Sudeep : ಬಂಗಾಳದಲ್ಲೂ ಸದ್ದು ಮಾಡುತ್ತಿದೆ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡು

By Infoflick Correspondent

Updated:Saturday, June 18, 2022, 08:34[IST]

Sudeep :   ಬಂಗಾಳದಲ್ಲೂ ಸದ್ದು ಮಾಡುತ್ತಿದೆ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡು

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಸಾಕಷ್ಟು ವಿಚಾರಗಳಿಂದಲೇ ಅಭಿಮಾನಿಗಳನ್ನು ಅಟ್ರಾಕ್ಟ್ ಮಾಡುತ್ತಿದೆ. ಕಳೆದ ತಿಂಗಳಷ್ಟೇ ರಿಲೀಸ್ ಆಗಿರುವ ರಾ ರಾ ರಕ್ಕಮ್ಮಾ ಹಾಡು ಸಿಕ್ಕಾಪಟ್ಟೆ  ಮೋಡಿ ಮಾಡಿದೆ. ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ರಕ್ಕಮ್ಮಾ ಹಾಡಿನ ಫೀವರ್ ಜೋರಾಗಿದೆ. ಈ ಹಾಡಿಗೆ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಕೂಡ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋಗಳು ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ಕಮಾಲ್ ಮಾಡಿವೆ. 

ವಿಕ್ರಾಂತ್ ರೋಣ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದೆ. ಈ ಚಿತ್ರದಲ್ಲಿ ಸುದೀಪ್ ಮತ್ತು ಜಾಕ್ವೆಲಿನ್ ನಟನೆಯ ರಾ ರಾ ರಕ್ಕಮ್ಮಾ ಹಾಡು ರಿಲೀಸ್ ಆಗಿ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದಿದೆ. ಹಾಡಷ್ಟೇ ಟ್ರೆಂಡ್ ಆಗದೇ, ಇದರ ರೀಲ್ಸ್ ಕೂಡ ಸಖತ್ ಟ್ರೆಂಡ್ ಆಗಿದೆ. ಅಭಿಮಾನಿಗಳಷ್ಟೇ ಅಲ್ಲದೇ, ಇಡೀ ಚಿತ್ರರಂಗವೇ ಈ ಹಾಡಿಗೆ ಫಿದಾ ಆಗಿದೆ. ಇನ್ನು ಸಿನಿ ಸೆಲೆಬ್ರೆಟಿಗಳು ಕೂಡ ರಾ ರಾ ರಕ್ಕಮ್ಮ ಹಾಡಿಗೆ ಜಬರ್ದಸ್ತ್ ಆಗಿಯೇ ಸ್ಟೆಪ್ ಹಾಕಿದ್ದಾರೆ. ನಟಿಯರು ಕುಣಿದು ಕುಪ್ಪಳಿಸಿರುವ ವೀಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.    

ಹಾಡು ರಿಲೀಸ್ ಆಗಿ ತಿಂಗಳಾಗುತ್ತಾ ಬಂದರೂ ಇದರ ಹವಾ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಈಗಲೂ ಎಲ್ಲರೂ ಈ ಹಾಡಿಗೆ ಕುಣಿಸು ಕುಪ್ಪಳಿಸುತ್ತಿದ್ದಾರೆ. ಇದೀಗ ಬಂಗಾಳ ಮೂಲದ ಯುವತಿ ಒಬ್ಬಳು ಹೆಜ್ಜೆ ಹಾಕಿದ್ದು, ಸಖತ್ ವೈರಲ್ ಆಗಿದೆ. ಡ್ಯಾನ್ಸ್ ವಿತ್ ಮಿ ಲುನಾ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಓಪನ್ ಮಾಡಿರುವ ಈ ಹುಡುಗಿ ಹಲವು ಹಾಡುಗಳಿಗೆ ಕುಣಿದಿದ್ದಾಳೆ. ಈಕೆ ಇದೀಗ ರಾ ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಸಖತ್ ಫೇಮಸ್ ಆಗಿದೆ. ಸೆಲಬ್ರಿಟಿಗಳು ಕೂಡ ಈಕೆಯ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಬಂಗಾಳ ಮೂಲದ ಸಯಾಂತನಿ ಘೋಷ್ ಎಂಬ ಹುಡುಗಿ ಲುನಾ ಹೆಸರಿನಲೊಲಿ ಯೂಟ್ಯೂಬ್ ಚಾನೆಲ್ ತೆರದಿದ್ದಾ