎಂದಿಗೂ ಅಹಂ ತೋರಿಸಿದ ವ್ಯಕ್ತಿಯೇ ಅಲ್ಲ. ಅಂತಹ ವ್ಯಕ್ತಿ ಇದೀಗ ನಮ್ಮ ಜೊತೆಗೆ ಇಲ್ಲದಿರುವುದು ವಿಷಾದನೀಯ. ನಟ ಪುನೀತ್ ರಾಜಕುಮಾರ್ ಅವರಿಗೆ ಕಳೆದ ಮೂರು ತಿಂಗಳ ಹಿಂದೆ ಚಿತ್ರದುರ್ಗದ ಖ್ಯಾತ ಮಠ ಆದ ಮುರುಗ ಮಠದಲ್ಲಿ ಬಸವೇಶ್ವರ ಹಬ್ಬದ ಪ್ರಯುಕ್ತ ಮರಣೋತ್ತರ ಬಸವ ಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ಅದು ನಿಮಗೂ ಗೊತ್ತಿದೆ ಅಂದುಕೊಂಡಿದ್ದೇನೆ. ಪುನೀತ್ ಅವರಿಗೆ ಬಸವನ ಹಬ್ಬದ ದಿನದಂದೇ ಒಂದು ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುನೀತ್ ಅವರ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಮರಣೋತ್ತರ ಬಸವ ಶ್ರೀ ಪ್ರಶಸ್ತಿಯ ಪಡೆದುಕೊಂಡಿದ್ದರು.

ಆದರೆ ಇದೀಗ ಮುರುಗಮಠದ ಸ್ವಾಮೀಜಿಗಳ ಮೇಲೆ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಆ ಪ್ರಶಸ್ತಿಯನ್ನು ಹಿಂದಕ್ಕೆ ತಿರುಗಿಸಿ ಅಶ್ವಿನಿ ಪುನೀತ್ ಮೇಡಂ ಅವರೇ ಎಂದು ನಟ ಪುನೀತ್ ಅಭಿಮಾನಿಗಳು ಮನವಿ ಮಾಡುತ್ತಿದ್ದಾರಂತೆ.  ಹಾಗೆ ಬಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಮುರುಗ ಮಠದ ಶ್ರೀಗಳ ಮೇಲೆ ಈಗ ಕೇಳಿ ಬರುತ್ತಿರುವ ಕೆಲ ಆರೋಪಗಳ ಜೊತೆಗೆನೆ ಇದೀಗ ಮುರುಗ ಮಠದ ಮೇಲೆಯೇ ಜನರು ನಂಬಿಕೆಯನ್ನು ಸಹ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಇಲ್ಲಿದೆ ನೋಡಿ ವಿಡಿಯೋ. ಹಾಗೆ ನಿಮ್ಮ ಪ್ರಕಾರ ಪುನೀತ್ ಅವರಿಗೆ ನೀಡಿರುವ ಬಸವಶ್ರೀ ಪ್ರಶಸ್ತಿಯನ್ನು ಅಶ್ವಿನಿ ಅಪ್ಪು ಅವರು ಹಿಂತಿರುಗಿಸಬೇಕಾ ಅಥವಾ ಬೇಡವ ಎಂದು ನೀವು ಕಮೆಂಟ್ ಮಾಡಿ, ಮತ್ತು ಅಪ್ಪು ಅವರ ಬಗ್ಗೆ ನಿಮ್ಮೆರಡು ಮಾತುಗಳಲ್ಲಿ ತಿಳಿಸಿ ಧನ್ಯವಾದಗಳು...