ಸಕತ್‌ ವೈರಲ್‌ ಆಗಿದೆ ಕಾಫಿನಾಡಿನ ಸುಂದರಿಯ ಹಾಫ್‌ ಸ್ಯಾರಿ ಡ್ಯಾನ್ಸ್‌

By Infoflick Correspondent

Updated:Monday, July 11, 2022, 14:14[IST]

ಸಕತ್‌ ವೈರಲ್‌ ಆಗಿದೆ ಕಾಫಿನಾಡಿನ ಸುಂದರಿಯ ಹಾಫ್‌ ಸ್ಯಾರಿ ಡ್ಯಾನ್ಸ್‌

ಸೀರೆಯುಟ್ಟು ರೀಲ್ಸ್‌ ಮಾಡಿ ಪಡ್ಡೆ ಹುಗರ ನಿದ್ದೆಗೆಡಿಸಿರುವ ಕಾಫಿನಾಡಿನ ಸುಂದರಿಯ ಹೊಸ ರೀಲ್‌ ಸಕತ್‌ ಹಾಟ್‌ ಆಗಿದೆ. ರೀಲ್ಸ್‌ ಗಳ ಮೂಲಕ ಅದೆಷ್ಟೋ ಜನ ಪ್ರತಿಭೆಗಳು ಮುನ್ನೆಲೆಗೆ ಬಂದಿವೆ. ಇದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್‌ ರೋಣದ ಹಾಡಿಗೆ ಹೆಜ್ಜೆ ಹಾಕಿದ್ದರು. ರಾ ರಾ ರಕ್ಕಮ್ಮ ಎಂದು ಹಾಡಿ ಫಾಲೋವರ್ಸ್‌ ಗಳನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಹಾಫ್‌ ಸ್ಯಾರಿ ಉಟ್ಟು ಸ್ಟೆಪ್‌ ಹಾಕಿದ್ದಾರೆ. 

ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಬಸವರಾಜ್ ಎಂಬುವರು ತಮ್ಮ ಲುಕ್ ಹಾಗೂ ಡ್ಯಾನ್ಸ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದ್ದಾರೆ. ವೈರಲ್ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಭೂಮಿಕಾ ಕನ್ನಡಿಗರ ಮನ ಗೆದ್ದಿದ್ದಾರೆ. ಚಿಕ್ಕಮಗಳೂರಿನ ಭೂಮಿಕಾ ಅವರ ಡ್ಯಾನ್ಸ್‌ ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.  22ರ ಹರೆಯದ ಈ ಬೆಡಗಿಯ ಸೀರೆ ಲುಕ್​​ಗೆ, ಮೈಮಾಟಕ್ಕೆ , ಮಾದಕ ನೋಟಕ್ಕೆ ಫ್ಯಾನ್ಸ್ ಸ್ಟನ್‌ ಆಗಿದ್ದಾರೆ. ಇವರ ಹೆಸರಿನಲ್ಲಿ ಅದಾಗಲೇ ಫ್ಯಾನ್ ಪೇಜ್‌ ಗಳು ಕೂಡ ಹುಟ್ಟಿಕೊಂಡಿವೆ. 

ಇನ್ನು ಭೂಮಿಕಾ ಅವರರ ಇನ್ಸ್ಟಾಗ್ರಾಂ ಅಕೌಂಟ್​ ಅನ್ನು ಬರೋಬ್ಬರು ಐದು ವರೆ ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. ಇದೀಗ ಹಾಫ್‌ ಸ್ಯಾರಿ ಹುಟ್ಟಿರುವ ಈ ಬೆಡಗಿ, ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು ಎಂದು ಪಡ್ಡೆ ಹುಡುಗರ ಮೈ ಜುಮ್‌ ಎನ್ನುವಂತೆ ಕುಣಿದಿದ್ದಾರೆ. ಸೊಂಟ ಬಳುಕಿಸಿ ಕುಣಿದಿರುವ ಈ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇನ್ನು ಭೂಮಿಕಾ ಬಸವರಾಜ್‌ ನೋಡಲು ಯಾವ ಹೀರೋಯಿನ್‌ ಗೂ ಕಡಿಮೆ ಇಲ್ಲ ಎನ್ನುವಷ್ಟು ಸುಂದರವಾಗಿದ್ದಾರೆ.

 
 
 
 
 
 
 
 
 
 
 
 
 
 
 

A post shared by Bhumika (@bhumika_basavaraj)