ಐದು ವರ್ಷಗಳ ನಂತರ ಮೌನ ಮುರಿದ ಭಾವನಾ: ಅಷ್ಟಕ್ಕೂ ಇವರ ಬಾಳಲ್ಲಿ ಅಂತಹದ್ದೇನಾಗಿತ್ತು..?

By Infoflick Correspondent

Updated:Friday, January 14, 2022, 08:42[IST]

ಐದು ವರ್ಷಗಳ ನಂತರ ಮೌನ ಮುರಿದ ಭಾವನಾ: ಅಷ್ಟಕ್ಕೂ ಇವರ ಬಾಳಲ್ಲಿ ಅಂತಹದ್ದೇನಾಗಿತ್ತು..?

ಬಹುಭಾಷಾ ನಟಿ ಭಾವನಾ ಮೆನನ್ ಅವರ ಮೂಲ ಹೆಸರು ಕಾರ್ತಿಕಾ ಮೆನನ್. ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಭಾವನಾ ಅವರ ಜೀವನದಲ್ಲಿ ಅದೊಂದು ದಿನ ನಡೆಯಬಾರದ ಘಟನೆ ನಡೆದು ಹೋಗಿತ್ತು. ಫೆಬ್ರವರಿ 2017 ರಲ್ಲಿ ಭಾವನಾ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅಂದು ಏನಾಗಿತ್ತು..? ಈಗ ಹೇಗಿದ್ದಾರೆ ಎಂಬೆಲ್ಲಾ ವಿಚಾರವನ್ನು ನೋಡಿಕೊಂಡು ಬರೋಣ.. 

ಅಂದು ಭಾವನಾ ಮೆನನ್ ಅವರು ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್ ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ಭಾವನಾ ಅವರನ್ನು ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಗ್ಯಾಂಗ್ ಬಲವಂತವಾಗಿ ಆಕೆಯನ್ನು ಕಾರೊಂದಕ್ಕೆ ಹತ್ತಿಸಿ ಎರಡು ಗಂಟೆಗಳ ಕಾಲ ವಾಹನದೊಳಗೆ ಕಿರುಕುಳ ನೀಡಲಾಗಿತ್ತು. ಮಾಲಿವುಡ್ ನಟ ದಿಲೀಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಐದು ವರ್ಷಗಳ ನಂತರ ಭಾವನಾ ಅವರು ಇದೀಗ ಮೌನ ಮುರಿದಿದ್ದಾರೆ. ಬದುಕುಳಿದವರಿಗೆ ಬಲಿಯಾದ ತನ್ನ ಪ್ರಯಾಣದ ಬಗ್ಗೆ ಟಿಪ್ಪಣಿಯನ್ನು ಹಂಚಿಕೊಂಡಿದ್ದು, ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.     

ಮೊದಲ ಬಾರಿಗೆ ಘಟನೆಯ ಬಗ್ಗೆ ಮಾತನಾಡಿದ್ದು ಹೀಗೆ.. ಇದು ಸುಲಭದ ಪ್ರಯಾಣವಾಗಿರಲಿಲ್ಲ. ಬಲಿಪಶುವಾಗುವುದರಿಂದ ಬದುಕುಳಿದವರಾಗುವ ಪ್ರಯಾಣ. ಈಗ 5 ವರ್ಷಗಳಿಂದ, ನನ್ನ ಮೇಲೆ ಮಾಡಿದ ಹಲ್ಲೆಯ ಪ್ರಕರಣದಲ್ಲಿ ನನ್ನ ಹೆಸರು ಮತ್ತು ನನ್ನ ಗುರುತನ್ನು ಹತ್ತಿಕ್ಕಲಾಗಿದೆ. ನಾನು ಅಪರಾಧ ಎಸಗಿದವಳಲ್ಲದಿದ್ದರೂ, ನನ್ನನ್ನು ಅವಮಾನಿಸುವ, ಮೌನಗೊಳಿಸುವ ಮತ್ತು ಪ್ರತ್ಯೇಕಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಮುಂದಾದ ಕೆಲವರನ್ನು ನಾನು ನೋಡಿದ್ದೇನೆ. 

ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುವುದನ್ನು ಕೇಳಿದಾಗ ನಾನು ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಒಬ್ಬಂಟಿಯಾಗಿಲ್ಲ ಎಂಬುದೂ ನನಗೆ ತಿಳಿದಿದೆ. ನ್ಯಾಯ ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಮತ್ತು ಮತ್ತೆ ಯಾರೂ ಅಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವ ಎಲ್ಲರಿಗೂ - ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು. ಎಂದು ಭಾವನಾ ಮೆನನ್ ಅವರು ಬರೆದುಕೊಂಡಿದ್ದಾರೆ.

ಇನ್ನು ನಟಿ ಭಾವನಾ ಅವರು ನಮ್ಮಳ್ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ತಿಲಕಂ, ಜಾಕಿ, ರನ್ ಅವೇ, ಟೋಪಿವಾಲಾ, ಸಾಗರ್ ಅಲಿಯಾಸ್ ಜಾಕಿ ರಿಲೋಡೆಡ್, ಬಸ್ ಕಂಡಕ್ಟರ್, ಯಾರೇ ಕೂಗಾಡಲಿ, ಚೆಸ್, ಬಚ್ಚನ್, ಆರ್ಯ, ಮೈತ್ರಿ, ವಿಷ್ಣುವರ್ಧನ್, ಹೀರೋ, ಮುಕುಂದ ಮುರಾರಿ, ಟಗರು, ಲಾಲಿ ಪಾಪ್, 99, ಶ್ರೀಕೃಷ್ಣ @ ಜೀಮೇಲ್ ಡಾಟ್ ಕಾಮ್, ಚೌಕ, ಭಜರಂಗಿ 2 ಹಾಗೂ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ನಟಿಸಿದ್ದಾರೆ.